Header Ads
Header Ads
Breaking News

ಪುತ್ತೂರು ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಆಗಸ್ಟ್ 24-25ರಂದು ಕಲೋತ್ಸವ ಸ್ಪರ್ಧೆಗಳು ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯ ಡಿ.ಎನ್ ಹೇಳಿಕೆ

ಪುತ್ತೂರು : ದ.ಕ.ಜಿಪಂ ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವಶಿಕ್ಷಣ ಅಭಿಯಾನ, ಹಾರಾಡಿ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸ್ಪರ್ಧೆಗಳು ಆ24 ಹಾಗೂ 25 ರಂದು ಹಾರಾಡಿ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯ ಡಿ.ಎನ್. ತಿಳಿಸಿದರು.ಅವರು ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಕುರಿತು ವಿವರ ನೀಡಿ, ಈ ಬಾರಿ ಕಾರ್ಯಕ್ರಮವನ್ನು ಸರಕಾರಿ ಶಾಲೆಯಲ್ಲಿ ಹಮ್ಮಿಕೊಂಡಿರುವುದು ವಿಶೇಷವಾಗಿದೆ. ಇದಕ್ಕಾಗಿ ಈಗಾಗಲೇ ಸಿದ್ಧತೆಗಳು ನಡೆಯಲಿದ್ದು, ಕಲಾಹಾರ-2018 ಎಂಬ ಪರಿಕಲ್ಪನೆಯಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಒಟ್ಟು ಸ್ಪರ್ಧೆಗಳ ಪೈಕಿ ಆ.24ರಂದು ಪ್ರಾಥಮಿಕ ವಿಭಾಗದಲ್ಲಿ ಒಟ್ಟು 14 ವೇದಿಕೆಗಳಲ್ಲಿ ೫೦ ಸ್ಪರ್ಧೆಗಳು ನಡೆಯಲಿದ್ದು,2634 ಸ್ಪರ್ಧಿಗಳು ಮೊದಲ ದಿನ ಭಾಗವಹಿಸಲಿದ್ದಾರೆ. ಆ.25 ರಂದು ಪ್ರೌಢಶಾಲಾ ವಿಭಾಗದಲ್ಲಿ ಒಟ್ಟು 13 ವೇದಿಕೆಗಳಲ್ಲಿ24 ಸ್ಪರ್ಧೆಗಳು ನಡೆಯಲಿದ್ದು, 440 ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ. ಸುಮಾರು 100 ಮಂದಿ ತೀರ್ಪುಗಾರರು ಆಗಮಿಸಲಿದ್ದಾರೆ ಎಂದು ಅವರು ವಿವರಿಸಿದರು.ಪತ್ರಿಕಾಗೋಷ್ಠಿಯಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಮೋನಪ್ಪ ಪೂಜಾರಿ, ಹಾರಾಡಿ ಶಾಲಾ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಪ್ರತಿಮಾ ಯು.ರೈ, ಪ್ರಚಾರ ಸಮಿತಿ ಸಂಚಾಲಕ ದಿವಾಕರ ಆಚಾರ್ಯ, ಶಾಲಾ ಮುಖ್ಯ ಶಿಕ್ಷಕ ಮುದರ ಎಸ್. ಉಪಸ್ಥಿತರಿದ್ದರು.

Related posts

Leave a Reply