Header Ads
Header Ads
Header Ads
Breaking News

ಪುತ್ತೂರು ಎಸ್‌ಐ ವಿರುದ್ಧ ಅವಹೇಳನಕಾರಿ ಭಾಷಣ ಹಿನ್ನೆಲೆ ಹಿಂಜಾವೇ ಮುಖಂಡ ಜಗದೀಶ್ ಕಾರಂತ್ ವಿಚಾರಣೆ ಮುಂದೂಡಿಕೆ ಪುತ್ತೂರು ನ್ಯಾಯಾಲಯದ ಆದೇಶ

ಹಿಂದೂ ಜಾಗರಣೆ ವೇದಿಕೆಯ ಕ್ಷೇತ್ರೀಯ ಕಾರ್ಯದರ್ಶಿ ಜಗದೀಶ್ ಕಾರಂತರ ಜಾಮೀನು ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಾಳೆ ಪುತ್ತೂರಿನ ನ್ಯಾಯಾಲಯದಲ್ಲಿ ಮುಂದುವರಿಯಲಿದ್ದು, ಅಲ್ಲಿಯವರಿಗೆ ಹಿಂದಿನ ನ್ಯಾಯದೀಶರು ಮಂಜೂರು ಮಾಡಿದ ಮದ್ಯಂತರ ಜಾಮೀನನ್ನು ಇನ್ನೂ ಒಂದು ದಿನಗಳ ಕಾಲ ಮುಂದುವರಿಸಲಾಗಿದೆ. ಇಂದು ಬೆಳಿಗ್ಗೆ ನ್ಯಾಯಾಲಯಕ್ಕೆ ಹಾಜರಾದ ಕಾರಂತರು ತಮ್ಮ ಪರ ವಕೀಲರ ಮೂಲಕ ಪೂರ್ಣಕಾಲಿಕ ಜಾಮೀನು ಅರ್ಜಿ ಸಲ್ಲಿಸಿದರು. ಅರ್ಜಿಯ ವಿಚಾರಣೆಯನ್ನು ನಾಳೆಗೆ ಮುಂದೂಡಿದ ನ್ಯಾಯದೀಶರು ಮಧ್ಯಂತರ ಜಾಮೀನನ್ನು ಒಂದು ದಿನಗಳ ಕಾಲ ವಿಸ್ತರಿಸಿದರು.

ಪುತ್ತೂರು ನ್ಯಾಯಾಲಯದ ವ್ಯಾಪ್ತಿಯನ್ನು ಮೀರಿ ಹೋಗದಂತೆ ಈ ಮದ್ಯಂತರ ಜಾಮೀನಿನಲ್ಲಿ ಸೂಚಿಸಲಾಗಿದ್ದರು , ಕಾರಂತರ ಮೇಲೆ ಇನ್ನೊಂದು ಪ್ರಕರಣ ಸುಳ್ಯ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿಯಿದ್ದು , ಅದರ ವಿಚಾರಣೆಗೆ ಹಾಜರಾಗಲು ಅನುಮತಿಯನ್ನು ಮಾನ್ಯ ನ್ಯಾಯಾಲಯ ನೀಡಿತು. ಹಾಗಾಗಿ ಕಾರಂತರು ಸುಳ್ಯಕ್ಕೆ ತೆರಳಿದರು. ನಾಳೆ ಮತ್ತೆ ವಿಚಾರಣೆಗೆ ಹಾಜರಾಗಬೇಕಿದ್ದು , ಅ ಸಂಧರ್ಭದಲ್ಲಿ ಸರ್ಕಾರಿ ಅಭಿಯೋಜಕರು ಕಾರಂತರ ಜಾಮೀನು ಅರ್ಜಿಗೆ ವಿರೋಧ ವ್ಯಕ್ತಪಡಿಸುವ ಸಾಧ್ಯತೆ ಇದೆ. ಹಾಗಾಗಿ ಪೂರ್ಣಕಾಲಿಕ ಜಾಮೀನು ತೀರ್ಪು ಮತ್ತೂ ತಡವಾಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ವರದಿ:ಅನೀಶ್ ಪುತ್ತೂರು

Related posts

Leave a Reply