Header Ads
Header Ads
Breaking News

ಪುತ್ತೂರು: ಅಮರ್‌ಜವಾನ್ ಜ್ಯೋತಿ ಬಳಿ ಅಪರಿಚಿತ ವ್ಯಕ್ತಿಯೊಬ್ಬನ ಶವ ಪತ್ತೆ

ಅಪರಿಚಿತ ವ್ಯಕ್ತಿಯೊಬ್ಬನ ಶವವು ಪುತ್ತೂರಿನ ಮಿನಿವಿಧಾನಸೌಧದ ಅಮರ್‌ಜವಾನ್ ಜ್ಯೋತಿ ಬಳಿಯಲ್ಲಿ ಪತ್ತೆಯಾಗಿದೆ. ನಿನ್ನೆ ರಾತ್ರಿ ವೇಳೆಯಲ್ಲಿ ಮೃತಪಟ್ಟಿರುವುದಾಗಿ ಶಂಕಿಸಲಾಗಿದೆ. ಮೃತ ದೇಹದ ಬಳಿಯಲ್ಲಿ ಮಹಿಳೆಯ ಬಟ್ಟೆ, ಪಾತ್ರೆಗಳು, ಅಡುಗೆ ದಿನಸಿಗಳು ಪತ್ತೆಯಾಗಿದ್ದು, ಈ ವ್ಯಕ್ತಿಯೊಂದಿಗೆ ಓರ್ವ ಮಹಿಳೆ ಇದ್ದಳೆಂದು ಸಾರ್ವಜನಿಕರು ಆಡಿಕೊಳ್ಳುತ್ತಿದ್ದಾರೆ. ಇದೊಂದು ಕೊಲೆಯಾಗಿರಬಹುದು ಎಂದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆಯನ್ನು ನಡೆಸುತ್ತಿದ್ದಾರೆ.

Related posts

Leave a Reply