Header Ads
Breaking News

ಪುತ್ತೂರು ಪೇಟೆಯಾದ್ಯಂತ ರೋಗ ನಿರೋಧಕ ಶಕ್ತಿಯ ಆಯರ್ವೇದಿಕ್ ಮಾತ್ರೆ ವಿತರಿಸಿದ ಬಿಜೆಪಿ ಕಾರ್ಯಕರ್ತರು

ಆಯುಷ್  ಇಲಾಖೆಯಿಂದ ನೀಡಲಾಗುವ ರೋಗ ನಿರೋಧಕ ಶಕ್ತಿಯ ಆಯರ್ವೇದಿಕ್ ಮಾತ್ರೆಗಳನ್ನು ಪುತ್ತೂರು ಪೇಟೆಯಾದ್ಯಂತ ವಿತರಿಸಲು ಆರಂಭಿಸಲಾಗಿದೆ. ಶಾಸಕ ಸಂಜೀವ ಮಠಂದೂರು ಸ್ವತಹ ಕೆಲವು ಗಂಟೆಗಳ ಕಾಲ ಆಯುರ್ವೇದ ವೈದ್ಯರಂತೆ ತಾವು ಭೇಟಿ ನೀಡಿದ ಮನೆಗಳ ಸದಸ್ಯರಿಗೆ ಮಾತ್ರೆ ಬಳಸುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಮುಖ್ಯವಾಗಿ ಹಿರಿಯ ನಾಗರಿಕರಿಗೆ ಹಾಗೂ ದೈಹಿಕ ಸಾಮಥ್ರ್ಯ ಹೀನರಿಗೆ ಈ ಮಾತ್ರಗಳನ್ನು ವಿತರಿಸಲು ತೀರ್ಮಾನಿಸಲಾಗಿದೆ. ಪುತ್ತೂರು ನಗರಸಭಾ ವ್ಯಾಪ್ತಿಯ 31 ವಾರ್ಡ್ ಗಳಲ್ಲಿ ಒಟ್ಟು 1 ಲಕ್ಷ ಜನರಿಗೆ ಈ ಮಾತ್ರೆಗಳನ್ನು ವಿತರಿಸಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಸೂಚನೆಯಂತೆ ಹಳ್ಳಿ ಮದ್ದುಗಳನ್ನೇ ಬಳಸಿ ಕೊರೊನಾದಿಂದ ಮುಕ್ತರಾಗುವ ನಿಟ್ಟಿನಲ್ಲಿ ರಾಜ್ಯ ಸರಕಾರದ ಆಯುಷ್  ಇಲಾಖೆ ಮೂಲಕ ನೀಡಲಾಗುವ ಈ ಮಾತ್ರೆಗಳನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದು ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ. ಅಲ್ಲದೆ ಪುತ್ತೂರಿನ ಡಾ.ಗಿರಿಧರ್ ಕಜೆಯರು ತಯಾರಿಸಿದ ಕೊರೊನಾ ಬರದಂತೆ ತಡೆಯುವ ಮಾತ್ರೆಗಳನ್ನು ಜನರಿಗೆ ವಿತರಿಸುವ ಕೆಲಸ ಆಗಬೇಕಿದೆ. ಈ ನಿಟ್ಟಿನಲ್ಲಿ ಗಿರಿಧರ್ ಕಜೆಯವರ ಸಹೋದರರ ಜೊತೆ ಮಾತುಕತೆ ನಡೆಸಿದ್ದು, ಪುತ್ತೂರಿನ ಜನತೆಗೆ ಬೇಕಾಗುವ ಮಾತ್ರಗಳನ್ನು ಪೂರೈಸಲು ಕ್ರಮ ಕೈಗೊಳ್ಳುವ ಭರವಸೆಯನ್ನು ಅವರು ನೀಡಿದ್ದಾರೆ ಎಂದು ಶಾಸಕರು ಮಾಹಿತಿ ನೀಡಿದ್ದಾರೆ.

Related posts

Leave a Reply

Your email address will not be published. Required fields are marked *