
ಪಂಚವರ್ಣ ಖ್ಯಾತಿಯ ರಕ್ಷಿತ್ ಮಂಚಿಕಟ್ಟೆ ಸಾಹಿತ್ಯದ ಮಿಥುನ್ ರಾಜ್ ವಿದ್ಯಾಪುರ ಹಾಗೂ ಪವಿತ್ರ ಮಯ್ಯ ಗಾಯನದ ಪುಂಚೊದ ಪುರ್ಸದ ಎಂಬ ತುಳು ಭಕ್ತಿ ಗೀತೆಯು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಹಾಯಕ ಆಯುಕ್ತರು ಆದ ಯತೀಶ್ ಉಳ್ಳಾಲ್ ಅವರು ಲೋಕಾರ್ಪಣೆಗೊಳಿಸಿದರು.ಈ ಸಂದರ್ಭದಲ್ಲಿ ಕ್ಷೇತ್ರದ ಕಾರ್ಯನಿರ್ವಾಣ ಅಧಿಕಾರಿ ರವೀಂದ್ರ, ಉದ್ಯಮಿ ರವಿ ಕಕ್ಕೆಪದವು, ತೊಂಡಚ್ಚನ್ ಇಂಡಸ್ಟ್ರೀಸ್ ಮಾಲಕ ಮನು.ಎಂ ಪಂಜ, ಸಾಹಿತಿ ರಕ್ಷಿತ್ ಮಂಚಿಕಟ್ಟೆ, ಸುಬ್ರಹ್ಮಣ್ಯ ಭಟ್, ಗಣೇಶ್ ಹಾಗೂ ಆಡಳಿತ ಮಂಡಳಿ ಸದಸ್ಯರು, ಕ್ಷೇತ್ರದ ಭಕ್ತಾದಿಗಳು ಉಪಸ್ಥಿತರಿದ್ದರು. ಈ ಹಾಡು ಇಎಸ್ಬಿ ಕ್ರಿಯೇಶನ್ ಪಂಜ ಯುಟ್ಯೂಬ್ ಚಾನೆಲ್ನಲ್ಲಿ ಸಿಗಲಿದೆ.
https://youtu.be/VB9vxGlERWQ