Header Ads
Header Ads
Breaking News

ಪುತ್ತೂರು : ಕೆಎಸ್ಸಾರ್ಟಿಸಿ ಮೆಕ್ಯಾನಿಕ್ ನೇಣು ಬಿಗಿದು ಆತ್ಮಹತ್ಯೆ

ಬಿಜಾಪುರ ಮೂಲದವರಾದ ಕೆಸ್ಸಾರ್ಟಿಸಿ ಮೆಕ್ಯಾನಿಕ್ ಒಬ್ಬರು ತಾನು ವಾಸ್ತವ್ಯವಿದ್ದ ಬಾಡಿಗೆ ಮನೆಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ನಗರದ ಹೊರವಲಯದ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಎಂಬಲ್ಲಿ ಮಂಗಳವಾರ ಸಂಜೆ ಸಂಭವಿಸಿದೆ.
ಪುತ್ತೂರು ನಗರದ ಹೊರವಲಯದ ಮುಕ್ರಂಪಾಡಿಯಲ್ಲಿರುವ ಕೆಸ್ಸಾರ್ಟಿಸಿ ಪುತ್ತೂರು ಘಟಕಕ್ಕೆ ಸಂಬಂಧಿಸಿದ ವರ್ಕ್‍ಶಾಪ್‍ನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಬಿಜಾಪುರ ಜಿಲ್ಲೆಯ ಬಸವನಬಾಗೇವಾಡಿ ಗ್ರಾಮದ ಒಳಸಂಗಿ ನಿವಾಸಿ ದುಂಡಪ್ಪ ಅವರ ಪುತ್ರ ಮಲಿಯಪ್ಪ ದಟ್ಟಿ (30) ಆತ್ಮಹತ್ಯೆ ಮಾಡಿಕೊಂಡವರು.

ಪುತ್ತೂರಿನಲ್ಲಿ ಕೆಸ್ಸಾರ್ಟಿಸಿ ಮೆಕ್ಯಾನಿಕ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಲಿಯಪ್ಪ ದಟ್ಟಿ ಅವರು ಪುತ್ತೂರು ನಗರದ ಹೊರವಲಯದ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕದಲ್ಲಿ ತನ್ನ ಪತ್ನಿ ಹಾಗೂ ಒಂದು ವರ್ಷ 8 ತಿಂಗಳ ಹೆಣ್ಣು ಮಗುವಿನೊಂದಿಗೆ ವಾಸ್ತವ್ಯವಿದ್ದರು. ಕಳೆದ ಒಂದು ವಾರದಿಂದ ರಜೆ ಹಾಕಿ ಬಾಡಿಗೆ ಮನೆಯಲ್ಲೇ ಉಳಿದುಕೊಂಡಿದ್ದ ಮಲಿಯಪ್ಪ ದಟ್ಟಿ ಅವರು ಮಂಗಳವಾರ ಸಂಜೆ ಬಾಡಿಗೆ ಮನೆಯ ಕೋಣೆಯೊಳಗೆ ಪತ್ನಿಯ ಸೀರೆಯನ್ನು ಬಳಸಿಕೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪತ್ನಿ ಗೌರಮ್ಮ ಅವರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related posts

Leave a Reply