Header Ads
Breaking News

ಪುತ್ತೂರು : ನೂತನ ಗೋದಾಮು ಉದ್ಘಾಟನೆ, ಸೋಲಾರ್ ಯೋಜನೆ ಅನುಷ್ಠಾನ

ನೂತನ ಗೋದಾಮು ಉದ್ಘಾಟನೆ ಮತ್ತು ಸೋಲಾರ್ ಯೋಜನೆ ಅನುಷ್ಠಾನ ಕಾರ್ಯಕ್ರಮವು ಪುತ್ತೂರು ಎಪಿಎಂಸಿ ಮುಖ್ಯ ಪ್ರಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್,

ಕೇಂದ್ರದಲ್ಲಿ ಮೋದಿ ಸರಕಾರ ಬಂದ ಮೇಲೆ ಅಭಿವೃದ್ಧಿಯ ಶಕೆ ಆರಂಭಗೊಂಡಿದೆ. ಕೃಷಿ ಕಾಯಿದೆ ಅನುಷ್ಠಾನ ಮಾಡಿದ್ದರಿಂದ ಯಾವ ಕಾರಣಕ್ಕೂ ರೈತ ಸಮುದಾಯಕ್ಕೆ ಅನ್ಯಾಯವಾಗಿಲ್ಲ. ಎಪಿಎಂಸಿ ದುರ್ಬಲಗೊಂಡಿಲ್ಲ. ಮಧ್ಯವರ್ತಿಗಳ ಹಿಡಿತದಿಂದ ರೈತರನ್ನು ತಪ್ಪಿಸಿ ರೈತರನ್ನೇ ನಿಜವಾದ ಮಾಲೀಕ ಮಾಡಲಾಗಿದೆ ಎಂದು ಹೇಳಿದ್ರು.

ಬಂದರು ಮತ್ತು ಮೀನುಗಾರಿಕಾ ಖಾತೆಯ ಸಚಿವ ಎಸ್. ಅಂಗಾರ ಮಾತನಾಡಿ, ಕೃಷಿಗೆ ಪೂರಕವಾದ ಸವಲತ್ತುಗಳನ್ನು ನೀಡುತ್ತಾ ಹೋದಂತೆ ಕೃಷಿಕರ ಬದುಕಿನ ಉನ್ನತಿಗೂ ಪೂರಕವಾಗುತ್ತದೆ. ಪುತ್ತೂರು ಎಪಿಎಂಸಿಯಲ್ಲಿ ನಡೆಸಲಾದ ಅಭಿವೃದ್ಧಿ ಕಾರ್ಯಕ್ರಮ ಮಾದರಿಯಾಗಿದೆ ಎಂದರು. ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸಿದ್ದರು. ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಎಪಿಎಂಸಿ ಉಪಾಧ್ಯಕ್ಷ ಎನ್. ಎಸ್. ಮಂಜುನಾಥ್, ನಗರಸಭಾ ಅಧ್ಯಕ್ಷ ಜೀವಂಧರ ಜೈನ್, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವಾ, ನಿರ್ದೇಶಕ ಬಾಲಕೃಷ್ಣ ಬಾಣಜಾಲ್, ಎಪಿಎಂಸಿ ಕಾರ್ಯದರ್ಶಿ ರಾಮಚಂದ್ರ ವಕ್ವಾಡಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *