Header Ads
Header Ads
Header Ads
Breaking News

ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಬಿಜೆಪಿ ಸೇರುವ ವಿಚಾರ ಕಾಂಗ್ರೆಸ್ ಪಕ್ಷದಲ್ಲಿ ನನಗೆ ಗೌರವದ ಸ್ಥಾನ ಸಿಕ್ಕಿದೆ

ವಿಟ್ಲ: ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಅವರು ಬಿಜೆಪಿ ಪಕ್ಷಕ್ಕೆ ಸೇರುತ್ತಾರೆ ಎಂಬ ಸುದ್ದಿಗೆ ಶಾಸಕಿ ಸ್ಪಷ್ಟನೆ ನೀಡಿ ನಾನು ಕಾಂಗ್ರೆಸ್‌ನಿಂದ ಮತ್ತೆ ಬಿಜೆಪಿಗೆ ಹೋದರೆ “ಸ್ವಾಭಿಮಾನಿ ಶಕುಂತಳಾ ಶೆಟ್ಟಿ” ಎಂಬ ಹೆಸರಿಗೆ ಅರ್ಥವಿಲ್ಲ ಎಂದು ತಿಳಿಸಿದ್ದಾರೆ.

ವಿಟ್ಲದಲ್ಲಿ ಮಾದ್ಯಮದವರ ಜತೆ ಮಾತನಾಡಿದ ಅವರು ನಾನು ಕಾಂಗ್ರೆಸ್ ಏಕೆ ಬಿಡಬೇಕು? ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷದಲ್ಲಿ ಆರು ಮಂದಿ ಆಕಾಂಕ್ಷಿಗಳಿದ್ದು, ನಾನು ಬಿಜೆಪಿ ಸೇರುತ್ತೇನೆ ಎಂದು ಅವರೇ ಸೃಷ್ಟಿಸಿದ ಕಟ್ಟು ಕಥೆಯಾಗಿದೆ. ಈ ಹಿಂದೆ ನಾನು ಯಾವುದೇ ಪಕ್ಷಕ್ಕೆ ಹೋಗುವ ಇಚ್ಛೆ ಹೊಂದಿದವಳು ನಾನಲ್ಲ. ನನ್ನ ಮಾರ್ಗದರ್ಶಕರಾದ ಉರಿಮಜಲು ರಾಮ್‌ಭಟ್ ಅವರು ನಾನು ಕಾಂಗ್ರೆಸ್‌ಗೆ ಹೋಗಲೇಬೇಕು. ಗೆಲ್ಲಲೆಬೇಕು. ಪುತ್ತೂರಿನಲ್ಲಿ ಮತ್ತೊಮ್ಮೆ ಎದ್ದು ನಿಲ್ಲಬೇಕು ಎಂದು ಹೇಳಿದ್ದರಿಂದ ಕಾಂಗ್ರೆಸ್‌ಗೆ ಸೇರಿದ್ದೇನೆ. ನಾನು ಪಕ್ಷಕ್ಕೆ ಸೇರಿ ಕೇವಲ 30 ದಿನದಲ್ಲಿ ನನಗೆ ಪಕ್ಷದಿಂದ ಬಿ ಫಾರಂ ಸಿಕ್ಕಿದೆ. 18 ಮಂದಿ ಮನವಿ ಸಲ್ಲಿಸಿದ್ದರೂ ನನಗೆ ಮಾತ್ರ ಅವಕಾಶದ ಜತೆಗೆ ಪಕ್ಷದಲ್ಲಿ ನನಗೆ ಗೌರವದ ಸ್ಥಾನ ಸಿಕ್ಕಿದೆ ನಾನು ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

Related posts

Leave a Reply