Header Ads
Header Ads
Breaking News

ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ಉಚಿತ ವೈಫೈ ಸಾರ್ವಜನಿಕರು ಧನಾತ್ಮಕ ವಿಚಾರಗಳಿಗೆ ಉಪಯೋಗಿಸಿ ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಹೇಳಿಕೆ

ಪುತ್ತೂರು: ಇಂಟರ್‌ನೆಟ್ ಯುಗದ ಇಂದಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ತಂತ್ರಜ್ಞಾನದ ಅವಶ್ಯಕತೆಯಿದ್ದು, ಈ ನಿಟ್ಟಿನಲ್ಲಿ ನಗರಸಭಾ ವ್ಯಾಪ್ತಿಯ 7 ಭಾಗಗಳಲ್ಲಿ ಉಚಿತ ವೈಫೈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಸಾರ್ವಜನಿಕರು ಧನಾತ್ಮಕ ವಿಚಾರಗಳಿಗೆ ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಪುತ್ತೂರು ಶಾಸಕಿ ಶಕುಂತಳಾ ಟಿ ಶೆಟ್ಟಿ ಕರೆ ನೀಡಿದರು.ಅವರು ಶನಿವಾರ ಪುತ್ತೂರು ಕ್ಯಾಂಪ್ಕೋ ರೋಟರಿ ಬ್ಲಡ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಕ್ವಾಡ್‌ಜೆನ್ ಮತ್ತು ಬಿಎಸ್‌ಎನ್‌ಎಲ್ ಸಂಸ್ಥೆಯ ಸಹಕಾರದಲ್ಲಿ ಉಚಿತ ವೈಫೈ ಸೇವೆ ಉದ್ಘಾಟಿಸಿದರು. ನನ್ನ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ರೂ. 7.50 ಲಕ್ಷ ವೆಚ್ಚದಲ್ಲಿ 1 ವರ್ಷದ ಅವಧಿಗೆ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದ್ದು, ಬೊಳುವಾರಿನಿಂದ ದರ್ಬೆ ಲ್ಯಾಂಪ್ಸ್ ಸೊಸೈಟಿಯವರೆಗೆ ಇದರ ಪ್ರಯೋಜನ ಸಿಗಲಿದೆ. ದಿನದಲ್ಲಿ ಒಂದು ಸಿಮ್‌ಗೆ ಅರ್ಧ ತಾಸು ವೈಫೈ ಬಳಕೆ ಮಾಡಬಹುದಾಗಿದೆ ಎಂದರು.

ಈ ಸಂದರ್ಭ ವೇದಿಕೆಯಲ್ಲಿ ಬಿಎಸ್‌ಎನ್‌ಎಲ್ ಸಂಸ್ಥೆಯ ಸಹಾಯಕ ಪ್ರಬಂಧಕ ಆನಂದ್, ನಗರಸಭಾ ಸದಸ್ಯ ಶಕ್ತಿ ಸಿನ್ಹಾ, ನಾಮನಿರ್ದೇಶಿತ ಸದಸ್ಯ ಹರ್ಷದ್ ದರ್ಬೆ,ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಜಗಜೀವನ್‌ದಾಸ್ ರೈ ಉಪಸ್ಥಿತರಿದ್ದರು.

Related posts

Leave a Reply