Header Ads
Header Ads
Header Ads
Breaking News

ಪುತ್ತೂರು ದಸರಾ ಉತ್ಸವ ನಾನಾ ಧಾರ್ಮಿಕ ವಿಶೇಷತೆಗಳೊಂದಿಗೆ ಆಯೋಜನೆ ಸಂಚಾಲಕ ಕುಕ್ಕಾಡಿ ತಂತ್ರಿ ಪ್ರೀತಂ ಪುತ್ತೂರಾಯ ಹೇಳಿಕೆ

ಪುತ್ತೂರು ದಸರಾ ನವದುರ್ಗಾರಾಧನಾ ಸಮಿತಿಯ ಆಶ್ರಯದಲ್ಲಿ ನಡೆಯುತ್ತಿರುವ ಪುತ್ತೂರು ದಸರಾ ಉತ್ಸವ ಈ ಬಾರಿ ೧೫ನೇ ವರ್ಷದಲ್ಲಿ ನಡೆಯಲಿದ್ದು, ನಾನಾ ಧಾರ್ಮಿಕ ವಿಶೇಷತೆಗಳೊಂದಿಗೆ ನಡೆಯಲಿದೆ ಎಂದು ಸಮಿತಿಯ ಸಂಚಾಲಕರಾದ ಕುಕ್ಕಾಡಿ ತಂತ್ರಿ ಪ್ರೀತಂ ಪುತ್ತೂರಾಯ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪುತ್ತೂರಿನ ಭಕ್ತ ಜನರ ಸಹಾಯ, ಸಹಕಾರದೊಂದಿಗೆ ಕಳೆದ 14 ವರ್ಷಗಳಿಂದ ದಸರಾ ಉತ್ಸವ ನಡೆಯುತ್ತಾ ಬಂದಿದೆ. ಮಂಗಳೂರಿನ ಕುದ್ರೋಳಿ ಕ್ಷೇತ್ರ ಹೊರತುಪಡಿಸಿದರೆ ಇಡೀ ರಾಜ್ಯದಲ್ಲೇ ನವದುರ್ಗೆಯರನ್ನು ಸ್ಥಾಪಿಸಿ ದಸರಾ ಆಚರಣೆ ಮಾಡುವ ಮತ್ತೊಂದು ಸ್ಥಳವಿದ್ದರೆ ಅದು ಪುತ್ತೂರು ಮಾತ್ರ. ನವದುರ್ಗೆಯರು, ಶಾರದೆ ಮತ್ತು ಗಣಪತಿಯ ಮೂರ್ತಿಗಳನ್ನು ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಸ್ಥಾಪಿಸಿ ಆರಾಧನೆ ಮಾಡಲಾಗುತ್ತದೆ. ಅಕ್ಟೋಬರ್ 2 ರಂದು ದಸರಾ ಮೆರವಣಿಗೆ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಕಾರ್ಯಾಧ್ಯಕ್ಷ ರಾಜೇಶ್ ಬನ್ನೂರು, ಸಹ ಸಂಚಾಲಕರಾದ ಅರುಣ್ ಕುಮಾರ್ ಪುತ್ತಿಲ, ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ ಕೆ., ಜತೆ ಕಾರ್ಯದರ್ಶಿ ಲೋಕೇಶ್ ಬನ್ನೂರು ಉಪಸ್ಥಿತರಿದ್ದರು.

Related posts

Leave a Reply