Header Ads
Header Ads
Breaking News

ಪುತ್ತೂರು: ಜ.23ರಂದು ನವಚೇತನ ಹಿರಿಯ ನಾಗರಿಕರ ಬಡಾವಣೆ ಲೋಕಾರ್ಪಣ ಸಮಾರಂಭ

ಪುತ್ತೂರು: ನವಚೇತನ ರಿಟೈರ್‌ಮೆಂಟ್ ರೆಸಿಡೆನ್ಸಿ ಕಂಪೆನಿಯು ಹಿರಿಯ ನಾಗರಿಕರ ಆರೈಕೆಯನ್ನು ಅತ್ಯಾಧುನಿಕ ಸೌಕರ್ಯಗಳನ್ನು ಒಳಗೊಂಡ ಒಂದು ಸುರಕ್ಷಿತ ಹಾಗೂ ಆರಾಮದಾಯಕ ಬಡಾವಣೆಯಾಗಿದೆ. ಇದರ ಲೋಕಾರ್ಪಣೆಯು ಜ. 23ರಂದು ಮಧ್ಯಾಹ್ನ 3ಕ್ಕೆ ಪುತ್ತೂರಿನ ಶಾಂತಿಗೋಡು ನವಚೇತನದಲ್ಲಿ ನಡೆಯಲಿದೆ ಎಂದು ನವಚೇತನದ ಅಧ್ಯಕ್ಷ ಮತ್ತು ವ್ಯವಸ್ಥಾಪನ ನಿರ್ದೇಶಕ ಡಾ. ಶ್ಯಾಮ ಭಟ್ ಹೇಳಿದರು.

ಅವರು ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲೋಕಾರ್ಪಣಾ ಸಮಾರಂಭದ ಉದ್ಘಾಟಕರಾಗಿ ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಹಾಗೂ ರಾಮಕೃಷ್ಣ ಮಿಷನ್‌ನ ಕಾರ್ಯದರ್ಶಿ ಸ್ವಾಮಿ ಜಿತಕಾಮಾನಂದಜಿ ಭಾಗವಹಿಸಲಿದ್ದಾರೆ. ಭಾರತ ಸರಕಾರದ ನಿವೃತ್ತ ಕಾರ್ಯದರ್ಶಿ ವಿ.ವಿ. ಭಟ್ ಅಧ್ಯಕ್ಷರಾಗಿ ಭಾಗವಹಿಸಲಿದ್ದಾರೆ. ಅತಿಥಿಗಳಾಗಿ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್, ಪುತ್ತೂರು ಶಾಸಕ ಸಂಜೀವ ಮಠಂದೂರು, ದ.ಕ. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಪುತ್ತೂರು ಮಾಜಿ ಶಾಸಕ ಉರಿಮಜಲು ರಾಮ ಭಟ್ ಮತ್ತಿತರ ಗಣ್ಯರು ಉಪಸ್ಥಿತರಿರುವರು ಎಂದರು.ಈ ಸಂದರ್ಭ ಬೆಂಗಳೂರು ಶ್ರೀ ವಿದ್ಯಾಭೂಷಣ ಹಾಗೂ ತಂಡದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ನಡೆಯಲಿದೆ ಎಂದರು. 

ಸುದ್ದಿಗೋಷ್ಠಿಯಲ್ಲಿ ನವಚೇತನದ ನಿರ್ದೇಶಕಿ ಸುಶೀಲಾ ಭಟ್ ಹಾಗೂ ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಬಿ. ಶ್ರೀಧರ್ ಭಟ್ ಉಪಸ್ಥಿತರಿದ್ದರು.

Related posts

Leave a Reply