Header Ads
Header Ads
Breaking News

ಪುತ್ತೂರು: ಆರ್ಯಾಪು ಸೊಸೈಟಿಯಲ್ಲಿ ಕಳಪೆಮಟ್ಟದ ಪಡಿತರ ಅಕ್ಕಿ ವಿತರಣೆ

ಪುತ್ತೂರು: ಪುತ್ತೂರು ಆರ್ಯಾಪು ಕೃಷಿ ಪತ್ತಿನ ಸಹಕಾರ ಸಂಘ ಸೊಸೈಟಿಯಲ್ಲಿ ಸರಕಾರದಿಂದ ಬಡಜನರ ಉಪಯೋಗಕ್ಕೆಂದಿರಿಸಿದ ಪಡಿತರ ಅಕ್ಕಿಯ ವಿತರಣೆ ಮಾಡುವ ಯೋಜನೆ ಮಾಡಿದ್ದಾರೆ. ಆದರೆ ಸರಕಾರದ ಈ ಯೋಜನೆಯನ್ನು ದುರುಪಯೋಗ ಮಾಡುತ್ತಿದ್ದು ಕಳಪೆ ಮಟ್ಟದ ಅಕ್ಕಿಯನ್ನು ವಿತರಣೆ ಮಾಡುತ್ತಿದ್ದಾರೆ. ಅಲ್ಲಿನ ಮ್ಯಾನೇಜರ್ ಮಾಧ್ಯಮ ಪ್ರತಿನಿಧಿಗಳಿಗೆ ಸ್ಪಂದನೆ ನೀಡದೆ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕರಿಗೆ ಉಪಯೋಗಕ್ಕಿಲ್ಲದ ಅಕ್ಕಿಯನ್ನು ವಿತರಣೆ ಮಾಡುತ್ತಿದ್ದಾರೆ. ಅನಿವಾರ್ಯತೆಯಿಂದ ಅಲ್ಲಿನ ಜನರು ಕೊಂಡುಹೋಗುವ ಪರಿಸ್ಥಿತಿ ಎದುರಾಗಿದೆ. ಆರ್ಯಾಪು ಸೊಸೈಟಿಯಲ್ಲಿ ಕಳಪೆ ಮಟ್ಟದ ಅಕ್ಕಿಯನ್ನು ವಿತರಿಸುವುದನ್ನು ಕಂಡುಬಂದು, ಅಲ್ಲಿನ ಸಾರ್ವಜನಿಕರು ಮಾಧ್ಯಮ ಪ್ರತಿನಿಧಿಗಳ ಗಮನಕ್ಕೆ ತಂದಿರುತ್ತಾರೆ. ಮಾಧ್ಯಮ ಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿದಾಗ ಸರಿ ಸುಮಾರು 25ಗೋಣಿಗಳಷ್ಟು ದಾಸ್ತಾನು ಮಾಡಿರುವುದು ಕಂಡು ಬಂದಿದೆ.

ಕಪ್ಪು ಬಣ್ಣಕ್ಕೆ ತಿರುಗಿದ ಅಕ್ಕಿ ಈ ಸೊಸೈಟಿಯಲ್ಲಿ ಸರಿ ಸುಮಾರು 25ಗೋಣಿಗಳಷ್ಟು ಅಕ್ಕಿಯು ಕಪ್ಪು ಬಣ್ಣಕ್ಕೆ ತಿರುಗಿದೆ. ಅದಲ್ಲದೆ ಈ ಅಕ್ಕಿಯು ಧೂಳು, ಕಳಪೆ, ಹಾಳಾದ ಅಕ್ಕಿಯನ್ನು ವಿತರಣೆ ಮಾಡುತ್ತಿದ್ದಾರೆ. ಅಲ್ಲಿನ ಅಕ್ಕಿ ವಿತರಕರು, ಈ ಅಕ್ಕಿಯು ಮಂಗಳೂರಿನಿಂದ ಬರುತ್ತಿದ್ದು, ವಾಪಾಸು ಕೊಂಡುಹೋಗಲು ಹೇಳಿದರೆ ಅವರು ಕೊಂಡುಹೋಗುತ್ತಿಲ್ಲ. ಸೊಸೈಟಿ ಅಧ್ಯಕ್ಷರ ಗಮನಕ್ಕೆ ತಂದರೂ ಅವರು ಸ್ಪಂದಿಸುತ್ತಾ ಇಲ್ಲ ಎಂದರು. ಈ ಸೊಸೈಟಿಯಲ್ಲಿ ಕಳಪೆ ಮಟ್ಟದ ಅಕ್ಕಿಯನ್ನು ನೀಡುತ್ತಾ ಇದ್ದಾರೆ. ಆದರೆ ನಮಗೆ ಏನೂ ಮಾಡಲು ಆಗುತ್ತಿಲ್ಲ. ಕೇಳಿದರೇ ಇದೇ ಅಕ್ಕಿ ನಮಗೆ ಬರುವುದು ಎಂದು ಹೇಳುತ್ತಾರೆ.

ಆರ್ಯಾಪು ಸೊಸೈಟಿಯಲ್ಲಿ ಕುಂಬು, ಧೂಳು, ಹಾಳಾದ ಅಕ್ಕಿಯನ್ನು ನೀಡುತ್ತಿದ್ದಾರೆ ಎಂಬ ಆರೋಪ ಬಂದರೂ ಅಕ್ಕಿಯನ್ನು ವಿತರಿಸುತ್ತಿದ್ದಾರೆ. ಸರಕಾರದ ಈ ಯೋಜನೆಯನ್ನು ದುರುಪಯೋಗ ಮಾಡುತ್ತಿದ್ದು ಕಳಪೆ ಮಟ್ಟದ ಅಕ್ಕಿಯನ್ನು ವಿತರಣೆ ಮಾಡುತ್ತಿದ್ದಾರೆ. ದೂರು ನೀಡಿದರೂ ಸ್ಪಂದಿಸುತ್ತಿಲ್ಲ ಎಂಬ ಆರೋಪ. ಒಟ್ಟಿನಲ್ಲಿ ಪಡಿತರ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

Related posts

Leave a Reply