Header Ads
Header Ads
Breaking News

ಪುತ್ತೂರು ತಾಲೂಕಿನ ವೈದ್ಯರಿಂದ ಸಾಂಕೇತಿಕ ಬಂದ್ : ತರ್ತು ಚಿಕಿತ್ಸೆ ಸ್ಪಂದಿಸಿ ವೃತ್ತಿ ಕಾಳಜಿ ಮೆರೆದ ವೈದ್ಯರು

ಪುತ್ತೂರು; ನೂತನ ರಾಷ್ಟ್ರೀಯ ವೈದ್ಯಕೀಯ ಮಸೂದೆಯನ್ನು ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘ ಕರೆ ನೀಡಿದ್ದ ಒಂದು ದಿನದ ಸಾಂಕೇತಿಕ ಬಂದ್ ಗೆ ಪುತ್ತೂರು ತಾಲೂಕಿನ ವೈದ್ಯರು ಬುಧವಾರ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ವ್ಯಕ್ತಪಡಿಸುವ ಜತೆಗೆ ತುರ್ತು ಚಿಕಿತ್ಸೆಗೆ ಸ್ಪಂಧಿಸುವ ಮೂಲಕ ವೃತ್ತಿ ಕಾಳಜಿ ಮೆರೆದರು. 

ಪುತ್ತೂರು ತಾಲೂಕಿನಲ್ಲಿ ಸಾಂಕ್ರಾಮಿಕ ರೋಗಗಳಾದ ಡೆಂಗ್ಯೂ, ಮಲೇರಿಯಾ ಮತ್ತು ಜ್ವರ ಪೀಡಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳು ಹೆಚ್ಚಿನ ಸಂಖ್ಯೆ ಕಂಡುಬರುತ್ತಿದೆ. ಈ ಹಿನ್ನಲೆಯಲ್ಲಿ ವೈದ್ಯರು ತುರ್ತು ಚಿಕಿತ್ಸೆಗೆ ಸ್ಪಂಧಿಸುವ ನಿರ್ಧಾರದೊಂದಿಗೆ ಪ್ರತಿಭಟನೆಯನ್ನು ಸಾಂಕೇತಿಕ ರೂಪದಲ್ಲಿ ನಡೆಸಿದರು. ಖಾಸಗಿ ಆಸ್ಪತ್ರೆಗಳಲ್ಲಿ ಒಳ ರೋಗಿಗಳ ಮತ್ತು ತುರ್ತು ಸಂದರ್ಭಗಳ ವೈದ್ಯಕೀಯ ಸೇವೆಯನ್ನು ರೋಗಿಗಳಿಗೆ ನೀಡಲಾಯಿತು.
ವೈದ್ಯರ ಮುಷ್ಕರಕ್ಕೆ ಪುತ್ತೂರಿನ ಭಾರತೀಯ ವೈದ್ಯಕೀಯ ಸಂಘವು ತನ್ನ ಪೂರ್ಣ ಬೆಂಬಲವನ್ನು ವ್ಯಕ್ತ ಪಡಿಸಿ ತುರ್ತು ಚಿಕಿತ್ಸೆ ನೀಡುವ ಮೂಲಕ ಸಾಂಕೇತಿಕವಾಗಿ ಮುಷ್ಕರದಲ್ಲಿ ಪಾಲ್ಗೊಂಡಿದ್ದರು.

Related posts

Leave a Reply

Your email address will not be published. Required fields are marked *