Header Ads
Breaking News

ಪುತ್ತೂರು ಬಂಟರ ಭವನದಲ್ಲಿ ನಡೆದ ಸದಾಶಿವಾಭಿನಂದನಾ ಕಾರ್ಯಕ್ರಮ- ರೋಯಲ್ ಗೋಲ್ಡ್ ಪ್ರಶಸ್ತಿ ಪ್ರದಾನ ಸಮಾರಂಭ

ಪುತ್ತೂರು: ಮನಸ್ಸಿನ ಭಾವನೆಗಳಿಗೆ ದಿಕ್ಕುದಿಸೆಗಳನ್ನು ತೋರಿಸುವ ಕೆಲಸಗಳು ಅಂತ;ಕರಣ ಪೂರ್ವಕವಾಗಿ ಮಾಡಬೇಕು. ಬದುಕು ಅಂತರಾಳದ ಭಾವನೆಗಳ ಕ್ರೂಢೀಕರಣ. ಅಂತಹ ಭಾವನಾತ್ಮಕ ವ್ಯಕ್ತಿತ್ವದಿಂದ ಸಮಾಜ ಉನ್ನತಿ ಸಾಧ್ಯವಾಗುತ್ತದೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು.


ಪುತ್ತೂರು ಬಂಟರಭವನದಲ್ಲಿ ನಡೆದ ಸದಾಶಿವಾಭಿನಂದನಾ ಮತ್ತು ರೋಯಲ್ ಗೋಲ್ಡ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದಂಬೆಕ್ಕಾನ ಸದಾಶಿವ ರೈ ದಂಪತಿಗಳನ್ನು ಅಭಿನಂದಿಸಿ ಅವರು ಮಾತನಾಡಿದರು. ಒಳ್ಳೆಯ ಕೆಲಸಗಳನ್ನು ಸಮಾಜ ಗುರುತಿಸುತ್ತದೆ ಎಂಬುವುದಕ್ಕೆ ಈ ಸನ್ಮಾನವೇ ಸಾಕ್ಷಿಯಾಗಿದೆ. ನಾವು ಮಾತನಾಡುವುದಕ್ಕಿಂತ ನಾವು ಮಾಡಿದ ಕೆಲಸಗಳು ಮಾತನಾಡಬೇಕು. ರಾಜಕಾರಣಿಗಳಿಗೆ ಈ ಮಾತು ಹೆಚ್ಚು ಅನ್ವಯವಾಗುತ್ತದೆ ಎಂದು ಅವರು ಹೇಳಿದರು.


ರೋಯಲ್ ಸೌಹಾರ್ದ ಸಹಕಾರಿಯ ನೂತನ ಅಧ್ಯಕ್ಷ ಶ್ರೀನಿವಾಸ್ ಎಂ.ಸಿ., ಸಂಘದ ನೂತನ ಯೋಜನೆಗಳ ಕುರಿತು ಪ್ರಕಟಿಸಿದರು. ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಚಿದಾನಂದ ಮೂರ್ತಿ ಶುಭ ಹಾರೈಸಿದರು. ಸಮಾರಂಭದಲ್ಲಿ ರೋಯಲ್ ಗೋಲ್ಡ್ ಪ್ರಶಸ್ತಿಯನ್ನು ಸಚಿವ ಎಸ್. ಅಂಗಾರ, ಮತ್ತು ಸ್ಥಾಪಕಾಧ್ಯಕ್ಷರಾದ ದಂಬೆಕ್ಕಾನ ಸದಾಶಿವ ರೈ ಅವರನ್ನು ಕೇಂದ್ರ ಸಚಿವರು ಮತ್ತು ವೇದಿಕೆಯಲ್ಲಿದ್ದ ಗಣ್ಯರು ಅವರನ್ನು ಅಭಿನಂದಿಸಿ ಸನ್ಮಾನಿಸಿದರು.


ಪುತ್ತೂರು ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸಿದ್ದರು.ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್,ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪ್‍ಸಿಂಹ ನಾಯಕ್, ರೆ. ವಿಜಯ ಹಾರ್ವಿನ್, ನ್ಯಾಯವಾದಿ ಫಝಲ್ ರಹಿಮಾನ್, ಬಂಟರ ಸಂಘದ ಸಂಚಾಲಕ ದಯಾನಂದ ರೈ ಮನವಳಿಕೆ,ಸಮಿತಿಯ ಗೌರವಾಧ್ಯಕ್ಷ ಎ. ಹೇಮನಾಥ್ ಶೆಟ್ಟಿ, ಉದ್ಯಮಿಗಳಾದ ಗುಣರಂಜನ್ ಶೆಟ್ಟಿ, ಗೋಪಾಲಕೃಷ್ಣ ಹೇರಳೆ, ಕೂರೇಲು ಸಂಜೀವ ಪೂಜಾರಿ, ನಿವೃತ್ತ ಎಜಿಎಂ ಎ.ಜೆ. ರೈ, ಎ.ಕೆ. ಜಯರಾಮ್ ರೈ, ಆನಂದ ರೈ ದೇವಿನಗರ,ಪ್ರಧಾನ ಕಾರ್ಯದರ್ಶಿ ಹಾಗೂ ನ್ಯಾಯವಾದಿ ಮಹೇಶ್ ಕಜೆ, ಕಾರ್ಯದರ್ಶಿ ಯಶವಂತ ಕುಮಾರ್, ರಾಜೇಶ್ ಬೆಜ್ಜಂಗಳ
ಮತ್ತಿತ್ತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *