Header Ads
Header Ads
Header Ads
Breaking News

ಪುತ್ತೂರು ತಾ.ಪಂನಲ್ಲಿ ಕುಂದುಕೊರತೆಗಳ ಸಭೆ ಅಧಿಕಾರಿಗಳಿಂದ ಹಲವು ವಿಚಾರ್ಗಳ ಬಗ್ಗೆ ಚರ್ಚೆ

ಪುತ್ತೂರು ತಾಲೂಕು ಮಟ್ಟದ ಪರಿಶಿಷ್ಟ ಜಾತಿ, ಪಂಗಡದ ಕುಂದು ಕೊರತೆ ಸಭೆ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಪೊಲೀಸ್ ಅಧೀಕ್ಷಕ ವೇದಮೂರ್ತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಎಸ್ಟಿ, ಎಸ್ಸಿಗಳಿಗೆ ಡಿಸಿ ಮನ್ನಾ ಭೂಮಿಯನ್ನು 1934 ರಲ್ಲಿ ನೀಡಲಾಗಿದೆ. 20 ವರ್ಷದ ಬಳಿಕ ಇದನ್ನು ಅರಣ್ಯ ಇಲಾಖೆ ಹೆಸರಿಗೆ ಮಾಡಲಾಗಿದೆ. ಪುತ್ತೂರು ಉಪನೋಂದಣಿ ಕಚೇರಿಯನ್ನು ಆಸ್ಪತ್ರೆ ಹೆಸರಿಗೆ ವರ್ಗಾಯಿಸಿದಂತೆ ಒಂದೇ ದಿನದಲ್ಲಿ ಅರಣ್ಯ ಇಲಾಖೆಯ ಹೆಸರಿನಲ್ಲಿದ್ದ ಜಾಗವನ್ನು ಎಸ್ಸಿ, ಎಸ್ಟಿಗಳ ಹೆಸರಿಗೆ ಬದಲಾಯಿಸಿ ಎಂಬ ಆಗ್ರಹ ಕೇಳಿ ಬಂತು.

ಅಂಬೇಡ್ಕರ್ ತತ್ವರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಗಿರಿಧರ್ ನಾಯ್ಕ್ ಮಾತನಾಡಿ, ಇತ್ತೀಚೆಗೆ ಗೇರು ಅಭಿವೃದ್ಧಿ ನಿಗಮದ ಯು.ಟಿ. ಖಾದರ್ ಬಂದು, ಎಸ್ಸಿ, ಎಸ್ಟಿಗಳಿಗೆ ಜಾಗ ನೀಡುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಇನ್ನೊಂದು ಬಾರಿ ಅವರು ಪುತ್ತೂರಿಗೆ ಬಂದರೆ ಘೇರಾವ್ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಅನಂತಶಂಕರ, ಜಾಗ ಅರಣ್ಯ ಇಲಾಖೆ ಹೆಸರಿನಲ್ಲಿದೆ. ಈ ಬಗ್ಗೆ ಸಮಿತಿ ತೀರ್ಮಾನ ಕೈಗೊಂಡ ಬಳಿಕವಷ್ಟೇ ಕ್ರಮ ಕೈಗೊಳ್ಳಲು ಸಾಧ್ಯ ಎಂದರು.
ದಲಿತ ಮುಖಂಡ ಆನಂದ ಮಿತ್ತಬಲು, ಇಂಜಿನಿಯರ್ ಜಗದೀಶ್ ಯು., ತಹಶೀಲ್ದಾರ್ ಅನಂತ ಶಂಕರ್, ಮೀನಾಕ್ಷಿ ಮಂಜುನಾಥ್, ಲಲಿತಾ ಈಶ್ವರ್, ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ಜತೆಯಲ್ಲಿದ್ದರು.

ವರದಿ: ಪ್ರವೀಣ್ ಪುತ್ತೂರು

Related posts

Leave a Reply