Header Ads
Header Ads
Breaking News

ಪುತ್ತೂರು ಪ್ರತಿಷ್ಟಿತ ಚಿನ್ನಾಭರಣ ಮಳಿಗೆಯಲ್ಲಿ ಕೃಷಿಯೋತ್ಸವ ಕೃಷಿಕರಲ್ಲಿ ಆಶಾಭಾವನೆ ಮೂಡಿಸಿದ ಮುಳಿಯ ಕೃಷಿಯೋತ್ಸವ

ಪುತ್ತೂರು: ಪುತ್ತೂರು ಅಂದಾಕ್ಷಣ ನೆನಪಿಗೆ ಬರೋದು ಚಿನ್ನಾಭರಣ ಖರೀದಿಗೆ ಹೆಸರುವಾಸಿಯಾದ ಚಿನ್ನಾಭರಣ ಮಳಿಗೆಗಳು. ಅದರಲ್ಲೂ ಮುಳಿಯ ಜುವೆಲ್ಲರಿ ಮಳಿಗೆ 1944ಪ್ರಾರಂಭಗೊಂಡು ಗ್ರಾಹಕರಲ್ಲಿ ವಿಶ್ವಾಸವನ್ನು ಗಳಿಸಿಕೊಳ್ಳುವಲ್ಲಿ ಯಶಸ್ಸಿಯಾಗಿದೆ. ಈ ಸಂಸ್ಥೆ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡಿಕೊಳ್ಳುತ್ತಲೂ ಬಂದದೆ. ಈ ಬಾರಿಯ ಸಾಮಾಜಿಕ ಚಟುವಟಿಕೆ ಯಾವುದು ? ನೀವೀಗ ನೊಡುvತ್ತಿರುವುದು ಪುತ್ತೂರಿನ ಪ್ರತಿಷ್ಟಿತ ಚಿನ್ನಾಭರಣ ಮಳಿಗೆ ಮುಳಿಯ ಜುವೆಲ್ಲರ್‍ಸ್ ..1944ರಲ್ಲಿ ಪ್ರಾರಂಭಗೊಂಡ ಈ ಸಂಸ್ಥೆ ಗ್ರಾಹಕರ ಜೊತೆ ಪಾರದರ್ಶಕ ವ್ಯವಹಾರವನ್ನು ನಡೆಸುತ್ತಿರುವುದರಿಂದ ಇಂದಿಗೂ ಗ್ರಾಹಕರೊಂದಿಗೆ ಉತ್ತಮ ಬಾಂಧ್ಯವ್ಯವನ್ನು ಹೊಂದಿದೆ ಈ ಚಿನ್ನಾಭರಣ ಮಳಿಗೆ.ಮುಳಿಯ ಜುವೆಲ್ಲರಿಯಲ್ಲಿ ನಿಮ್ಮ ಮನಕೊಪ್ಪುನ ನವೀನ ವಿನ್ಯಾಸಗಳ ಜುವೆಲ್ಲರಿ ಲಭ್ಯವಿದೆ. ನಿಮ್ಮ ಮನೆಯ ಯಾವುದೇ ಶುಭ ಸಂದರ್ಭಗಳಿಗೆ ಹೊಸತನದ ಚಿನ್ನಾಭರಣ ಖರೀದಿಗೆ ನೀವು ಬಯಸುತ್ತಿದ್ದರೆ ಮುಳಿಯ ಜುವೆಲ್ಲರಿ ಪುತ್ತೂರಿಗೆ ಭೇಟಿ ನೀಡಬಹುದು. ಇಲ್ಲಿ ಅನಾದಿ ಕಾಲದ ಜಾನಪದ ಸಂಗ್ರಹದಿಂದ ಆರಂಭಗೊಂಡು ನವೀನ ಮಾದರಿಯ ಚಿನ್ನಾಭರಣಗಳ ವರೆಗೆ ವೆರೈಟಿ ಡಿಸೈನ್ಸ್ ಲಭ್ಯವಿದೆ. ಮುಳಿಯ ಕೇಶವ ಭಟ್ & ಸನ್ಸ್ ಚಿನ್ನಾಭರಣ ಮಳಿಗೆ ಇದೀಗ ವಿಸ್ತಾರವಾಗಿದ್ದು ಇಲ್ಲಿನ ಶಾಖೆಗಳು ಮಡಿಕೇರಿ, ಗೋಣಿಕೊಪ್ಪಲ್, ಬೆಂಗಳೂರು, ಅಲ್ಲದೆ ಇತ್ತೀಚ್ಚೆಗೆ ಬೆಳ್ತಂಗಡಿನಲ್ಲಿಯೂ ತನ್ನ ಶಾಖೆಯನ್ನು ವಿಸ್ತರಿಸಿಕೊಂಡು ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಿದೆ. ಪ್ರತಿಷ್ಠಿತ ಸ್ವರ್ಣಾಭರಣ ಮಳಿಗೆ ಮುಳಿಯ ಜ್ಯವೆಲ್ಸ್ ಸಂಸ್ಥೆ ವಿವಿಧ ಸಾಮಾಜಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದ್ದು, ಅದರ ಒಂದು ಭಾಗವಾಗಿ ಕೃಷಿಕರಿಗೆ ಬೆಂಬಲ ನೀಡುವ ಹಲವು ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾದ ಮುಳಿಯ ಕೃಷಿಕೋತ್ಸವದಲ್ಲಿ ಮಂಗಳವಾರ ತೆಂಗು ಕೃಷಿಯ ಕುರಿತು ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.ಈ ಸಂವಾದದಲ್ಲಿ ಹಲವಾರು ಪ್ರಮುಖ ವಿಚಾರಗಳು ಗಮನ ಸೆಳೆದವು. ಕಾರ್ಯಕ್ರಮವನ್ನು ಮುಳಿಯ ಜ್ಯುವೆಲ್ಸ್‌ನ ನಿರ್ದೇಶಕ ಮುಳಿಯ ಶ್ಯಾಮ್ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು.ಬಳಿಕ ನಡೆದ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಕೃಷಿ ಮಾರುಕಟ್ಟೆ ತಜ್ಞ ಪುರಂದರ್ ಕುಬಣೂರು ಮಾತನಾಡಿ, ಕೃಷಿ ಹೃದಯಗಳನ್ನು ಬೆಸೆಯುವ ಮತ್ತು ಅದರ ಕುರಿತು ಜ್ಞಾನವನ್ನು ನೀಡುವ ಮಹತ್ವದ ಕಾರ್ಯವನ್ನು ಮುಳಿಯ ಜ್ಯುವೆಲ್ಸ್ ಸಂಸ್ಥೆ ಮಾಡುತ್ತಿದೆ. ಕೃಷಿ ಕುಟುಂಬದಲ್ಲಿ ಹುಟ್ಟಿರುವುದು ನನಗೆ ಹೆಮ್ಮೆಯ ವಿಚಾರವಾಗಿದ್ದು, ಕೃಷಿಯನ್ನು ವ್ಯವಹಾರದ ದೃಷ್ಠಿಯಿಂದ ಮಾತ್ರ ನೋಡಬಾರದು. ಕೃಷಿಯಲ್ಲಿ ಮಣ್ಣಲ್ಲಿ ಮಣ್ಣಾಗಿ ಕೆಲಸ ಮಾಡಿದರೆ ಮಾತ್ರ ಫಲ ಉಣ್ಣಲು ಸಾಧ್ಯ. ಇಲ್ಲಿ ಜ್ಞಾನ ಮತ್ತು ಆಸಕ್ತಿ ಬೇಕು. ತೆಂಗನ್ನು ಕಲ್ಪವೃಕ್ಷ ಎಂದು ಪರಿಗಣಿಸಿದರೂ ಅದನ್ನು ನಾವು ಸರಿಯಾಗಿ ಬಳಸಿಲ್ಲ. ಈ ವಿಚಾರದಲ್ಲಿ ಯಾವುದೇ ಮೌಲ್ಯವರ್ಧನೆಯಾಗಿಲ್ಲ. ಸಂಬಂಧಪಟ್ಟ ಇಲಾಖೆಗಳಲ್ಲಿ ಸಿಗುವ ಸವಲತ್ತುಗಳನ್ನು ಬಳಸಿಕೊಂಡು ಮೌಲ್ಯವರ್ಧನೆಯ ಸಾಧ್ಯತೆಯ ಕಡೆಗೆ ನಾವು ಗಮನಹರಿಸಬೇಕು. ಸಿಪಿಸಿಆರ್‌ಐ ಕ್ರಾಪ್ ಪ್ರೊಡಕ್ಷನ್ ವಿಜ್ಞಾನಿ ಮುಖ್ಯಸ್ಥ ಡಾ| ರವಿ ಭಟ್ ಅವರು ತೆಂಗಿನ ಸಾಧ್ಯತೆ, ತೋಟ ನಿರ್ವಹಣೆಗೆ ಕುರಿತು ಮಾತನಾಡಿ, ತೆಂಗನ್ನು ವೈಜ್ಞಾನಿಕವಾಗಿ ಬೆಳೆಯಲು ಏನೇನು ಬೇಕು ಎಂಬುದನ್ನು ನಾವು ಅರಿತುಕೊಳ್ಳಬೇಕು. ಬಹುವಾರ್ಷಿಕ ಬೆಳೆಯಾಗಿರುವ ತೆಂಗು ಕಾಯಿ ಬಿಡಲು ೩ ವರ್ಷ ಬೇಕು. ಈ ಅವಧಿಯಲ್ಲಿ ಸರಿಯಾದ ಆರಂಭಿಕ ಪೋಷಣೆ ಆಗದಿದ್ದರೆ ಬೆಳವಣಿಗೆ ಕುಂಠಿತವಾಗುತ್ತದೆ. ತೆಂಗಿನ ಮರಕ್ಕೆ ತಾಯಿ ಬೇರು ಇಲ್ಲ. ತೆಂಗು ಬೆಳೆಯ ಜೊತೆಗೆ ಇನ್ನಿತರ ಉಪಬೆಳೆಗಳನ್ನು ಬೆಳೆಯುವ ಮೂಲಕ ಸಮಗ್ರ ಕೃಷಿ ಪದ್ಧತಿಯ ಕಡೆಗೆ ಗಮನಕೊಡಬೇಕು ಎಂದು ವಿವರಿಸಿದರು. ಸಿಪಿಸಿಆರ್‌ಐನ ಜೀವ ರಸಾಯನಶಾಸ್ತ್ರ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ| ಕೆ.ಬಿ. ಹೆಬ್ಬಾರ್ ಮಾತನಾಡಿ, ಕೃಷಿಯನ್ನು ಕೇವಲ ಕೃಷಿಯಂತೆ ನೋಡದೆ ಒಳ್ಳೆಯ ಉದ್ದೇಶದಿಂದಲೂ ನೋಡಬೇಕು. ಕೇವಲ ವ್ಯಾವಹಾರಿಕ ದೃಷ್ಠಿಯಲ್ಲಿ ನೋಡದೆ ಕೃಷಿಯ ಕುರಿತು ಆಸಕ್ತಿ ಮೂಡುವಂತ್ತಾಗಬೇಕು. ತೆಂಗಿನ ಎಣ್ಣೆಯಲ್ಲಿ ಕೊಲೆಸ್ಟರಾಲ್ ಅಂಶ ಇದೆ ಎಂಬುದು ಸತ್ಯಕ್ಕೆ ದೂರವಾದ ವಿಚಾರ. ಆದರೆ ನಮ್ಮ ದೇಶದಲ್ಲಿ ತೆಂಗು ಕೃಷಿಯ ಮೌಲ್ಯವರ್ಧನೆಗೆ ಹೆಚ್ಚು ಮಹತ್ವ ನೀಡಿಲ್ಲ. ದೇಶದಲ್ಲಿ ಬೊಂಡದ ನೀರಿಗೆ ಬೇಡಿಕೆ ಬಹಳಷ್ಟು ಹೆಚ್ಚಾಗಿದೆ.ಆದರೆ ನಮ್ಮಲ್ಲಿ ಅಷ್ಟು ಪ್ರಮಾಣದ ಎಳನೀರು ಕಾಯಿ ಉತ್ಪಾದನೆಯಾಗುತ್ತಿಲ್ಲ. 2022 ರ ಅವಧಿಗೆ ತೆಂಗು ಕ್ಷೇತ್ರವನ್ನು ಬೆಳೆಸಲು ಇಲಾಖೆಗಳಿಗೂ ಕೇಂದ್ರ ಸರಕಾರದಿಂದ ಸೂಚನೆ ಇದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಪಾಲ್ಗೊಂಡ ಬೊಂಡ ಐಸ್‌ಕ್ರೀಂನ ಮಾಲಕ ಬೊಂಡ ಕಾಮತ್ ಎಂದು ಹೆಸರಾಗಿರುವ ನಿವೃತ್ತ ಪ್ರಾಧ್ಯಾಪಕ ಸೀತಾರಾಮ ಕಾಮತ್ ಪ್ರಾತ್ಯಕ್ಷಿಕೆಯ ಬೊಂಡವನ್ನು ಬಳಸಿಕೊಂಡು ವಿವಿಧ ಫ್ಲೇವರ್‌ಗಳ ಐಸ್‌ಕ್ರೀಂ ತಯಾರಿಸುವ ಕುರಿತು ತಿಳಿಸಿದರು. ಮನುಷ್ಯನ ಶರೀರಕ್ಕೆ ಬೇಕಾದ22 ಮಿನರಲ್ ಕಂಟೆಂಟ್ ಬೊಂಡದಲ್ಲಿದೆ ಎಂದು ವಿವರಿಸಿದರು. ಬ್ರ್ಯಾಂಡ್ ಮ್ಯಾನೇಜ್‌ಮೆಂಟ್ ಕನ್ಸಲ್‌ಟೆಂಟ್ ವೇಣು ಶರ್ಮಾ ಮಾತನಾಡಿ, ತೆಂಗಿಗೆ ಸಂಬಂಧಪಟ್ಟಂತೆ ಮಾತ್ರ ಕಾಯಿರ್ ಬೋರ್ಡ್, ತೆಂಗು ಬೋರ್ಡ್, ಸಿಪಿಸಿಆರ್‌ಐನಂತಹ ವಿವಿಧ ಸಂಸ್ಥೆಗಳಿವೆ. ಆದರೆ ತೆಂಗು ಬೆಳೆಯ ಮೌಲ್ಯವರ್ಧನೆ ಹೆಚ್ಚಾದಾಗ ತೆಂಗಿಗೆ ವಿಶೇಷ ಮಹತ್ವ ಬರಲಿದೆ ಎಂದರು. ಉದ್ಯಮಿ ಶಿವಶಂಕರ ಭಟ್ ತೆಂಗು ಬೆಳೆಯ ಕುರಿತು ಮಾಹಿತಿ ನೀಡಿದರು.
ಅನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ತಜ್ಞರೊಂದಿಗೆ ಕೃಷಿಕರು ಸಂವಾದ ನಡೆಸಿದರು. ರಾಧಾಕೃಷ್ಣ ಬೆಟ್ಟಂಪಾಡಿ, ಡಾ| ರಾಜೇಶ್ ಬೆಜ್ಜಂಗಳ, ಡಾ| ನರೇಂದ್ರ ರೈ ದೇರ್ಲ ಸೇರಿದಂತೆ ಮತ್ತಿತರರು ಸಂವಾದದಲ್ಲಿ ಪಾಲ್ಗೊಂಡರು.
ಸಂವಾದದಲ್ಲಿ ವ್ಯಕ್ತವಾದ ಅಂಶಗಳು
*ಎಳನೀರಿನ ಮೌಲ್ಯವರ್ಧನೆಯ ಸಂದರ್ಭದಲ್ಲೂ ಕಳಬೆರಕೆಯಾಗುತ್ತಿದೆ ಎಂಬ ಪ್ರಶ್ನೆಗೆ ಆದರೆ ಎಂಬ ಪ್ರಶ್ನೆಗೆ ಡಾ| ಕೆ.ಬಿ. ಹೆಬ್ಬಾರ್ ಸಿಪಿಸಿಆರ್‌ಐನಲ್ಲೂ ಪರಿಶೀಲನೆಯ ವ್ಯವಸ್ಥೆ ಇದೆ ಎಂದು ಉತ್ತರಿಸಿದರು.
*ಕೆಂದಾಳೆ ಔಷಧೀಯ ಗುಣ ಹೊಂದಿದೆ ಎನ್ನುವ ಕುರಿತು ಸಂಶೋಧನೆ ಸಾಭೀತುಪಡಿಸಿಲ್ಲ, ಆದರೆ ಕ್ಯಾನ್ಸರ್‌ನ ಕಿಮೋಥೆರಫಿಯ ಬಳಿಕ ಸುಧಾರಿಸಲು ಔಷಽಯಾಗಿ ಬಳಸಲಾಗುತ್ತಿದೆ
*ತೆಂಗಿನ ಕಾಯಿಯಿಂದ ಹಾಲು -ಮೊಸರು ತಯಾರಿಸುವ ಕುರಿತ ಪ್ರಶ್ನೆಗೆ ಈ ಕುರಿತು ಇನ್ನೂ ಸಂಶೋಧನೆಗಳು ನಡೆದಿಲ್ಲ, ಆದರೆ ವಿದೇಶಗಳಲ್ಲಿ ಹಾಲು, ಮೊಸರಿನ ಬೇರೆ ರೀತಿಯಲ್ಲಿ ಬಳಕೆಯಾಗುತ್ತಿದೆ ಎಂದು ಡಾ.ಕೆ.ಬಿ. ಹೆಬ್ಬಾರ್ ಉತ್ತರಿಸಿದರು.
*ಹಾಸನದ ಗಂಗಾಪಾನಿ ಸೀಯಾಳ ೨೧ ದಿನ ಬಾಳಿಕೆ ಬರುತ್ತದೆ ಎನ್ನುವ ಕುರಿತು ಅಧ್ಯಯನ ನಡೆದಿಲ್ಲ. ಮುಂದಿನ ದಿನಗಳಲ್ಲಿ ಪರಿಗಣಿಸಬಹುದು.
*ತೆಂಗಿನ ಸಿರಿಗೆ ಕಾಡುವ ಕರುವಾಯಿ ಕೀಟ ಗೊಬ್ಬರದ ಮೂಲಕ ಬರುತ್ತದೆ. ಇದನ್ನು ಆರಂಭದಲ್ಲೇಗುರುತಿಸುವ ಕ್ರಮದೊಂದಿಗೆ ನಿಯಂತ್ರಿಸುವ ಅಗತ್ಯವಿದೆ.
*ತೆಂಗಿನ ಮರದ ಬುಡಕ್ಕೆ ಉಪ್ಪು ಹಾಕುವ ಅಗತ್ಯವಿಲ್ಲ.
*ಕೇಂದ್ರ ಸರಕಾರದಿಂದ ತೆಂಗು ಬೆಳೆಗೆ ಪ್ರೋತ್ಸಾಹ ಯೋಜನೆ ಹೀಗೆ ಮೊದಲಾದ ವಿಚಾರಗಳ ಕುರಿತು ಸಂವಾದದಲ್ಲಿ ಅಭಿಪ್ರಾಯ ಬಂತು.
ಕಾರ್ಯಕ್ರಮದಲ್ಲಿ ಶ್ರೀರಾಮ ಆಯಿಲ್ ಮಿಲ್‌ನ ಮಾಲಕ ಶಿವಶಂಕರ ಭಟ್, ಸೀತಾರಾಮ ಕಾಮತ್ ಸೇರಿದಂತೆ ನಾಲ್ಕು ಮಂದಿಯನ್ನು ಸನ್ಮಾನಿಸಿ ಗೌರವಿಸಲಾಯಿತು. ಅಡಿಕೆ ಪತ್ರಿಕೆ ಸಂಪಾದಕ ನಾ. ಕಾರಂತ ಪೆರಾಜೆ ಸಂವಾದದ ಉಪಸಂಹಾರ ಮಾಡಿದರು. ಮುಳಿಯ ಜುವೆಲ್ಸ್‌ನ ಚೇರ್‌ಮೆನ್ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಕೇಶವ ಪ್ರಸಾದ್ ಮುಳಿಯ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಕೃಷ್ಣನಾರಾಯಣ ಮುಳಿಯ ಕಾರ್ಯಕ್ರಮ ಸಂಯೋಜಿಸಿದರು. ಮುಳಿಯ ಶೋರೂಂ ಮ್ಯಾನೇಜರ್ ನಾಮದೇವ್ ಮಲ್ಯ ಸ್ವಾಗತಿಸಿ, ವೇಣುಗೋಪಾಲ್ ಕಾರ್ಯಕ್ರಮ ನಿರೂಸಿದರು.
ಇದೇ ಸಂದರ್ಭದಲ್ಲಿ ಚಿನ್ನೋತ್ಸವದ ಬಂಪರ್ ಡ್ರಾವನ್ನು ಮುಖ್ಯ ಅತಿಥಿ ಡಾ| ಯು.ಪಿ. ಶಿವಾನಂದ ನೆರವೇರಿಸಿದರು. ಮಧ್ಯಾಹ್ನ ವಿಶೇಷ ಆಟಿಕೂಟ ಭೋಜನ ನಡೆಯಿತು. ಸಂವಾದದಲ್ಲಿ ಪಾಲ್ಗೊಂಡು, ಪ್ರಶ್ನೋತ್ತರದಲ್ಲಿ ಭಾಗವಹಿಸಿದವರಿಗೆ ಚಿನ್ನ,ಬೆಳ್ಳಿ ನಾಣ್ಯ ಗೆಲ್ಲುವ ಅವಕಾಶವನ್ನು ಸಂಸ್ಥೆಯ ವತಿಯಿಂದ ಕಲ್ಪಿಸಲಾಗಿತ್ತು.

Related posts

Leave a Reply