Header Ads
Header Ads
Breaking News

ಪುತ್ತೂರು: ಮಾರ್ಚ್ 5ರಂದು ಶ್ರೀ ಪಂಚಮುಖೀ ಗಾಯತ್ರೀ , ಗಣಪತಿ, ಆಂಜನೇಯ ಕ್ಷೇತ್ರದ ಪ್ರತಿಷ್ಠಾ ವರ್ಧಂತ್ಯುತ್ಸವ ಕಾರ್ಯಕ್ರಮ

ಪುತ್ತೂರು: ಕೆಮ್ಮಿಂಜೆ ಮರೀಲು ಕರಿಯಾಲ ಗಾಯತ್ರೀ ನಗರದಲ್ಲಿರುವ ಶ್ರೀ ಪಂಚಮುಖೀ ಗಾಯತ್ರೀ , ಗಣಪತಿ, ಆಂಜನೇಯ ಕ್ಷೇತ್ರದ ಪ್ರತಿಷ್ಠಾ ವರ್ಧಂತ್ಯುತ್ಸವ ಕಾರ್ಯಕ್ರಮ ಮಾ.೫ ರಂದು ಜರುಗಲಿದೆ ಎಂದು ಕ್ಷೇತ್ರದ ಗೌರವ ಸಲಹೆಗಾರ ರಮೇಶ್ ಬಾಬು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಬೆಳಿಗ್ಗೆ ದೇವತಾ ಪ್ರಾರ್ಥನೆ, ಕಲಶಾಭಿಷೇಕ, ಪಂಚಮುಖಿ ಗಣಪತಿ, ಆಂಜನೇಯ, ಗಾಯತ್ರಿ ಯಜ್ಞ, ಮಧ್ಯಾಹ್ನ ಮಹಾಪೂಜೆ ಜರುಗಲಿದೆ. ಸಂಜೆ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಕ್ಷೇತ್ರದ ಗರ್ಭಗುಡಿ ನಿರ್ಮಿಸಿದ ಶಿಲ್ಪಿ ಪದ್ಮನಾಭ ಪಿಲಿಗೂಡು ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಬಳಿಕ ವಿದುಷೀ ನಿಶಿತಾ ಪುತ್ತೂರು ಅವರಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ. ಸಂಜೆ ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರಿಂದ ಇಂದ್ರಜಿತು ಕಾಳಗ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕ್ಷೇತ್ರದ ಧರ್ಮದರ್ಶಿ ನರಸಿಂಹ ಶಾಸ್ತ್ರೀ, ಉಸ್ತುವಾರಿ ನಾಗೇಶ್ ಭಟ್ ಕೆ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *