Header Ads
Header Ads
Header Ads
Breaking News

ಪುತ್ತೂರು ಎಪಿ‌ಎಂಸಿಯಲ್ಲಿ ಇ-ಟ್ರೇಡಿಂಗ್ ಸಾಂಕೇತಿಕ ಜಾರಿ ಪೂರ್ವಭಾವಿಯಾಗಿ ಗೇಟ್ ಎಂಟ್ರಿ ಕಡ್ಡಾಯ ವ್ಯವಸ್ಥೆಗೆ ಹೊಂದುತ್ತಿಲ್ಲ ಎಂದ ಸದಸ್ಯರು

ಪುತ್ತೂರು ಎಪಿ‌ಎಂಸಿ ವ್ಯವಸ್ಥೆಗೆ ಹೊಂದಾಣಿಕೆಯಾಗುತ್ತಿಲ್ಲ. ಹಾಗೆಂದು ಇದು ಸರಕಾರದ ಆದೇಶ. ಜಾರಿಗೆ ತರಲೇಬೇಕಾಗಿದೆ. ಆದ್ದರಿಂದ ಸಾಂಕೇತಿಕವಾಗಿ ಜಾರಿ ಮಾಡಿ, ಒಳಿತು- ಕೆಡುಕು ಪರಾಮರ್ಶಿಸುವ ಎಂದು ಎಪಿ‌ಎಂಸಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಅಭಿಪ್ರಾಯಿಸಿದರು.

 

ಪುತ್ತೂರು ಎಪಿ‌ಎಂಸಿ ಸಭಾಂಗಣದಲ್ಲಿ ಗುರುವಾರ ನಡೆದ ಸಮಿತಿ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.ಇ-ಟ್ರೇಡಿಂಗ್‌ಗಾಗಿ ಪುತ್ತೂರು ಎಪಿ‌ಎಂಸಿ ಈಗಾಗಲೇ 93 ಲಕ್ಷ ರೂ.ನಷ್ಟು ಹಣ ವ್ಯಯಿಸಿದೆ. ಪ್ರತಿ ತಿಂಗಳು 5 ರಿಂದ 10 ಲಕ್ಷ ರೂ.ನಷ್ಟು ಹಣವನ್ನು ಪಾವತಿ ಮಾಡಬೇಕಾಗಿದೆ. ಸರಕಾರದ ಆದೇಶವಿದ್ದ ಕಾರಣ, ಪಾವತಿ ಮಾಡುವುದು ಅನಿವಾರ್ಯವಾಯಿತು. ಇದೀಗ ಜಾರಿಯೂ ಅನಿವಾರ್ಯವಾಗಿದೆ ಎಂದರು.

ಈ ಬಗ್ಗೆ ಉತ್ತರಿಸಿದ ಕಾರ್ಯದರ್ಶಿ ಭಾರತಿ, ಈಗಾಗಲೇ ಗೇಟ್ ಎಂಟ್ರಿ ಮಾಡಲು ತಿಳಿಸಿದ್ದಾರೆ. ಇದಕ್ಕೆ ಬೇಕಾದ ವ್ಯವಸ್ಥೆಗಳನ್ನು ಮಾಡಲಾಗಿದೆ. ಇ- ಟ್ರೇಡಿಂಗನ್ನು ಸಾಂಕೇತಿಕವಾಗಿ ಜಾರಿ ಮಾಡುವ ಎಂದು ಸಲಹೆ ನೀಡಿದರು. ಇದಕ್ಕೆ ಒಪ್ಪಿಗೆ ಸೂಚಿಸಿದ ಅಧ್ಯಕ್ಷರು, ಸಾಂಕೇತಿಕವಾಗಿ ಜಾರಿ ಮಾಡುವುದಕ್ಕೆ ಅಭ್ಯಂತರವಿಲ್ಲ. ಆದರೆ ಈ ಬಗ್ಗೆ ರೆಮ್ಸ್ ಸಂಸ್ಥೆ ಸರಿಯಾದ ಮಾಹಿತಿಯನ್ನೇ ನೀಡುತ್ತಿಲ್ಲ. ಮಾಹಿತಿಯಿಲ್ಲದೇ ಕಾರ್ಯಕ್ರಮ ಜಾರಿ ಮಾಡುವುದಾದರೂ ಹೇಗೆ? ಮುಂದಿನ ಬಾರಿ ಸರಿಯಾದ ಮಾಹಿತಿ ನೀಡಲು ಆಗ್ರಹಿಸಲಾಗುವುದು. ಸರಿಯಾದ ತಿಳಿವಳಿಕೆ ನೀಡಿದ ಬಳಿಕವಷ್ಟೇ ಜಾರಿಗೆ ಸಾಧ್ಯ. ನಂತರ ಪ್ರತಿ ಗ್ರಾಮ ಪಂಚಾಯತ್‌ನಲ್ಲಿ ಸಭೆ ಕರೆದು, ಈ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು.

ಈ ಸಂದರ್ಭ ಎಪಿ‌ಎಂಸಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು, ಸಿಬ್ಬಂದಿಗಳು ಭಾಗವಹಿಸಿದರು.

ವರದಿ: ಅನೀಶ್ ಪುತ್ತೂರು

Related posts

Leave a Reply