Header Ads
Header Ads
Breaking News

ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಡಸ್ಟ್ರಿ ಕನೆಕ್ಟ್ ಐಒಟಿ ಪ್ರಯೋಗಾಲಯ ಸ್ಥಾಪನೆ

ವಿದ್ಯಾರ್ಥಿಗಳಲ್ಲಿ ಅಂತರ್ಗತವಾದ ಕಲ್ಪನೆಗಳಿಗೆ ಮೂರ್ತರೂಪ ನೀಡುವ ನಿಟ್ಟಿನಲ್ಲಿ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಇಂಡಸ್ಟ್ರಿ ಕನೆಕ್ಟ್ ಐಒಟಿ ಪ್ರಯೋಗಾಲಯವನ್ನು ಸ್ಥಾಪಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಎಮ್.ಎಸ್.ಗೋವಿಂದ ಗೌಡ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ವಿದ್ಯಾರ್ಥಿಗಳು ತಮ್ಮಲ್ಲಿರುವ ಆಲೋಚನೆಗಳನ್ನು ರೂಪಾಂತರಿಸಿ ಅದನ್ನೊಂದು ನಿರ್ದಿಷ್ಟ ಉತ್ಪನ್ನವನ್ನಾಗಿ ಮಾರ್ಪಡಿಸಲು ಬೇಕಾದ ಸರ್ವ ಸೌಲಭ್ಯಗಳೂ ಈ ಪ್ರಯೋಗಾಲಯದಲ್ಲಿ ಇರಲಿದೆ ಎಂದ ಅವರು ಕಾಲೇಜಿನಿಂದ ಹೊರ ಬರುವ ವಿದ್ಯಾರ್ಥಿಗಳಲ್ಲಿ ಕೇವಲ ಥಿಯರಿ ಮಾತ್ರ ಗೊತ್ತಿದ್ದು, ಪ್ರಾಕ್ಟಿಕಲ್ ಆಗಿ ತಾವು ಕಲಿತದ್ದನ್ನು ಯಾವ ರೀತಿ ಪ್ರಸ್ತುತಪಡಿಸಬೇಕು ಎನ್ನುವ ಬಗ್ಗೆ ಕಲ್ಪನೆಗಳೇ ಇಲ್ಲದಂತಹ ಸ್ಥಿತಿಯಿದೆ. ಈ ಕಲ್ಪನೆಗೆ ಮೂರ್ತ ರೂಪ ನೀಡುವ ಕಾರ್ಯ ಈ ಪ್ರಯೋಗಾಲಯದಿಂದ ನಡೆಯಲಿದೆ ಎಂದರು.

Related posts

Leave a Reply