Header Ads
Header Ads
Breaking News

ಪುತ್ತೂರು ತಾಲೂಕು ಮಟ್ಟದ 66ನೇ ಅಖಿಲ ಭಾರತ ಸಹಕಾರ ಸಪ್ತಾಹ : ವಾಣಿಜ್ಯ ಸಂಕೀರ್ಣ ಉದ್ಘಾಟಿಸಿದ ಡಾ. ಎಂ.ಎನ್. ರಾಜೇಂದ್ರ ಕುಮಾರ್

ಪುತ್ತೂರು :ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ನಡೆದ ಪುತ್ತೂರು ತಾಲೂಕು 66ನೇ ಅಖಿಲ ಭಾರತ ಸಹಕಾರ ಸಪ್ತಾಹ, ಮುಂಡೂರು ಸಹಕಾರಿ ಸಂಘದ ರೂ. 1.68 ಕೋಟಿ ವೆಚ್ಚದ ವಿಸ್ತೃತ ಗೋದಾಮು,ವಾಣಿಜ್ಯ ಸಂಕೀರ್ಣವನ್ನು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು ಉದ್ಘಾಟಿಸಿದರು.

ಜಿಲ್ಲೆಯ ಎಲ್ಲಾ ಸಹಕಾರಿ ಸಂಘಗಳಲ್ಲಿ ಅತೀ ಶಿಘ್ರವಾಗಿ ಕಾಮನ್ ಸಾಪ್ಟ್‌ವೇರ್ (ಹೊಸ ತಂತ್ರಜ್ಞಾನ) ಅಳವಡಿಸಲಾಗುವುದು. ರೈತರ ಭೂಮಿ ದಾಖಲಾತಿ ವ್ಯವಸ್ಥೆಯೊಂದಿಗೆ ಬೆಳಿಗ್ಗೆ ಅರ್ಜಿ ಸಲ್ಲಿಸಿದವರಿಗೆ ಸಂಜೆಯೊಳಗೆ ಸಾಲ ಸೌಲಭ್ಯ ನೀಡುವ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲ ಹಾಗೂ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷರಾಗಿರುವ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು ಹೇಳಿದರು.

ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ನಡೆದ ಪುತ್ತೂರು ತಾಲೂಕು 66ನೇ ಅಖಿಲ ಭಾರತ ಸಹಕಾರ ಸಪ್ತಾಹ, ಮುಂಡೂರು ಸಹಕಾರಿ ಸಂಘದ ರೂ.1.68 ಕೋಟಿ ವೆಚ್ಚದ ವಿಸ್ತೃತ ಗೋದಾಮು,ವಾಣಿಜ್ಯ ಸಂಕೀರ್ಣ ಹಾಗೂ ವಸತಿ ಸಮುಚ್ಚಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ನೂತನ ಗೋದಾಮು ,ವಾಣಿಜ್ಯ ಸಂಕೀರ್ಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೇಶದ ಆರ್ಥಿಕ ವ್ಯವಸ್ಥೆ ಕಷ್ಟಕರ ಸ್ಥಿತಿಯಲ್ಲಿದೆ, ಜಿಡಿಪಿ ಕುಸಿದಿದೆ. ಆದರೆ ಎಲ್ಲಿಯೂ ಸಹಕಾರಿ ಕ್ಷೇತ್ರ ಕುಸಿತ ಕಂಡಿಲ್ಲ. ಜಿಲ್ಲೆಯ ಸಹಕಾರಿ ಕ್ಷೇತ್ರ ಬಲಿಷ್ಠವಾಗಿದೆ. ಜಿಡಿಪಿ ಹೆಚ್ಚಿಸುವಲ್ಲಿ ಸಹಕಾರಿ ಕ್ಷೇತ್ರ ಸಹಕಾರಿಯಾಗುತ್ತದೆ ಎಂದ ಅವರು ಸಹಕಾರಿ ಸಂಸ್ಥೆಗಳು ಕಾರ್ಪೋರೇಟ್ ಸಂಸ್ಥೆಗಳಿಗಿಂತಲೂ ಮೇಲಾಗಿ ಕೆಲಸ ಮಾಡುತ್ತಿದ್ದು, ದೇಶದ ಗೌರವ ಉಳಿದಿದ್ದರೆ ಅದು ಸಹಕಾರಿ ಕ್ಷೇತ್ರದಿಂದ ಮಾತ್ರ ಎಂದರು.
 

2 ಸಭಾ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಸಂಜೀವ ಮಠಂದೂರು ಅವರು, ಜನತೆಯ ನೆಮ್ಮದಿಯ ,ಸಮೃದ್ಧಿಯ ಬದುಕಿಗೆ ಸಹಕಾರಿ ಸಂಘ ಅವಿಭಾಜ್ಯ ಅಂಗವಾಗಿದೆ, ಜನತೆಯ ಬೇಕು-ಬೇಡಗಳನ್ನು ಈಡೇರಿಸುವ ಕೆಲಸ ಸಹಕಾರಿ ಸಂಘಗಳಿಂದ ನಡೆದಿದೆ. ಸಹಕಾರ ಮನೋಭಾವದ ಬದ್ಧತೆಯೊಂದಿಗೆ ಜಿಲ್ಲೆಯಲ್ಲಿ ಸಹಕಾರಿ ಸಂಘಗಳು ರಾಷ್ಟ್ರೀಕೃತ ಬ್ಯಾಂಕುಗಳಿಗಿಂತ ಕಡಿಮೆ ಇಲ್ಲ ಎಂಬ ರೀತಿಯಲ್ಲಿ ಬೆಳೆದಿದೆ. ಮಹಿಳೆಯರ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವ ವ್ಯವಸ್ಥೆ ನವೋದಯ ಒಕ್ಕೂಟಗಳಿಂದ ಆಗಿದೆ ಎಂದರು.

ವಸತಿ ಸಮುಚ್ಚಯ ಉದ್ಘಾಟನೆ ಮಾಡಿದ ರಾಜ್ಯದ ಮಾಜಿ ಸಚಿವ ವಿನಯಕುಮಾರ್ ಸೊರಕೆ ಅವರು, ಸಹಕಾರಿ ಉದ್ದೇಶಗಳನ್ನು ಜನತೆಯ ಮನೆಬಾಗಿಲಿಗೆ ತಲುಪಿಸುವ ಕೆಲಸದೊಂದಿಗೆ ಜನತೆಯ ವಿಶ್ವಾಸದ ಕ್ಷೇತ್ರವಾಗಿ ಸಹಕಾರಿ ಬ್ಯಾಂಕ್‌ಗಳು ಬೆಳೆದಿವೆ. ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ರಹಿತವಾಗಿ ಜಿಲ್ಲಾ ಸಹಕಾರಿ ಬ್ಯಾಂಕ್ ಮತ್ತು ಪ್ರಾಥಮಿಕ ಸಹಕಾರಿ ಬ್ಯಾಂಕುಗಳು ಅನ್ಯೋನ್ಯ ಒಡನಾಟದೊಂದಿಗೆ ಕೆಲಸ ಮಾಡುವ ವ್ಯವಸ್ಥೆ ರಾಜೆಂದ್ರಕುಮಾರ್ ಅವರ ಮೂಲಕ ಆಗಿದೆ ಎಂದರು. ಜಿಲ್ಲೆಯ ವಿಲೀನವಾದ ರಾಷ್ಟ್ರೀಕೃತ ಬ್ಯಾಂಕ್‌ಗಳ ಹೆಸರು ಉಳಿಸುವ ಕೆಲಸ ಮಾಡಬೇಕು ಎಂದು ಅವರು ಶಾಸಕರನ್ನು ಆಗ್ರಹಿಸಿದರು.

ಮುಖ್ಯ ಅತಿಥಿಯಾಗಿ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ,ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ,ಮಂಗಳೂರು ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರ್ರಸಾದ್ ಕೌಶಲ್ ಶೆಟ್ಟಿ ಬೆಳ್ಳಿಪ್ಪಾಡಿ ,ತಾ.ಪಂ.ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಮಂಗಳೂರು ಕೆ.ಎಂ.ಎಫ್ ಮಾಜಿ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಎಸ್.ಬಿ.ಜಯರಾಮ ರೈ ಜಳೆಜ್ಜ ಮತ್ತು ಶಶಿಕುಮಾರ್ ರೈ ಬಾಲ್ಯೊಟ್ಟು, ಪುತ್ತೂರು ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರವೀಣ್ ರೈ ಮೇನಾಲ, ಮುಂಡೂರು ಗ್ರಾ.ಪಂ. ಅಧ್ಯಕ್ಷ ವಸಂತ ಎಸ್.ಡಿ, ದ.ಕ.ಜಿಲ್ಲಾ ಸಹಕಾರಿ ಸಂಘಗಳ ಉಪನಿರ್ದೇಶಕ ಪ್ರವೀಣ್ ಬಿ.ನಾಯಕ್, ಮಂಗಳೂರು ಕೆ.ಎ.ಎಫ್.ನಿರ್ದೇಶಕ ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರ್, ಮಂಗಳೂರು ಸಹಕಾರಿ ಯೂನಿಯನ್ ನಿರ್ದೇಶಕ ಎನ್.ರಾಜಶೇಖರ್ ಜೈನ್ ಅವರು ಅತಿಥಿಗಳಾಗಿದ್ದರು.

Related posts

Leave a Reply

Your email address will not be published. Required fields are marked *