Header Ads
Header Ads
Header Ads
Breaking News

ಪುತ್ತೂರು ನಗರಸಭಾ ಅಧ್ಯಕ್ಷರನ್ನು ’ಅನರ್ಹ’ಗೊಳಿಸಿ: ಬಿಜೆಪಿ ಸದಸ್ಯರಿಂದ ಜಿಲ್ಲಾಧಿಕಾರಿಗೆ ಮನವಿ

ಪುತ್ತೂರು ನಗರಸಭೆಯಲ್ಲಿ ಲೋಪದೋಷಗಳಿಗೆ ನಗರಸಭೆಯ ಅಧ್ಯಕ್ಷರೇ ಹೊಣೆಗಾರರಾಗಿದ್ದು, ನಿಯಮಗಳನ್ನು ಉಲ್ಲಂಘಿಸಿರುವ ಇವರನ್ನು ಅಧ್ಯಕ್ಷ ಪದವಿಯಿಂದ ತಕ್ಷಣ ಅನರ್ಹಗೊಳಿಸಬೇಕು ಎಂದು ನಗರಸಭಾ ಬಿಜೆಪಿ ಸದಸ್ಯರು ಜಿಲ್ಲಾಧಿಕಾರಿಯವರನ್ನು ಆಗ್ರಹಿಸಿದ್ದಾರೆ.


ಈ ಬಗ್ಗೆ ಜಿಲ್ಲಾಧಿಕಾರಿಯವರಿಗೆ ಪುತ್ತೂರು ನಗರಸಭಾ ಆಯುಕ್ತರ ಮೂಲಕ ಮನವಿ ಅರ್ಪಿಸಿದ ಸದಸ್ಯರು ನಗರಸಭೆಯ ಅಧ್ಯಕ್ಷರ ದುರಾಡಳಿತದ ಬಗ್ಗೆ ಜಿಲ್ಲಾಧಿಕಾರಿ ಕ್ರಮಕೈಗೊಳ್ಳಲು ಸರಕಾರಕ್ಕೆ ಶಿಫಾರಸ್ಸು ಮಾಡಿದ್ದು, ಇದರಲ್ಲಿ ಉಪಾಧ್ಯಕ್ಷರ ಮೇಲೂ ಕ್ರಮ ತೆಗೆದುಕೊಳ್ಳಲು ಶಿಫಾರಸ್ಸು ಮಾಡಿದ್ದಾರೆ ಎಮದು ತಿಳಿದುಬಂದಿದ್ದು, ಇದರಲ್ಲಿ ಉಪಾಧ್ಯಕ್ಷ ಯಾವುದೇ ಹೊಣೆಗಾರಿಕೆ ಇಲ್ಲ. ಅಧ್ಯಕ್ಷರು ಕರ್ನಾಟಕ ಮುನ್ಸಿಪಲ್ ಅಧಿನಿಯಮದಂತೆ ತಮ್ಮ ಜವಾಬ್ದಾರಿಯನ್ನು ನಿಭಾಯಿಸದಿರುವುದರಿಂದ ಬಿಜೆಪಿ ಸದಸ್ಯರು ಮಾರ್ಚ್ 10ರಂದು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾಗಿದೆ. ಇದರಲ್ಲಿ ಉಪಾಧ್ಯಕ್ಷರ ಪಾತ್ರವಿಲ್ಲ. ಹಾಗಾಗಿ ಇವರ ಮೇಲೆ ಕ್ರಮ ಕೈಗೊಳ್ಳುವುದು ಸರಿಯಲ್ಲ.
ಈ ವರದಿಯಲ್ಲಿ ನಮೂದಿಸಿರುವಂತೆ ಅಧ್ಯಕ್ಷರು ನಿಯಮ ಪ್ರಕಾರ ನಡೆಸಬೇಕಾದ ಸಾಮಾನ್ಯ ಸಭೆಗಳನ್ನು ನಡೆಸಿಲ್ಲ. ಸಭಾ ನಿರ್ಣಯದ ಪುಸ್ತಕಗಳನ್ನು ಅನಧಿಕೃತವಾಗಿ ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ಕಾನೂನು ಪ್ರಕಾರ ಸ್ಥಾಯಿ ಸಮಿತಿಗಳನ್ನು ರಚನೆ ಮಾಡಿರುವುದಿಲ್ಲ. ಸಭೆಯ ಬಹುಮತದ ನಿರ್ಣಯಗಳನ್ನು ಯಥಾವತ್ತಾಗಿ ನಿರ್ಣಯ ಪುಸ್ತಕದಲ್ಲಿ ದಾಖಲಿಸಿರುವುದಿಲ್ಲ. ಕಾಮಗಾರಿಗಳಿಗೆ ನಗರಸಭೆಯ ಅನುಮೋದನೆ ಪಡೆಯುತ್ತಿಲ್ಲ. ನಗರಸಭಾ ಸದಸ್ಯರ ವಿರುದ್ಧ ಪೊಲೀಸ್ ದೂರು ನೀಡುವ ಮೂಲಕ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಬಿಜೆಪಿ ನಗರ ಮಂಡಲದ ಅಧ್ಯಕ್ಷ ಹಾಗೂ ನಗರಸಭಾ ಸದಸ್ಯರಾದ ಜೀವಂಧರ್ ಜೈನ್ ಮಾತನಾಡಿ, ನಗರಸಭಾ ಅಧ್ಯಕ್ಷರ ಆಡಳಿತ ಸಂಪೂರ್ಣ ವ್ಯೆಫಲ್ಯ ಕಂಡಿದ್ದು, ಬಿಜೆಪಿ ಸದಸ್ಯರಿಂದ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು ಸಾರ್ವಜನಿಕರಲ್ಲಿ ಸುಳ್ಳು ಮಾಹಿತಿಯನ್ನು ಹರಡುವ ಕೆಲಸ ನಗರಸಭಾ ಕಾಂಗ್ರೇಸ್ ಸದಸ್ಯರು ನಡೆಸುತ್ತಿದ್ದಾರೆ. ಜೂನ್ 21ಕ್ಕೆ ಸಾಮಾನ್ಯ ಸಭೆ ನಡೆಸಿದ ನಂತರ ಇದುವರೆಗೆ ಸಾಮಾನ್ಯ ಸಭೆಯನ್ನು ನಡೆಸಲಾಗಿಲ್ಲ. ನಗರಸಭೆಯ ಎಲ್ಲಾ ಲೋಪದೋಷಗಳಿಗೆ ಇಲ್ಲಿನ ಅಧ್ಯಕ್ಷರು ಹೊಣೆಗಾರರಾಗಿದ್ದು, ಇವರನ್ನು ತಕ್ಷಣ ಅಧ್ಯಕ್ಷ ಪದವಿಯಿಂದ ಅನರ್ಹಗೊಳಿಸಬೇಕು. ಜನತೆಗೆ ಸತ್ಯ ಹೇಳುವ ಕಾರಣಕ್ಕಾಗಿ ಈ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡುವುದಾಗಿ ತಿಳಿಸಿದರು.
ನಿಯೋಗದಲ್ಲಿ ಉಪಾಧ್ಯಕ್ಷ ವಿಶ್ವನಾಥ ಗೌಡ, ವಿರೋಧ ಪಕ್ಷದ ನಾಯಕ ರಾಜೇಶ್ ಬನ್ನೂರು, ಸದಸ್ಯರಾದ ರಮೇಶ್ ರೈ, ಸುಂದರ ಪೂಜಾರಿ ಬಡಾವು, ವಿನಯ ಭಂಡಾರಿ, ಸುಧೀಂದ್ರ ಪ್ರಭು, ಚಂದ್ರ ಸಿಂಗ್,ಹರೀಶ್ ನಾಯ್ಕ್, ಸೋಮಪ್ಪ ಸಫಲ್ಯ, ಬಾಲಚಂದ್ರ, ವನಿತಾ, ಯಶೋದಾ ಹಾಗೂ ಶ್ಯಾಮಲಾ ಉಪಸ್ಥಿತರಿದ್ದರು.

Related posts

Leave a Reply