Header Ads
Header Ads
Breaking News

ಪುತ್ತೂರು ನಗರಸಭೆಯ 2019-20ನೇ ಸಾಲಿನ ಬಜೆಟ್ ಮಂಡನೆ

ಪುತ್ತೂರು ನಗರಸಭೆಯ 2019-20ನೇ ಸಾಲಿನಲ್ಲಿ ಒಟ್ಟು 41.87 ಕೋಟಿ ಆದಾಯ, 41.29 ಕೋಟಿ ರೂ. ವ್ಯಯ ಹಾಗೂ 58.87 ಲಕ್ಷ ರೂ. ಮಿಗತೆ ಬಜೆಟ್‍ನ್ನು ನಗರಸಭಾ ಆಯುಕ್ತೆ ರೂಪಾ ಶೆಟ್ಟಿ ಮಂಡಿಸಿದರು. 

ಪುತ್ತೂರು ನಗರಸಭೆ ಕಚೇರಿಯಲ್ಲಿ ನಡೆದ ಆಡಳಿತಾಧಿಕಾರಿಯಾದ ಜಿಲ್ಲಾಧಿಕಾರಿಯವರ ಅನುಮೋದನೆಯಂತೆ 2019-20ನೇ ಸಾಲಿನ ಬಜೆಟ್ ಮಂಡನೆ ಮಾಡಿದರು.

12.48 ಕೋಟಿ ರೂ. ಸ್ವಂತ ಆದಾಯ ನಿರೀಕ್ಷಿಸಲಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರದಿಂದ 17.30 ಕೋಟಿ ಅನುದಾನ ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು. 2019-20ನೇ ಸಾಲಿನಲ್ಲಿ ಸ್ವಂತ ಆದಾಯದಲ್ಲಿ ಕೆಲವೊಂದು ಪ್ರಮುಖ ನಿರೀಕ್ಷಿತ ಆದಾಯಗಳ ವಿವರಗಳನ್ನು ಈ ಸಂದರ್ಭದಲ್ಲಿ ನೀಡಿದರು.

ಈಗಾಗಲೇ ನಗರೊತ್ಥಾನದ ಯೋಜನೆಯ 25 ಕೋಟಿ ಅನುದಾನದಲ್ಲಿ ಸುಮಾರು 22 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಆರು ಬೆದ್ರಾಳ-ಸಾಲ್ಮರ, ಬಲ್ನಾಡು ರಸ್ತೆ ಸೇರಿದಂತೆ ಆರು ಕಾಮಗಾರಿಗಳು ಸಂಪೂರ್ಣಗೊಂಡಿದೆ. ಕೋರ್ಟ್ ರಸ್ತೆಯಲ್ಲಿರುವ ಚಿಣ್ಣರ ಪಾರ್ಕ್‍ನ್ನು ನಿರ್ವಹಣೆಗಾಗಿ ಎನ್‍ಜಿಒ ಒಪ್ಪಿಸುವ ಯೋಜನೆಯಿದೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಲೆಕ್ಕಾಧೀಕ್ಷಕ ಪಿ.ಆರ್.ದೇವಾಡಿಗ ಉಪಸ್ಥಿತರಿದ್ದರು. ಈ ಸಂದರ್ಭ ಎಡಬ್ಲ್ಯುಡಿ ಅರುಣ್, ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *