Header Ads
Header Ads
Header Ads
Breaking News

ಪುತ್ತೂರು ಪುರಭವನ ಪುನರುತ್ಥಾನಕ್ಕೆ ಶಂಕುಸ್ಥಾಪನೆ ಸುಮಾರು 56 ಲಕ್ಷ ರೂ. ವೆಚ್ಚದಲ್ಲಿ ನವೀಕರಣ ಎರಡು ತಿಂಗಳೊಳಗೆ ಕಾಮಗಾರಿ ಪೂರ್ಣ

ಪುತ್ತೂರು: ಐವತ್ತಾರು ಲಕ್ಷ ರೂ. ವೆಚ್ಚದಲ್ಲಿ ಪುತ್ತೂರು ಪುರಭವನವನ್ನು ನವೀಕರಣಗೊಳಿಸಲು ನಗರಸಭೆ ಮುಂದಾಗಿದ್ದು, ಗುರುವಾರ ಸಂಜೆ ಶಂಕುಸ್ಥಾಪನೆ ನಡೆಯಿತು. ನಗರಸಭೆ ಅಧ್ಯಕ್ಷೆ ಜಯಂತಿ ಬಲ್ನಾಡ್ ಮತ್ತು ಉಪಾಧ್ಯಕ್ಷ ವಿಶ್ವನಾಥ ಗೌಡ ಅವರು ತೆಂಗಿನಕಾಯಿ ಒಡೆಯುವ ಮೂಲಕ ಶಂಕುಸ್ಥಾಪನೆ ನೆರವೇರಿಸಿದರು.

ಈ ಸಂದರ್ಭ ನವೀಕರಣ ಕಾಮಗಾರಿಯ ಬಗ್ಗೆ ನಗರಸಭೆಯ ಆಡಳಿತ ಪಕ್ಷದ ಸದಸ್ಯ ಎಚ್. ಮಹಮ್ಮದ್ ಆಲಿ ವಿವರ ನೀಡಿದರು. ಆರು ಲಕ್ಷ ರೂ. ವೆಚ್ಚದಲ್ಲಿ ಆಸನಗಳನ್ನು ನವೀಕರಣ ಮಾಡಲಾಗುವುದು. 50 ಲಕ್ಷ ವೆಚ್ಚದಲ್ಲಿ ಪುರಭವನ ಕಟ್ಟಡದ ಮಾಡು, ಬಾಗಿಲು, ಕಿಟಕಿ, ಶೌಚಾಲಯ, ವೇದಿಕೆ, ಸೀಲಿಂಗ್ ಇತ್ಯಾದಿ ಕಾಮಗಾರಿ ನಡೆಸಲಾಗುತ್ತದೆ. ನೆಲಕ್ಕೆ ಗ್ರನೈಟ್ ಅಳವಡಿಸಲಾಗುತ್ತದೆ. ಅದೇ ರೀತಿ ವೇದಿಕೆಯನ್ನು ಸುಂದರವಾಗಿ ವಿನ್ಯಾಸಗೊಳಿಸಿ, ವಿದ್ಯುತ್ ದೀಪಗಳ ವ್ಯವಸ್ಥೆ ಇನ್ನಷ್ಟು ಆಕರ್ಷಕಗೊಳಿಸಲಾಗುವುದು ಎಂದರು.
ಸುಮಾರು 30 ವರ್ಷಗಳ ಹಿಂದೆ ರೋಟರಿ ಸಂಸ್ಥೆಯವರು ಸಾರ್ವಜನಿಕರ ಸಹಕಾರದೊಂದಿಗೆ ಈ ಪುರಭವನ ನಿರ್ಮಿಸಿದ್ದರು. ಕಾರ್ಯಕ್ರಮಗಳಿಗೆ ನ್ಯಾಯಯುತ ಬಾಡಿಗೆ ಪಡೆಯಲಾಗುತ್ತಿದೆ. ಯಾವುದೇ ಪರಿಸ್ಥಿತಿಯಲ್ಲೂ ಬಾಡಿಗೆ ಹೆಚ್ಚಿಸಿಲ್ಲ. ಇಲ್ಲಿನ ಜಾಗವನ್ನು ಪೂರ್ತಿಯಾಗಿ ಕಿಲ್ಲೆ ಮೈದಾನಕ್ಕೆ ಬಿಟ್ಟು ಬೇರೆಲ್ಲಾದರೂ ಪುರಭವನ ನಿರ್ಮಿಸುವ ಬಗ್ಗೆ ಯೋಚಿಸಲಾಗಿತ್ತು. ಆದರೆ ಸ್ಥಳಾವಕಾಶದ ಕೊರತೆಯ ಕಾರಣ ಈಗ ಇದನ್ನೇ ನವೀಕರಣ ಮಾಡಲು ನಿರ್ಧರಿಸಲಾಗಿದೆ. ಆದಷ್ಟು ಶೀಘ್ರ ಕಾಮಗಾರಿ ಮುಗಿಸಿ ಉದ್ಘಾಟಿಸಲಾಗುವುದು. ನಂತರ ಬಾಡಿಗೆ ಪರಿಷ್ಕರಣಗೆ ಸಾರ್ವಜನಿಕರ ಅಭಿಪ್ರಾಯ ಪಡೆದು ನಿರ್ಧರಿಸಲಾಗುವುದು ಎಂದವರು ನುಡಿದರು.
ನಗರಸಭೆಯ ಪೌರಾಯುಕ್ತರಾದ ರೂಪಾ ಶೆಟ್ಟಿ, ಸದಸ್ಯರಾದ ರಾಜೇಶ್ ಬನ್ನೂರು, ವಿನಯ ಭಂಡಾರಿ, ರಾಮಣ್ಣ ಗೌಡ ಹಲಂಗ, ಸುಂದರ ಪೂಜಾರಿ ಬಡಾವು, ಮುಕೇಶ್ ಕೆಮ್ಮಿಂಜೆ, ಉಷಾ ಧನಂಜಯ ಆಚಾರ್ಯ, ಸ್ವರ್ಣಲತಾ ಹೆಗ್ಡೆ, ಶೈಲಾ ಪೈ, ಝೋಹಾರಾ ನಿಸಾರ್, ವಾಣಿ ಶ್ರೀಧರ್, ಜಯಲಕ್ಷ್ಮೀ ಸುರೇಶ್, ಮಹೇಶ್, ಪ್ರಮುಖರಾದ ಝೇವಿಯರ್ ಡಿಸೋಜ, ಎ.ಬಿ. ವೇಗಸ್, ಎ.ಜೆ. ರೈ, ಪದ್ಮನಾಭ ಶೆಟ್ಟಿ, ದಿನೇಶ್ ಭಟ್, ನಗರಸಭೆ ಅಧಿಕಾರಿಗಳು ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಪುರಭವನದ ಮುಂಭಾಗದಲ್ಲಿ ಧಾರ್ಮಿಕ ವಿಧಿವಿಧಾನ ನಡೆದು, ಭೂಮಿ ಪೂಜೆ ನೆರವೇರಿಸಲಾಯಿತು.

ವರದಿ: ಅನೀಶ್ ಪುತ್ತೂರು

Related posts

Leave a Reply