Header Ads
Header Ads
Header Ads
Breaking News

ಪುತ್ತೂರು ಎಪಿ‌ಎಂಸಿ ವ್ಯಾಪ್ತಿಯಲ್ಲಿ ಕಟ್ಟಡಗಳ ಕೆಲಸ ಪ್ರಗತಿಯಲ್ಲಿದೆ ಜ.7 ರಂದು ಹೊಸ ಕಟ್ಟಡ ಕಾಮಗಾರಿಗಳ ಉದ್ಘಾಟನೆ ಎಪಿ‌ಎಂಸಿ ಸಾಮಾನ್ಯ ಸಭೆಯಲ್ಲಿ ತೀರ್ಮಾನ

ಪುತ್ತೂರು: ಪುತ್ತೂರು ಎಪಿ‌ಎಂಸಿ ಪ್ರಾಂಗಣದಲ್ಲಿ ಮತ್ತು ಎಪಿ‌ಎಂಸಿ ಸೇವಾ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ಹೊಸ ಕಾಮಗಾರಿ ಕಟ್ಟಡಗಳ ಕೆಲಸ ಕಾರ್ಯಗಳು ಪ್ರಗತಿಯಲ್ಲಿದ್ದು, ಜನವರಿ ೭ರಂದು ಹೊಸ ಕಟ್ಟಡ ಕಾಮಗಾರಿಗಳ ಉದ್ಘಾಟನೆ ನೆರವೇರಿಸಲು ಪುತ್ತೂರು ಎಪಿ‌ಎಂಸಿ ಸಾಮಾನ್ಯ ಸಭೆ ತೀರ್ಮಾನಿಸಿತು.

ಸೋಮವಾರ ಪುತ್ತೂರು ಎಪಿ‌ಎಂಸಿ ಆಡಳಿತ ಕಚೇರಿಯ ಸಭಾಂಗಣದಲ್ಲಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಯಿತು. ಮುಂದಿನ ದಿನಗಳಲ್ಲಿ ಬಿಟ್ಟು ಹೋಗಿರುವ ಕಾಮಗಾರಿಗಳ ರೂ. 60 ಲಕ್ಷ ಕ್ರಿಯಾಯೋಜನೆಯನ್ನು ಎಪಿ‌ಎಂಸಿ ಆಡಳಿತ ನಿರ್ದೇಶಕರಿಗೆ ಕಳುಹಿಸಿಕೊಡುವ ಕುರಿತು ಸಭೆಯಲ್ಲಿ ಅಧ್ಯಕ್ಷರು ಪ್ರಸ್ತಾಪಿಸಿದರು.

ಜ. 7 ರಂದು ಪುತ್ತೂರು ಎಪಿ‌ಎಂಸಿ ನೇತೃತ್ವದಲ್ಲಿ ಖಾಸಗಿ ಆಸ್ಪತ್ರೆ ಮತ್ತು ಇತರ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ. ಖಾಸಗಿ ವೈದ್ಯರ ಮುಷ್ಕರದ ಕಾರಣದಿಂದ ಈ ಹಿಂದೆ ನಿಗದಿಯಾಗಿದ್ದ ದಿನಾಂಕ ಮುಂದೂಡಲ್ಪಟ್ಟಿತ್ತು. ಇದೇ ಸಂದರ್ಭ ಎಪಿ‌ಎಂಸಿ ಪ್ರಾಂಗಣದಲ್ಲಿ ಎಟಿ‌ಎಂ ವ್ಯವಸ್ಥೆ ಉದ್ಘಾಟನೆಯಾಗಲಿದೆ. ಖಾಸಗಿ ಪ್ರವರ್ತನೆಯಲ್ಲಿ ಸರ್ವ ಸರಕಿನ ಮಳಿಯೊಂದು ತೆರೆಯಲ್ಪಡಲಿದೆ ಎಂದು ಅಧ್ಯಕ್ಷರು ಸಭೆಗೆ ಮಾಹಿತಿ ನೀಡಿದರು. ಎಪಿ‌ಎಂಸಿಯಿಂದ ಸಿಗುವ ವಿವಿಧ ಸವಲತ್ತುಗಳ ಮತ್ತು ಅನುದಾನದ ಕುರಿತು ಮಾಹಿತಿ ಮತ್ತು ತರಬೇತಿ ಶಿಬಿರವು ಡಿ.22 ಕ್ಕೆ ಮೈಸೂರಿನಲ್ಲಿ ನಡೆಯಲಿದ್ದು, ಪುತ್ತೂರು ಎಪಿ‌ಎಂಸಿ ನಿರ್ದೇಶಕರೆಲ್ಲರೂ ತರಬೇತಿ ಕಾಂiiಗಾರದಲ್ಲಿ ಭಾಗವಹಿಸುವ ಕುರಿತು ನಿರ್ಣಯ ಕೈಗೊಳ್ಳಲಾಯಿತು.

ಎಪಿ‌ಎಂಸಿ ಪ್ರಾಂಗಣದಲ್ಲಿರುವ ರೈತ ಸಭಾಭವನವು ಸುಸಜ್ಜಿತ ಸಭಾಂಗಣವಾಗಿದ್ದು, ರೈತ ಕುಟುಂಬಗಳ ಶುಭ ಕಾರ್ಯಗಳಿಗೆ ಆಧ್ಯತೆ ನೀಡಲಾಗುತ್ತಿದೆ. ಕಡಿಮೆ ಬಾಡಿಗೆಯಲ್ಲಿ ರೈತರಿಗೆ ಈ ಸಭಾಭವನ ಲಭ್ಯವಾಗಿದೆ. ಇದನ್ನು ಇನ್ನಷ್ಟು ಸುಸಜ್ಜಿತಗೊಳಿಸಿ ಪುತ್ತೂರಿನ ನಂಬರ್ 1 ಸಭಾಭವನವನ್ನಾಗಿ ಪರಿವರ್ತಿಸಲು ಆಡಳಿತ ಮಂಡಳಿ ತೀರ್ಮಾನಿಸಿದೆ. ಕಡಬದ ಉಪ ಮಾರುಕಟ್ಟೆ ಪ್ರಾಂಗಣ ರಚನೆ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಅಧ್ಯಕ್ಷರು ವಿವರಿಸಿದರು.

ಎಪಿ‌ಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿರುವ ಕೆನರಾ ಟ್ರೇಡರ್‍ಸ್‌ನ ಮಾಲಕ ಅಬ್ದುಲ್ ರಹಿಮಾನ್. ಪಿ 2015 ರ ಜ. 19 ಕ್ಕೆ ಮೃತಪಟ್ಟಿದ್ದಾರೆ. ಈ ನಿಟ್ಟಿನಲ್ಲಿ ಅವರ ಮಾಲಕತ್ವವನ್ನು ತನ್ನ ಹೆಸರಿಗೆ ಬದಲಾಯಿಸುವಂತೆ ಅವರ ಪುತ್ರ ನವಾಝ್ ಅಹಮ್ಮದ್ ಪಡೀಲು ನ. 17 ಕ್ಕೆ ಅರ್ಜಿ ಸಲ್ಲಿಸಿರುವ ವಿಚಾರ ಸಭೆಯಲ್ಲಿ ಪ್ರಸ್ತಾಪವಾದಾಗ ಆಕ್ಷೇಪಿಸಿದ ನಿರ್ದೇಶಕ ತೀರ್ಥಾನಂದ ದುಗ್ಗಳ ಮೃತಪಟ್ಟವರ ಹೆಸರು ಬದಲಾಯಿಸಲು 2 ವರ್ಷ ಬೇಕಾಗಿದೆಯೇ ಎಂದು ಪ್ರಶ್ನಿಸಿದರು. ಅಲ್ಲದೆ 2 ವರ್ಷ ಒಂದು ಸಂಸ್ಥೆಯ ಮಾಲಕತ್ವ ಮೃತಪಟ್ಟವರ ಹೆಸರಿನಲ್ಲಿರುವುದು ಕಾನೂನು ಬಾಹಿರವಲ್ಲವೇ ಎಂದು ಪ್ರಶ್ನಿಸಿದರು.
ಅದಕ್ಕೆ ಧ್ವನಿಗೂಡಿಸಿದ ನಿರ್ದೇಶಕಿ ಪುಲಸ್ತ್ಯ ರೈ ಯಾವುದೇ ಗ್ರಾಮ ಇರಲಿ ಅಲ್ಲಿ ಒಬ್ಬ ವ್ಯಕ್ತಿಯು ೬ ತಿಂಗಳು ವಾಸ್ತವ್ಯ ಇಲ್ಲವೆಂದಾದರೆ ಆತನ ಹೆಸರನ್ನು ರೇಷನ್ ಕಾರ್ಡ್‌ನಿಂದ ತೆಗೆಯಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಮೃತಪ್ಟಟವರ ಹೆಸರಿನಲ್ಲಿ ಎರಡು ವರ್ಷ ಒಂದು ಸಂಸ್ಥೆ ಕಾರ್ಯಾಚರಣೆ ಮಾಡುವುದು ಕಾನೂನು ಪ್ರಕಾರ ತಪ್ಪು ಎಂದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷರು ಪರವಾನಿಗೆ ರದ್ಧತಿಗೆ ಕೆಲವೊಂದು ಸಮಸ್ಯೆ ಬಂದಿರಬಹುದು. ಈಗ ಮಗನ ಹೆಸರಿನಲ್ಲಿ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಅವರು ಅರ್ಜಿ ಸಲ್ಲಿಸಿದ್ದಾರೆ ಎಂದರು.

ಸಭೆಯಲ್ಲಿ ಎಪಿ‌ಎಂಸಿ ಉಪಾಧ್ಯಕ್ಷ ಬಾಲಕೃಷ್ಣ ಬಾಣಜಾಲು, ನಿರ್ದೇಶಕರಾದ ತ್ರಿವೇಣಿ ಪೆರ್‍ವೋಡಿ, ಎ ಕುಶಾಲಪ್ಪ ಗೌಡ, ಮೇದಪ್ಪ ಗೌಡ, ವಿ.ಎಚ್ ಶಕೂರ್ ಹಾಜಿ, ಕಾರ್ತಿಕ್ ರೈ ಬೆಳ್ಳಿಪ್ಪಾಡಿ, ಕೊರಗಪ್ಪ, ಮಂಜುನಾಥ ಎನ್.ಎಸ್, ಗೀತಾ ದಾಸರಮೂಲೆ, ಶಶಿಕಿರಣ್ ರೈ ನೂಜಿಬೈಲು, ರಾಮಕೃಷ್ಣ ಡಿ, ಉಪಸ್ಥಿರಿದ್ದರು.  ಎಪಿ‌ಎಂಸಿ ಪ್ರಭಾರ ಕಾರ್ಯದರ್ಶಿ ಭಾರತಿ ಸ್ವಾಗತಿಸಿ, ಮುಖ್ಯ ಲೆಕ್ಕಿಗ ರಾಮಚಂದ್ರ ವಂದಿಸಿದರು.

Related posts

Leave a Reply