Header Ads
Header Ads
Breaking News

ಪುತ್ತೂರು: ’ಹೊಸ ಮಾರುಕಟ್ಟೆ ಪ್ರಾಂಗಣ’ಅನುಮತಿಗಾಗಿ ಸರ್ಕಾರಕ್ಕೆ ಮನವಿ

ರೈತ ವರ್ಗಕ್ಕೆ ಅನುಕೂಲವಾಗುವಂತೆ ಪುತ್ತೂರು ಎಪಿಎಂಸಿ ವತಿಯಿಂದ ಗ್ರಾಮೀಣ ಭಾಗದಲ್ಲಿ ಹೊಸ ಮಾರುಕಟ್ಟೆ ಪ್ರಾಂಗಣವನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು,10 ಎಕರೆ ಸ್ಥಳವನ್ನು ಈಗಾಗಲೇ ಗುರುತಿಸಲಾಗಿದೆ. ಈ ಬಗ್ಗೆ ಅನುಮತಿಗಾಗಿ ಸರಕಾರಕ್ಕೆ ಮನವಿ ಮಾಡಲಾಗಿದೆ. ಶೀಘ್ರದಲ್ಲಿ ಸ್ಥಳ ಖರೀದಿ ಮಾಡಿ ಹೊಸ ಮಾರುಕಟ್ಟೆ ಪ್ರಾಂಗಣ ನಿರ್ಮಾಣ ಕಾರ್ಯ ನಡೆಸಲಾಗುವುದು ಎಂದು ಎಪಿಎಂಸಿ ಅಧ್ಯಕ್ಷರಾದ ಬೂಡಿಯಾರ್ ರಾಧಾಕೃಷ್ಣ ರೈ ತಿಳಿಸಿದ್ದಾರೆ.

 ಗುರುವಾರ ನಡೆದ ಪುತ್ತೂರು ಎಪಿಎಂಸಿ ಸಾಮಾನ್ಯ ಸಭೆಯಲ್ಲಿ ಈ ವಿಷಯವನ್ನು ಅವರು ಪತ್ರಕರ್ತರಿಗೆ ತಿಳಿಸಿದರು.ಪುತ್ತೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ನಿರ್ಮಾಣವಾಗುವ ಈ ಹೊಸ ಮಾರುಕಟ್ಟೆ ಪ್ರಾಂಗಣದಲ್ಲಿ ಹೆಚ್ಚು ವ್ಯಾಪಾರಿಗಳಿಗೆ ಅನುಕೂಲಕಾರಿ ವ್ಯವಸ್ಥೆ ಕಲ್ಪಿಸಲಾಗುವುದು. ರೈತ ವರ್ಗದ ಜನತೆಗೂ ಇಲ್ಲಿ ಸೌಲಭ್ಯ ಕಲ್ಪಿಸಲಾಗುವುದು. ಈಗಾಗಲೇ 5 ಸ್ಥಳಗಳನ್ನು ಗುರುತಿಸಲಾಗಿದೆ. ಅದರಲ್ಲಿ ಒಂದು ಸ್ಥಳವನ್ನು ಆಯ್ಕೆ ಮಾಡಲಾಗುವುದು. ಉತ್ತಮ ಧಾರಣೆಯಲ್ಲಿ ಸ್ಥಳ ಖರೀದಿ ಮಾಡಿ ಪ್ರಾಂಗಣ ನಿರ್ಮಿಸಲಾಗುವುದು ಎಂದವರು ಹೇಳಿದರು.ಕಳೆದ ವರ್ಷ ಪುತ್ತೂರು ಎಪಿಎಂಸಿ ಯಿಂದ ೬.೫೭ ಕೋಟಿ ತೆರಿಗೆ ಸಂಗ್ರಹವಾಗಿದೆ. ಈ ವರ್ಷ 10 ಕೋಟಿ ತೆರಿಗೆ ಸಂಗ್ರಹದ ಗುರಿ ಹೊಂದಲಾಗಿದೆ.

ಕಳೆದ ಆಗಸ್ಟ್ ತಿಂಗಳಲ್ಲಿ ರೂ.57 ಲಕ್ಷ ತೆರಿಗೆ ಹಾಗೂ ಜುಲೈನಲ್ಲಿ ರೂ 74 ಲಕ್ಷ ತೆರಿಗೆ ಸಂಗ್ರಹ ಮಾಡಲಾಗಿದೆ ಎಂದ ಅವರು ನಬಾರ್ಡ್‌ನಿಂದ ಈಗಾಗಲೇ ರೂ.1 ಕೋಟಿ ಹಣ ಮಂಜೂರಾಗಿದ್ದು, ಇದರಲ್ಲಿ ಹೊಸ ಗೋಡೌನ್ ಒಂದನ್ನು ನಿರ್ಮಿಸಲಾಗುವುದು ಎಂದರು. ರೈಲ್ವೇ ಕ್ರಾಸ್ ಕೆಳಸೇತುವೆ ಕಾಮಗಾರಿಗೆ ರೈಲ್ವೇ ಇಲಾಖೆ ರೂ.8ರಿಂದ 10 ಕೋಟಿ ವೆಚ್ಚವಾಗಲಿದೆ ಎಂದು ತಿಳಿಸಿದೆ. ಇದರಲ್ಲಿ50% ಹಣವನ್ನು ರೈಲ್ವೇ ಇಲಾಖೆ ಭರಿಸಲಿದೆ. ಉಳಿದ50% ಹಣಕ್ಕೆ ನಗರಸಭೆ, ಶಾಸಕರ ಅನುದಾನ ಹಾಗೂ ಲೋಕಸಭಾ ಸದಸ್ಯರ ಅನುದಾನವೂ ದೊರಕಲಿದೆ. ಇದರಲ್ಲಿ ಕಡಿಮೆಯಾಗುವ ಮೊತ್ತವನ್ನು ಪುತ್ತೂರು ಎಪಿಎಂಸಿ ಭರಿಸಲಿದೆ. ಮುಂದಿನ ಒಂದು ವರ್ಷದಲ್ಲಿ ಈ ಕಾಮಗಾರಿ ನಡೆಯಲಿದೆ ಎಂದವರು ತಿಳಿಸಿದರು.ಸಭೆಯಲ್ಲಿ ಉಪಾಧ್ಯಕ್ಷ ಬಾಲಕೃಷ್ಣ ಬಾಣಜಾಲು, ಸದಸ್ಯರಾದ ಪುಲಸ್ತ್ಯ ರೈ, ಅನಿಲ ಕುಶಾಲಪ್ಪ ಗೌಡ, ಕೃಷ್ಣಕುಮಾರ್ ರೈ ಕೆದಂಬಾಡಿ ಗುತ್ತು, ಶಕೂರು ಹಾಜಿ, ತ್ರಿವೇಣಿ ಪೆರ್ವೋಡಿ, ಎಪಿಂಎಸಿ ಕಾರ್ಯದರ್ಶಿ ರಾಮಚಂದ್ರ ಮತ್ತಿತರರು ಭಾಗವಹಿಸಿದ್ದರು.

Related posts

Leave a Reply