Header Ads
Header Ads
Breaking News

ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಲು ಪಣ,ವಿವಿಧ ಕಾಮಗಾರಿಗಳಿಗೆ ಚಾಲನೆ : ಸಂಜೀವ ಮಠಂದೂರು ಹೇಳಿಕೆ

ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಅಬಿವೃದ್ದಿಯಾಗಬೇಕೆಂಬ ದೃಷ್ಠಿಯಿಂದ ರಾಜ್ಯಸರಕಾರ ಮತ್ತು ಕೇಂದ್ರ ಸರಕಾರದ ಅನುದಾನದಲ್ಲಿ ಸುಮಾರು ಆರು ಕೋಟಿ ಅನುದಾನವನ್ನು ಕಾಲಮಿತಿಯಲ್ಲಿ ಮಾಡಬೆಕೆಂಬ ಉದ್ದೇಶದಿಂದ ನಾಳೆಯಿಂದ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಮಗಾರಿಗೆ ಚಾಲನೆ ನೀಡಲಿದ್ದೇವೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಕಾಮಗಾರಿಯನ್ನು ಒಂದು ವರ್ಷದೋಳಗಾಗಿ ಮುಗಿಸಿ ಲೋಕಾರ್ಪಣೆ ಮಾಡಬೇಕೆಂಬ ಉದ್ದೇಶವನ್ನು ಇಟ್ಟುಕೊಂಡಿದ್ದೇವೆ, ಕಾಲನಿ ರಸ್ತೆ ಅಬಿವೃದ್ದಿ, ಶಾಲೆಗಳ ಕೊಠಡಿ ನಿರ್ಮಾಣ, ಸೇತುವೆ ನಿರ್ಮಾಣ ಹಾಗೂ ಎರಡನೇ ಮಳೆಹಾನಿ ಕಂತಿನ ಅನುದಾನದಲ್ಲಿ ಪುತ್ತೂರು ಉಪ್ಪಿನಂಗಡಿ, ಸೇಡಿಯಾಪು, ಕೆಮ್ಮಾಯಿ ಚತುಷ್ಪತ, ರಾಜ್ಯ ಹೆದ್ದಾರಿ ಅಬಿವೃದ್ಧಿ ಕಾಮಗಾರಿ ನಡೆಯಲಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ನಗರಸಭಾದ್ಯಕ್ಷ ಜೀವಂದರ್ ಜೈನ್, ಆರ್ ಸಿ ನಾರಯಣ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *