Header Ads
Header Ads
Breaking News

ಪುತ್ತೂರು:ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹೊರಾಂಗಣದಲ್ಲಿ ಅಯ್ಯಪ್ಪ ಜ್ಯೋತಿ ಕಾರ್ಯಕ್ರಮ.

ಹಿಂದೂಗಳ ಪ್ರಮುಖ ಧಾರ್ಮಿಕ ಕೇಂದ್ರವಾದ ಶಬರಿಮಲೆ ಉಳಿಸುವ ನಿಟ್ಟಿನಲ್ಲಿ ಪುತ್ತೂರು ಶಬರಿಮಲೆ ಕ್ಷೇತ್ರ ಸಂರಕ್ಷಣಾ ಸಮಿತಿ ವತಿಯಿಂದ ಅಯ್ಯಪ್ಪ ಜ್ಯೋತಿ ಕಾರ್ಯಕ್ರಮ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹೊರಾಂಗಣದಲ್ಲಿ ನಡೆಯಿತು.

 

ಕಾರ್ಯಕ್ರಮದ ಮೊದಲು ದೇವಸ್ಥಾನದ ಗರ್ಭಗುಡಿ ಬಳಿ ಸಮಿತಿಯ ಪ್ರಮುಖರ ಉಪಸ್ಥಿತಿಯಲ್ಲಿ ಅರ್ಚಕರಿಂದ ಪ್ರಾರ್ಥನೆ ನಡೆದ ಬಳಿಕ ಒಳಗ್ಗಿನಿಂದ ಜ್ಯೋತಿ ತಂದು ಹೊರಾಂಗಣದಲ್ಲಿ ಇಡಲಾದ ಹಣತೆಗಳನ್ನು ಉರಿಸಲಾಯಿತು. ಬಳಿಕ ಜ್ಯೋತಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಸಮಿತಿಯ ಸದಸ್ಯರುಗಳು ಸಹಿತ ಅಯ್ಯಪ್ಪ ಭಕ್ತಾದಿಗಳು, ಮಹಿಳೆಯರು, ಮಕ್ಕಳು, ಪುರುಷರ ಹೀಗೆ ನೂರಾರು ಮಂದಿ ಹಣತೆ ಉರಿಸಿ ಕೈಯಲ್ಲಿ ಹಿಡಿದು ಸ್ವಾಮೀಯೇ ಶರಣಂ ಅಯ್ಯಪ್ಪ ಘೋಷಣೆಯೊಂದಿಗೆ ರಸ್ತೆಯುದ್ದಕ್ಕೂ ಮೆರವಣಿಗೆ ಮೂಲಕ ತೆರಳಿದರು. ಮೆರವಣಿಗೆ ಮೊದಲು ದೇವಸ್ಥಾನದ ಹೊರಾಂಗಣದಲ್ಲಿ ಮಹಿಳೆಯರಿಂದ ಭಜನೆ ನಡೆಯಿತು.
ಈ ಸಂದರ್ಭದಲ್ಲಿ ಬಜರಂಗದಳ ದಕ್ಷಿಣ ಪ್ರಾಂತೀಯ ಪ್ರಮುಖ್ ಮುರಳೀಕೃಷ್ಣ ಹಸಂತಡ್ಕ ಮಾತನಾಡಿ, ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಹಿಂದೂ ಧರ್ಮ ಪ್ರಸ್ತುತ ಉಳಿದಿದೆ ಎಂದಾದರೆ ಧರ್ಮ ಹಾಗೂ ಧಾರ್ಮಿಕ ನಂಬಿಕೆಗಳ ಆಧಾರದಲ್ಲಿ. ಹಿರಿಯರಿಗೆ ಗೌರವ, ಧಾರ್ಮಿಕ ಮಠ ಮಂದಿರಗಳಲ್ಲಿ ನಂಬಿಕೆ ಇಟ್ಟಿರುವ ಹಿಂದೂ ಧರ್ಮದ ನಂಬಿಕೆಯನ್ನೇ ಸಮಾಜದ ಮೇಲೆ ನಂಬಿಕೆ ಇಲ್ಲದ ಕೆಲವು ವ್ಯಕ್ತಿಗಳು ಪ್ರಶ್ನಿಸಲು ಹೊರಟಿದ್ದಾರೆ. ಈ ಮೂಲಕ ಪ್ರಮುಖ ಧಾರ್ಮಿಕ ಕೇಂದ್ರವಾದ ಶಬರಿಮಲೆಯ ಪಾವಿತ್ರ್ಯತೆಗೆ ಭಂಗ ತರುವ ಹುನ್ನಾರ ನಡೆಯುತ್ತಿದೆ. ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಮಾಧವ ಗುರುಸ್ವಾಮಿ, ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸನ್ನ, ಜೀವಂಧರ್ ಜೈನ್, ಭಾಮಿ ಅಶೋಕ್ ಶೆಣೈ, ಅಪ್ಪಯ್ಯ ಮಣಿಯಾಣಿ, ರಾಜೇಶ್ ಬನ್ನೂರು, ವಿದ್ಯಾಗೌರಿ, ಯಶೋಧಾ ಹರೀಶ್, ಯು.ಪೂವಪ್ಪ, ಮಮತಾ ರಂಜನ್, ಅಚ್ಯುತ ನಾಯಕ್, ದಿವ್ಯ ಪುರುಷೋತ್ತಮ, ಚಂದ್ರಶೇಖರ ರಾವ್ ಬಪ್ಪಳಿಗೆ, ಸಂತೋಷ್ ಬೋನಂತಾಯ, ಗೌರಿ ಬನ್ನೂರು, ರಾಧಾಕೃಷ್ಣ ಬೋರ್ಕರ್, ದಿನೇಶ್ ಜೈನ್, ಜನಾರ್ದನ ಬೆಟ್ಟ, ಲಕ್ಷ್ಮಣ ಗೌಡ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ವಿಶ್ವ ಹಿಂದೂ ಪರಿಷತ್, ಭಜರಂಗದಳ ಸೇರಿದಂತೆ ಇನ್ನಿತರ ಸಂಘಟನೆಗಳು ಸಹಕಾರ ನೀಡಿದವು.

Related posts

Leave a Reply