Header Ads
Header Ads
Breaking News

ಪುತ್ತೂರು: ಡಾ. ಶಿವರಾಮ ಕಾರಂತರ 117 ನೇ ಜನ್ಮದಿನಾಚರಣೆ

ಡಾ. ಶಿವರಾಮ ಕಾರಂತರ 117 ನೇ ಜನ್ಮದಿನಾಚರಣೆಯನ್ನು ಪುತ್ತೂರಿನ ಕಾರಂತರ ಬಾಲವನದಲ್ಲಿ ಅತ್ಯಂತ ಅದ್ದೂರಿಯಾಗಿ ನಡೆಸಲು ತೀರ್ಮಾನಿಸಲಾಗಿದೆ. ಜನ್ಮ ದಿನಾಚರಣೆಯ ಜೊತೆಗೆ ಬಾಲವನ ಪ್ರಶಸ್ತಿ ಪ್ರಧಾನ ಸಮಾರಂಭವೂ ನಡೆಯಲಿದ್ದು, ಈ ಬಾರಿ ಕಾರಂತರ ಒಡನಾಡಿ, ಯಕ್ಷಗಾನ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮೆರೆದ ಬನ್ನಂಜೆ ಸಂಜೀವ ಸುವರ್ಣ 2018 ನೇ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ಪುತ್ತೂರಿನ ಬಾಲವನ ಕಾರಂತರ ಕರ್ಮಭೂಮಿಯಾಗಿದ್ದು, ಕಾರಂತರು ಬಾಲವನದಲ್ಲೇ ಬರೆದ ಮೂಕಜ್ಜಿಯ ಕನಸು ಕೃತಿಗೆ ಜ್ಞಾನಪೀಠ ಪ್ರಶಸ್ತಿಯ ಲಭಿಸಿತ್ತು. ಕಾರಂತರ ನೆನಪಿಗಾಗಿ ಬಾಲವನದಲ್ಲಿ ವಿವಿಧ ರೀತಿಯ ಕಲೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ.

 

ಕಾರಂತರ117 ಜನ್ಮದಿನೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಸ್ಥಳೀಯಾಡಳಿತ ತೀರ್ಮಾನಿಸಿದ್ದು, ಅಕ್ಟೋಬರ್10 ದಿನಪೂರ್ತಿ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಉದ್ಘಾಟಿಸಲಿದ್ದು, ಸಂಜೆ ನಡೆಯುವ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಜಯಮಾಲ ಭಾಗವಹಿಸಲಿದ್ದಾರೆ. ಪ್ರತಿ ವರ್ಷ ನೀಡಲಾಗುತ್ತಿರುವ ಬಾಲವನ ಪ್ರಶಸ್ತಿಗೆ ಈ ಬಾರಿ ಕಾರಂತರ ಒಡನಾಡಿಯಾಗಿರುವ ಹಾಗೂ ಯಕ್ಷಗಾನ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಉಡುಪಿಯ ಬನ್ನಂಜೆ ಸಂಜೀವ ಸುವರ್ಣ ಆಯ್ಕೆಯಾಗಿದ್ದಾರೆ.

Related posts

Leave a Reply