Header Ads
Header Ads
Header Ads
Breaking News

ಪುತ್ತೂರು ಗ್ರಾಮಾಂತರ ಎಸ್‌ಐಗೆ ಅಪಮಾನ ಪ್ರಕರಣ ಹಿಂ.ಜಾ.ವೇ ಮುಖಂಡ ಜಗದೀಶ್ ಕಾರಂತ್‌ಗೆ ಜಾಮೀನು ಪುತ್ತೂರು ನ್ಯಾಯಾಲಯದಿಂದ ಆದೇಶ

 

ಸಂಪ್ಯ ಠಾಣೆ ಎಸ್ಸೈ ಅಬ್ದುಲ್ ಖಾದರ್ ಮತ್ತು ಸಿಬ್ಬಂದಿಯ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿ ಬೆದರಿಕೆ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿ ಹಿಂದೂ ಜಾಗರಣ ವೇದಿಕೆಯ ಮುಖಂಡ ಜಗದೀಶ್ ಕಾರಂತರಿಗೆ ಪುತ್ತೂರಿನ ಎಸಿಜೆಎ ನ್ಯಾಯಾಲಯ ಜಾಮೀನು ನೀಡಿ ಆದೇಶಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ಮಧ್ಯಂತರ ಜಾಮೀನು ಪಡೆದಿದ್ದ ಜಗದೀಶ್ ಕಾರಂತರಿಗೆ ಇದೀಗ ಪೂರ್ಣ ಪ್ರಮಾಣದ ಜಾಮೀನು ದೊರೆತಿದೆ.

ಪುತ್ತೂರಿನಲ್ಲಿ ಸೆ.೧೫ರಂದು ನಡೆದ ಪ್ರತಿಭಟನಾ ಸಭೆಯೊಂದರಲ್ಲಿ ಪೊಲೀಸರ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿರುವ ಬಗ್ಗೆ ಜಗದೀಶ್ ಕಾರಂತ ವಿರುದ್ಧ ಪೊಲೀಸರು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದರು.ಅದರೆ ಅ.೪ರಂದು ವಕೀಲರ ಮುಷ್ಕರದ ಹಿನ್ನೆಲೆಯಲ್ಲಿ ಅರ್ಜಿಯ ವಿಚಾರಣೆಯನ್ನು ಅ.೬ಕ್ಕೆ ಮುಂಡೂಡಲಾಗಿತ್ತು. ಶುಕ್ರವಾರ ಜಗದೀಶ್ ಕಾರಂತ ಪರ-ವಿರೋಧ ವಾದವನ್ನು ಆಲಿಸಿದ ಪುತ್ತೂರು ಎಸಿಜೆಎ ನ್ಯಾಯಾಲಯದ ನ್ಯಾಯಾಧೀಶ ಕಿಶನ್ ಬಿ. ಮಡಲಗಿಯವರು ಜಾಮೀನು ಆದೇಶವನ್ನು ಇಂದಿಗೆ ಕಾಯ್ದಿರಿಸಿದ್ದರು.

Related posts

Leave a Reply