Header Ads
Header Ads
Breaking News

ಪುತ್ತೂರು: ಕೆಎಸ್‍ಆರ್‍ಟಿಸಿಯ ನಾಗರಾಜ್ ಶಿರಾಲಿಯವರ ಮೇಲೆ ದೌರ್ಜನ್ಯ ಆರೋಪ

 ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜ್ ಶಿರಾಲಿಯವರು ತನ್ನ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಮಹಿಳಾ ನಿರ್ವಾಹಕಿ ಶಾಲಿನಿಯವರು ಮಾಡಿರುವ ಆರೋಪ ಸುಳ್ಳು. ಈ ದೂರನ್ನು ಕೈಬಿಡುವಂತೆ ವಿಭಾಗೀಯ ಕಛೇರಿಯ ವಿವಿಧ ಅಧಿಕಾರಿ ವರ್ಗ, ಸಿಬಂದಿಗಳು ಹಾಗೂ ಏಳು ಕಾರ್ಮಿಕ ಸಂಘಟಣೆಗಳು ಸಹಾಯಕ ಆಯುಕ್ತರು ಹಾಗೂ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಶಾಲಿನಿಯವರು ಮಹಿಳಾ ನಿರ್ವಾಹಕಿಯಾಗಿ ಪುತ್ತೂರು ಘಟಕದಲ್ಲಿ ಮೂಲ ಹುದ್ದೆಯಾದ ನಿರ್ವಾಹಕ ಹುದ್ದೆಯನ್ನು ನಿರ್ವಹಿಸಿದೆ ತನಗೆ ದೈಹಿಕ ಅಸಮರ್ಥತೆ ಇರುವುದಾಗಿ ಹಾಜರುಪಡಿಸಿದ ವೈದ್ಯಕೀಯ ಪ್ರಮಾಣ ಪತ್ರದಂತೆ ಲಘು/ಪರ್ಯಾಯ ಹುದ್ದೆಯನ್ನು ನಿರ್ವಹಿಸುತ್ತಿದ್ದರು. ಇತ್ತೀಚೆಗೆ ಅವರ ವೈದ್ಯಕೀಯ ಪ್ರಮಾಣ ಪತ್ರ ಅವಧಿ ಮುಕ್ತಾಯಗೊಂಡಿದ್ದು, ಮಂಗಳೂರು ವೆನ್‍ಲಾಕ್ ಆಸ್ಪತ್ರೆಯಿಂದ ಶೇ.10ರಷ್ಟು ಮಾತ್ರ ದೈಹಿಕ ನ್ಯೂನತೆ ಇರುವುದಾಗಿ ತಿಳಿಸಿ ಶಾಲಿನಿಯವರಿಗೆ ಪ್ರಮಾಣ ಪತ್ರ ನೀಡಿರುತ್ತಾರೆ. ನಿಗಮದ ಸುತ್ತೋಲೆಯಂತೆ ನೌಕರನಿಗೆ ಶೇ.40 ಹಾಗೂ ಅದಕ್ಕಿಂತ ಹೆಚ್ಚಿನ ದೈಹಿಕ ಅಂಗವಿಕಲತೆ ಇದ್ದಲ್ಲಿ ಮಾತ್ರ ಪರ್ಯಾಯ ಹುದ್ದೆ ನೀಡಬಹುದಾಗಿದೆ. ಅದರಂತೆ ಶೇ.10 ಅಂಗವಿಕಲತೆ ಇರುವ ಶಾಲಿನಿಯವರಿಗೆ ಪರ್ಯಾಯ ಹುದ್ದೆಯಿಂದ ಮೂಲ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಲು ಆದೇಶ ನೀಡಲಾಗಿದೆ.

ಹಾಗಿದ್ದರೂ ಶಾಲಿನಿಯವರು ತಮ್ಮ ಮೇಲೆ ದೌರ್ಜನ್ಯ ಎಸಗಿರುವುದಾಗಿ ಸುಳ್ಳು ದೂರು ನೀಡಿದ್ದಾರೆ. ವಿಭಾಗೀಯ ನಿಯಂತ್ರಣಾಧಿಕಾರಿಗಳು ಯಾವುದೇ ರೀತಿಯ ದೌರ್ಜನ್ಯ ಎಸಗಿರುವುದಿಲ್ಲ. ಇದಕ್ಕೆ ವಿಭಾಗೀಯ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲಾ ಅಧಿಕಾರಿ ಮತ್ತು ಸಿಬಂದಿಗಳೇ ಸಾಕ್ಷಿಯಾಗಿರುತ್ತಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

Related posts

Leave a Reply

Your email address will not be published. Required fields are marked *