Header Ads
Header Ads
Breaking News

ಪುತ್ತೂರು : ಪಾಪ್ಯುಲರ್ ಫ್ರಂಟ್‍ನಿಂದ ಸ್ಕಾಲರ್‍ಶಿಪ್ ವಿತರಣೆ

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ `ನ್ಯಾಶನಲ್ ಸ್ಕಾಲರ್‍ಶಿಪ್ ಪ್ರೋಗ್ರಾಮ್ 2018-19′ ಸ್ಕಾಲರ್‍ಶಿಪ್ ವಿತರಣೆ ಹಾಗೂ ಅಭಿನಂದನಾ ಸಮಾರಂಭ ಪುತ್ತೂರಿನ ಬೈಪಾಸ್ ಅಶ್ಮಿ ಕಂಫರ್ಟ್ ಹಾಲ್‍ನಲ್ಲಿ ನಡೆಯಿತು.ಮುಖ್ಯ ಅತಿಥಿಯಾಗಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯಾ ಡಿ.ಎನ್ ಮಾತನಾಡಿ ಮುಸ್ಲಿಂ ಸಮುದಾಯದ ಮಂದಿ ಉನ್ನತ ವ್ಯಾಸಾಂಗ ಪಡೆಯುವುದರಲ್ಲಿ ತೀರಾ ಹಿಂದುಳಿದಿರುವ ವಿಚಾರ ವರದಿಗಳ ಮೂಲಕ ತಿಳಿದು ಬಂದಿದ್ದು ಇದು ವಿಷಾಧನೀಯ, ನಮಗೆ ನಾವೇ ಮೊದಲು ಬದಲಾಗಬೇಕು, ನಿರ್ದಿಷ್ಟ ಕನಸು ಇಟ್ಟುಕೊಂಡು ಗುರಿ ಸಾಧಿಸಬೇಕೆಂಬ ಮೈಂಡ್‍ಸೆಟ್ ಅಳವಡಿಸಿಕೊಳ್ಳಬೇಕು ಎಂದರು. ಶಿಕ್ಷಣ ಸಮುದಾಯದ ಹಾಗೂ ಸಮಾಜದ ಅಭಿವೃದ್ಧಿಯ ಪ್ರಮುಖ ಮೆಟ್ಟಿಲಾಗಿದ್ದು ಇಂದು ನೀಡಲ್ಪಡುವ ವಿದ್ಯಾರ್ಥಿವೇತನವು ಶಿಕ್ಷಣದ ಬಗೆಗಿನ ಕಾಳಜಿಯನ್ನು ಎತ್ತಿತೊರಿಸುತ್ತಿದ್ದು ನಿಮ್ಮ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದವರನ್ನು ಯಾವತ್ತೂ ಮರೆಯದಿರಿ ಎಂದು ಕಿವಿಮಾತು ಹೇಳಿದರು.

ಜಿ.ಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ ಮಾತನಾಡಿ ಶಿಕ್ಷಣವೆಂಬುವುದು ಎಲ್ಲರಿಗೂ ಬೇಕಾದ ಮಹತ್ವದ ವಿಚಾರವಾಗಿದ್ದು ಅದನ್ನು ದುಡ್ಡು ಕೊಟ್ಟು ಖರೀದಿಸಲು ಸಾಧ್ಯವಿಲ್ಲ, ಸಾಧನೆ ಮಾಡಬೇಕೆಂಬ ತುಡಿತ, ಹಂಬ, ಛಲ ವಿದ್ಯಾರ್ಥಿಗಳಲ್ಲಿ ಮೂಡಿದಾಗ ಯಶಸ್ಸು ಸಾಧಿಸಬಹುದು, ಶಿಕ್ಷಣದ ವಿಚಾರದಲ್ಲಿ ಕಾಳಜಿ ವಹಿಸುತ್ತಿರುವ ಪಾಪ್ಯುಲರ್ ಫ್ರಂಟ್‍ನ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ರಾಜ್ಯದ 9 ಕಡೆಗಳಲ್ಲಿ 490 ವಿದ್ಯಾರ್ಥಿಗಳಿಗೆ ಸುಮಾರು 30 ಲಕ್ಷ ರೂ ಮೊತ್ತದ ವಿದ್ಯಾರ್ಥಿ ವೇತನವನ್ನು ವಿತರಿಸಲಾಗುತ್ತಿದ್ದು ಪುತ್ತೂರಿನಲ್ಲಿ ಸುಮಾರು 60 ವಿದ್ಯಾರ್ಥಿಗಳಿಗೆ 5 ಲಕ್ಷ ರೂ ಮೊತ್ತದ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. ಸುಕನ್ಯಾ ಡಿ.ಎನ್, ಅನಿತಾ ಹೇಮನಾಥ ಶೆಟ್ಟಿ, ಮುಹಮ್ಮದ್ ಶರೀಫ್, ಉಮೈರಾ ಶರೀಫ್ ಮೊದಲಾದವರು ಸಾಂಕೇತಿಕವಾಗಿ ಸ್ಕಾಲರ್‍ಶಿಪ್ ಚೆಕ್‍ನ್ನು ವಿದ್ಯಾರ್ಥಿಗಳಿಗೆ ವಿತರಿಸಿದರು.

ಅಧ್ಯಕ್ಷತೆ ವಹಿಸಿದ್ದ ಪಿ.ಎಫ್.ಐ ರಾಜ್ಯ ಸಮಿತಿ ಸದಸ್ಯ ಮುಹಮ್ಮದ್ ಶರೀಫ್,
ಪಿಎಫ್‍ಐ ಪುತ್ತೂರು ಜಿಲ್ಲಾಧ್ಯಕ್ಷ ಅಬೂಬಕ್ಕರ್ ರಿಝ್ವಾನ್, ಡಾ.ನಝೀರ್ ಅಹ್ಮದ್, ನಗರಸಭಾ ಸದಸ್ಯೆ ಫಾತಿಮತ್ ಝೊಹರಾ ,ನ್ಯಾಶನಲ್ ವುಮೆನ್ಸ್ ಫ್ರಂಟ್ ಪುತ್ತೂರು ಜಿಲ್ಲಾಧ್ಯಕ್ಷೆ ಉಮೈರಾ ಶರೀಫ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Related posts

Leave a Reply