Header Ads
Header Ads
Breaking News

ಪುತ್ತೂರು ನಗರಸಭೆಯಲ್ಲಿ ಅಯವ್ಯಯಕ್ಕೆ ಪೂರ್ವಭಾವಿಯಾಗಿ ಸಭೆ

ಪುತ್ತೂರು ನಗರಸಭೆಯಲ್ಲಿ ಆಯವ್ಯಯಕ್ಕೆ ಮುಂಚಿತವಾಗಿ ಸಂಘ ಸಂಸ್ಥೆಗಳು, ಸಾರ್ವಜನಿಕ ಸಲಹೆ -ಸೂಚನೆ ಸ್ವೀಕಾರ ಪೂರ್ವಭಾವಿ ಸಭೆಯನ್ನು ಶುಕ್ರವಾರ ನಗರಸಭಾ ಸಭಾಂಗಣದಲ್ಲಿ ಆಯೋಜಿಸಲಾಯಿತು.
ಪೌರಾಯುಕ್ತೆ ರೂಪಾ ಟಿ. ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಗರದ ಸಂಘ ಸಂಸ್ಥೆಗಳ ಪ್ರಮುಖರು, ಸಾರ್ವಜನಿಕರು ಪುತ್ತೂರಿನ ಅಭಿವೃದ್ಧಿಗೆ ಪೂರಕವಾಗಿ ಬಜೆಟ್ ತಯಾರಿಗೆ ಸಲಹೆ -ಸೂಚನೆಗಳನ್ನು ನೀಡಿದರು. ಆರಂಭದಲ್ಲಿ ಪೌರಾಯುಕ್ತೆ ರೂಪಾ ಟಿ. ಶೆಟ್ಟಿ ಮಾತನಾಡಿ, ಎಲ್ಲರ ಸಲಹೆ ಸೂಚನೆಗಳನ್ನು ಪಡೆದುಕೊಂಡು ಬಜೆಟ್ ರಚಿಸುವ ನಿಟ್ಟಿನಲ್ಲಿ ಸಭೆ ಕರೆಯಲಾಗಿದೆ. ಕಳೆದ ವರ್ಷ ನಗರದಭೆಯ ಆದಾಯವನ್ನು ಪರಿಗಣಿಸಿ39 ಕೋಟಿ ರೂ. ಗಳ ಬಜೆಟ್ ತಯಾರಿಸಲಾಗಿತ್ತು. ಈ ವರ್ಷ ಒಂದಷ್ಟು ಆದಾಯ ಮೂಲಗಳನ್ನು ಹೆಚ್ಚಿಸಿಕೊಳ್ಳುವ ಯೋಜನೆಯೊಂದಿಗೆ ಸುಮಾರು 43 ಕೋಟಿ ರೂ. ಬಜೆಟ್ ತಯಾರಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದರು.ಕಳೆದ ವರ್ಷದಲ್ಲಿ ನೀರಿನ ಶುಲ್ಕದಿಂದ 3 ಕೋಟಿ ರೂ. ಸಂಗ್ರಹವಾಗಿದೆ. ತೆರಿಗೆ 3 ಕೋಟಿ ರೂ. ವಸೂಲಾತಿ ಆಗಿದೆ. ಕಟ್ಟಡ ವ್ಯಾಪ್ತಿಯನ್ನು ವಿಸ್ತರಿಸಿದ್ದರೂ ಹಿಂದಿನ ತೆರಿಗೆಯನ್ನೇ ಕಟ್ಟುವವರಿಂದ ಸೇರಿದಂತೆ ಈ ಆದಾಯವನ್ನು ಇನ್ನೂ ಹೆಚ್ಚಿಸುವ ಅಂದಾಜು ಮಾಡಲಾಗಿದೆ. ಕಟ್ಟಡ ಪರವಾನಿಗೆಯಿಂದ 35 ಲಕ್ಷ ರೂ. ಅಂದಾಜು ಆದಾಯ ಲಭಿಸುತ್ತದೆ. ಉದ್ಯಮ ಪರವಾನಿಗೆಯಲ್ಲಿ ಇನ್ನಷ್ಟು ಆದಾಯವನ್ನು ಗಳಿಸಬಹುದು ಎಂದರು.

ಕಳೆದ ಸಾಲಿನಲ್ಲಿ 14ನೇ ಹಣಕಾಸು ಯೋಜನೆಯಲ್ಲಿ 2.80 ಕೋಟಿ ರೂ., ಎಸ್‌ಎಫ್‌ಸಿಯಲ್ಲಿ 2.67 ಕೋಟಿ ರೂ. , ವಾಟರ್ ಸಪ್ಲೈನಲ್ಲಿ 10 ಲಕ್ಷ ಆದಾಯ ಗಳಿಸಿದೆ. ನಗರೋತ್ಥಾನದ ಅನುದಾನಗಳನ್ನು ಹೊರತುಪಡಿಸಿ ಬಜೆಟ್ ಸಿದ್ಧಪಡಿಸಲಾಗುತ್ತದೆ. ಇವುಗಳನ್ನು ಹೊರತುಪಡಿಸಿ ಆದಾಯ ಕ್ರೋಢೀಕರಣಕ್ಕೆ ಗಮನಹರಿಸುವ ಅಗತ್ಯವಿದೆ ಎಂದು ಹೇಳಿದರು.
ವರ್ತಕ ಸಂಘದ ಕಾರ್ಯದರ್ಶಿ ರಫೀಕ್ ಮಾತನಾಡಿ, ಡಾ| ಶಿವರಾಮ ಕಾರಂತ ಬಾಲವನದಲ್ಲಿ ಮೂಲಭೂತ ವ್ಯವಸ್ಥೆಯನ್ನು ಹೆಚ್ಚಿಸಬೇಕು. ಬಾಲವನದಲ್ಲಿ ಮಗುಸ್ನೇಹೀ ವ್ಯವಸ್ಥೆಯನ್ನು ಕಲ್ಪಿಸಲು ಅನುದಾನವಿರಿಸಬೇಕು ಎಂದು ವಿನಂತಿಸಿದರು.ನೀರಿನ ಯೋಜನೆ 
ನಗರಸಭೆಗೆ ಸಂಬಂಽಸಿದಂತೆ 67 ಕೋಟಿ ರೂ. ಹಾಗೂ ಜಿಎಸ್‌ಟಿ ಸೇರಿ 102ಕೋಟಿ ರೂ. ವೆಚ್ಚದ ನೀರಿನ ಯೋಜನೆಯ ಟೆಂಡರ್ ಆಗಿದೆ. ಆ ಮೂಲಕ ಎರಡು ವರ್ಷಗಳಲ್ಲಿ ಪುತ್ತೂರಿನಲ್ಲಿ ನೀರಿಗೆ ಸಂಬಂಽಸಿದ ವ್ಯವಸ್ಥೆ ಸರಿಯಾಗಲಿದೆ, ಸ್ವಚ್ಛ ಭಾರತ್ ಯೋಜನೆಯಲ್ಲಿ ಡಂಪಿಂಗ್ ಯಾರ್ಡ್‌ನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ 4.50 ಕೋಟಿ ರೂ. ಯೋಜನೆಯ ಟೆಂಡರ್ ಹಂತದಲ್ಲಿದೆ ಎಂದು ಪೌರಾಯುಕ್ತೆ ರೂಪಾ ಶೆಟ್ಟಿ ತಿಳಿಸಿದರು.

ನಗರಸಭಾ ಸದಸ್ಯ ಬಾಲಚಂದ್ರ ಮಾತನಾಡಿ, ಈಗಾಗಲೇ ಉದ್ಯಮ ಪರವಾನಿಗೆ ತೆರಿಗೆ ಮಿತಿಗಿಂತ ಹೆಚ್ಚು ಹೇರಿರುವುದರಿಂದ ಹೊರೆಯಾಗುತ್ತಿದೆ. ಮೂಲಧನ ಸಾರ್ವಜನಿಕರಿಂದ ಸಂಗ್ರಹಿಸುವುದು ಕಷ್ಟಕರ. ನಮ್ಮಲ್ಲಿ ಎಲ್ಲಾ ವಿಚಾರಗಳಲ್ಲಿ ನಿರ್ವಹಣೆ ಸರಿಯಿಲ್ಲದ ಕಾರಣ ಹಣ ಪೋಲಾಗುತ್ತಿದೆ. ಸುಂದರ ಪುತ್ತೂರಿಗಾಗಿ ಕಸ ವಿಲೇವಾರಿಗೆ ಹೆಚ್ಚು ಒತ್ತು ನೀಡಬೇಕು ಎಂದರು.

ವೇದಿಕೆಯಲ್ಲಿ ನಗರಸಭೆ ಲೆಕ್ಕ ಅಽಕ್ಷಕ ಸಿ.ಆರ್. ದೇವಾಡಿಗ, ಕಂದಾಯ ಅಽಕಾರಿ ರಾಮಯ್ಯ ಗೌಡ, ಹಿರಿಯ ಆರೋಗ್ಯ ನಿರೀಕ್ಷಕರಾದ ರಾಮಚಂದ್ರ.ನಗರಸಭಾ ಸಮುದಾಯ ಸಂಘಟಕ ಉಸ್ಮಾನ್ ಉಪಸ್ಥಿತರಿದ್ದರು. ನಗರಸಭಾ ಸದಸ್ಯರು, ಸಂಘ ಸಂಸ್ಥೆಗಳ ಪ್ರಮುಖರು, ಸಾರ್ವಜನಿಕರು ಪಾಲ್ಗೊಂಡು ಸಲಹೆ -ಸೂಚನೆಗಳನ್ನು ನೀಡಿದರು.

Related posts

Leave a Reply