Header Ads
Breaking News

ಪುತ್ತೂರು ಅಂಚೆ ವಿಭಾಗ ತನ್ನದೇ ಛಾಪು ಮೂಡಿಸುತ್ತಾ ಬಂದಿದೆ : ಅಂಚೆ ಅಧೀಕ್ಷಕ ಶ್ರೀಹರ್ಷ ಎನ್. ಮಾಹಿತಿ

ಭಾರತೀಯ ಅಂಚೆ ಇಲಾಖೆ ಸರಕಾರ ನಿಯೋಜಿಸಿದ ಎಲ್ಲಾ ಸೇವೆಗಳನ್ನು ವಿಶಿಷ್ಟ ಕಾರ್ಯವೈಖರಿಯೊಂದಿಗೆ ನಿರ್ವಹಿಸುತ್ತಾ ಬಂದಿದ್ದು, ಈ ನಿಟ್ಟಿನಲ್ಲಿ ಪುತ್ತೂರು ಅಂಚೆ ವಿಭಾಗ ಎಲ್ಲಾ ಸೇವೆಗಳನ್ನು ತ್ವರಿತವಾಗಿ ನೀಡುವ ಮೂಲಕ ತನ್ನದೇ ಛಾಪನ್ನು ಮೂಡಿಸುತ್ತಾ ಬಂದಿದೆ ಎಂದು ಪುತ್ತೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಶ್ರೀಹರ್ಷ ಎನ್. ತಿಳಿಸಿದ್ದಾರೆ.ಅವರು ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಅಂಚೆ ಇಲಾಖೆ ಮೂಲಕ ನೀಡುವ ವಿವಿಧ ಸೇವೆಗಳ ಕುರಿತು ಮಾಹಿತಿ ನೀಡಿ, ಈಗಾಗಲೇ ಆಧಾರ್ ನೋಂದಾವಣೆ ಹಾಗೂ ತಿದ್ದುಪಡಿ ಕುರಿತು ಕಳೆದ ಮೂರು ವರ್ಷಗಳಿಂದ ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಾ ಗ್ರಾಹಕರಿಗೆ ಸಾಂದರ್ಭಿಕ ಸೇವೆಯನ್ನು ನೀಡಿದೆ ಎಂದರು.ಸುದ್ದಿಗೋಷ್ಟಿಯಲ್ಲಿ ಪುತ್ತೂರು ಅಂಚೆ ವಿಭಾಗದ ಜೋಸೆಫ್, ಮೋಹನ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *