

ಪುತ್ತೂರು ತಾಲ್ಲೂಕಿನ ಉಪ್ಪಿನಂಗಡಿಯಲ್ಲಿ ಮಗುಚಿ ಬಿದ್ದ ಡೀಸೆಲ್ ಟ್ಯಾಂಕರ್. ತಾಮುಂದು ನಾಮುಂದು ಎಂದು ಡೀಸೆಲ್ ತುಂಬಿಸಿಕೊಳ್ಳಲು ಮುಗಿ ಬಿದ್ದ ಸಾರ್ವಜನಿಕರು. ಪೊಲೀಸರಿಂದ ಲಾಠಿ ಚಾರ್ಜ್.
ಪುತ್ತೂರು: ಉಪ್ಪಿನಂಗಡಿ ಡೀಸೆಲ್ ಟ್ಯಾಂಕರೊಂದು ಮಗುಚಿ ಬಿದ್ದು ಡೀಸೆಲ್ ಸೋರಿಕೆಯಾದ ಕಾರಣ ಡೀಸೆಲ್ ಕೊಂಡೊಯ್ಯಲು ನೂಕುನುಗ್ಗಲಾದ ಘಟನೆ ಉಪ್ಪಿನಂಗಡಿ ಸಮೀಪದ ಬೊಳ್ಳಾರ್ ನಲ್ಲಿ ಮಾ.13ರಂದು ನಡೆದಿದ್ದು. ಸಾರ್ವಜನಿಕರನ್ನು ಲಾಠಿ ಚಾರ್ಜ್ ಮಾಡಿ ಚದುರಿಸುವ ಸ್ಥಿತಿ ಪೆÇಲೀಸರಿಗೆ ಉಂಟಾಯಿತು.
ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬೊಳ್ಳಾರು ಎಂಬಲ್ಲಿ ಮಾ.13ರಂದು ಚಾಲಕನ ನಿಯಂತ್ರಣ ತಪ್ಪಿ ಡೀಸೆಲ್ ಟ್ಯಾಂಕರೊಂದು ಮಗುಚಿ ಬಿದ್ದು ಈ ಸಂದರ್ಭ ಟ್ಯಾಂಕರ್ ನಿಂದ ಡೀಸೆಲ್ ಸೋರಿಕೆಯಾಗತೊಡಗಿತು. ಆಗ ಡೀಸೆಲ್ ಗಾಗಿ ಬಕೆಟ್ ಕ್ಯಾನ್, ಕೊಡಪಾನ, ಹೀಗೆ ಸಿಕ್ಕ ಸಿಕ್ಕ ಪಾತ್ರೆಗಳನ್ನು ಹಿಡಿದುಕೊಂಡು ಬಂದ ಸಾರ್ವಜನಿಕರು ತಾಮುಂದು ನಾ ಮುಂದು ಎಂದು ಡೀಸೆಲ್ ತುಂಬಿಸಿಕೊಳ್ಳಲು ಮುಗಿ ಬಿದ್ದರು. ಕೊನೆಗೆ ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಡೀಸೆಲ್ ತುಂಬಿಸುತ್ತಿದ್ದವರನ್ನು ಲಾಠಿ ಚಾರ್ಜ್ ಮಾಡಿ ಸ್ಥಳದಿಂದ ಓಡಿಸಿದರು. ಟ್ಯಾಂಕರು ಚಾಲಕ ಮತ್ತು ನಿರ್ವಾಹಕ ಅಪಾಯದಿಂದ ಪಾರಾಗಿದ್ದಾರೆ. ಪುತ್ತೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.