Header Ads
Header Ads
Breaking News

ಪುತ್ತೂರು ತಾಲೂಕಿನಲ್ಲಿ ಅಕ್ರಮವಾಗಿ ಜಲ್ಲಿಕಲ್ಲು ಗಣಿಗಾರಿಕೆ ಬಿರುಕು ಬಿಟ್ಟ ಮನೆಯ ಗೋಡೆ ಕಲ್ಲಂದಡ್ಕ ಪ್ರದೇಶದಲ್ಲಿ ನಡೆಯುತ್ತಿರುವ ಜಲ್ಲಿಕಲ್ಲು ಗಣಿಗಾರಿಕೆ ದೂರು ನೀಡಿದರೂ ಕ್ರಮಕೈಗೊಳ್ಳುತ್ತಿಲ್ಲ-ಸ್ಥಳೀಯರ ಅಳಲು

ಪುತ್ತೂರು ತಾಲ್ಲೂಕಿನ ಕೊಡಿಪ್ಪಾಡಿ ಮತ್ತು ಕಬಕ ಗ್ರಾಮದ ಗಡಿಭಾಗವಾದ ಕಲ್ಲಂದಡ್ಕ ಪ್ರದೇಶದಲ್ಲಿ ಸುರೇಶ್ ಕಾಮತ್ ಎಂಬವರು ಅಕ್ರಮವಾಗಿ ಜಲ್ಲಿಕಲ್ಲು ಗಣಿಗಾರಿಕೆ ನಡೆಸುತ್ತಿದ್ದು, ಈ ಅಕ್ರಮದಲ್ಲಿ ಅಹಮ್ಮದ್ ಕುಂಞಿ ಅವರ ಪುತ್ರ ಖಾದರ್ ಎಂಬವರು ಶಾಮೀಲಾಗಿದ್ದಾರೆ. ಸ್ಫೋಟಕಗಳನ್ನು ಬಳಸಿಕೊಂಡು ನಡೆಸುತ್ತಿರುವ ಈ ಗಣಿಗಾರಿಕೆಯಿಂದಾಗಿ ಆಸುಪಾಸಿನ ಮನೆಗಳಿಗೆ ಹಾನಿಯಾಗುತ್ತಿದ್ದು, ಸ್ಥಳೀಯರಿಗೆ ಸಮಸ್ಯೆಯಾಗುತ್ತಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೂ ಈ ತನಕ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ತಮ್ಮ ಸಮಸ್ಯೆಯನ್ನ ತೋಡಿಕೊಂಡಿದ್ದಾರೆ.ಇ ಬಗ್ಗೆ ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಲ್ಲಂದಡ್ಕ ಪರಿಸರದ ನಿವಾಸಿ ಖಾಸಿಂ,ಕಲ್ಲಂದಡ್ಕ ಪರಿಸರದಲ್ಲಿ ೨೦೧೪ರಿಂದ ಅಕ್ರಮವಾಗಿ ಜಲ್ಲಿಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಸುರೇಶ್ ಕಾಮತ್ ಎಂಬವರು ರಾತ್ರಿ ಹಗಲೆನ್ನದೆ ಸ್ಫೋಟಕಗಳನ್ನು ಬಳಸಿಕೊಂಡು ನಡೆಸುತ್ತಿರುವ ಈ ಗಣಿಗಾರಿಕೆಯಿಂದ ಸ್ಥಳೀಯರು ತೀರಾ ತೊಂದರೆ ಎದುರಿಸಬೇಕಾಗಿ ಬಂದಿದ್ದು, ಪರಿಸರದ ಮನೆಗಳಿಗೆ ಅಲ್ಲದೆ ಕೃಷಿಗೂ ಹಾನಿಯಾಗುತ್ತಿದೆ. ಈ ಕುರಿತು ನಾವು ಕಬಕ ಮತ್ತು ಕೊಡಿಪ್ಪಾಡಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ, ಜಿಲ್ಲಾಧಿಕಾರಿಗಳಿಗೆ , ಗಣಿ ಇಲಾಖೆಯ ಅಧಿಕಾರಿಗಳಿಗೆ ಮತ್ತು ಲೋಕಾಯುಕ್ತರಿಗೆ ದೂರು ನೀಡಿದ್ದರೂ ಈ ತನಕ ಯಾವುದೇ ಸ್ಪಂದನೆ ಸಿಕ್ಕಿಲ್ಲ . ಈ ತನಕ ಅಧಿಕಾರಿಗಳು ತನಿಖೆ ನಡೆಸಿಲ್ಲ ಎಂದು ಆರೋಪಿಸಿದರು.

Related posts

Leave a Reply