Header Ads
Header Ads
Breaking News

ದಲಿತ್ ಸೇವಾ ಸಮಿತಿ ಪುತ್ತೂರು ಶಾಖೆ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ127ನೇ ಜನ್ಮ ದಿನಾಚರಣೆ

ಸಾಮಾನ್ಯಾ ಜನರಿಗೂ ಬದುಕು ಹಕ್ಕು ಒದಗಿಸಿಕೊಟ್ಟು, ನ್ಯಾಯ ಸಿಗುವಲ್ಲಿ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರ ಪಾತ್ರ ಮಹತ್ತರವಾಗಿದೆ. ಈ ನಿಟ್ಟಿನಲ್ಲಿ ಡಾ.ಅಂಬೇಡ್ಕರ್ ಅವರ ಸಂದೇಶ, ವಿಚಾರಧಾರೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಪಿಡುಗಾಗಿರುವ ಮೇಲು-ಕೀಳು ಎಂಬ ಜಾತಿ ಪದ್ಧತಿಗೆ ಇತಿಶ್ರೀ ಹಾಡುವಲ್ಲಿ ಎಲ್ಲರೂ ಪ್ರಯತ್ನಿಸುವ ಅನಿವಾರ್ಯತೆ ಇದೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.ಅವರು ಪುತ್ತೂರಿನ ಸೈನಿಕ ಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ದಲಿತ್ ಸೇವಾ ಸಮಿತಿ ಪುತ್ತೂರು ತಾಲೂಕು ಶಾಖೆ ವತಿಯಿಂದ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಅವರ 127ನೇ ಜನ್ಮ ದಿನಾಚರಣೆ, ಪುತ್ತೂರು ಶಾಖೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ರಕ್ತದಾನ ಶಿಬಿರದಲ್ಲಿ ಡಾ.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.

ಮಂಗಳೂರು ಕೆಟಿಪಿ ಕಾಲೇಜು ಉಪನ್ಯಾಸಕ ಭಾಸ್ಕರ ವಿಟ್ಲ ಅಂಬೇಡ್ಕರ್ ಕುರಿತು ಪ್ರಧಾನ ಭಾಷಣ ಮಾಡಿ, ಇತಿಹಾಸ ಪುಟಗಳಲ್ಲಿ ಅಚ್ಚಳಿಯದೇ ಮರೆಯಲಾರದ ಮಾಣಿಕ್ಯ ಎಂದರೆ ಡಾ.ಅಂಬೇಡ್ಕರ್. ಅಂಬೇಡ್ಕರ್ ಅವರು ನಾಯಕತ್ವದ ಮೇಲೆ ನಂಬಿಕೆ ಇಡದೆ ಸಾಮೂಹಿಕ ನಾಯಕತ್ವದ ಮೇಲೆ ನಂಬಿಕೆ ಇಟ್ಟವರು ಎಂದ ಅವರು, ನಂಬಿಕೆ ಭಯವನ್ನು ಹೋಗಲಾಡಿಸಬೇಕೇ ಹೊರತು ಭಯ ಹುಟ್ಟಿಸುವಂತಾಗಬಾರದು. ಎಂದು ಹೇಳಿದರು.ಈ ಸಂದರ್ಭ ವೇದಿಕೆಯಲ್ಲಿ ಭ್ರಷ್ಟಾಚಾರ ನಿಗ್ರಹದಳ ಅಪರಾಧ ಪತ್ತೆದಳ ಸಂಘಟನೆಯ ರಾಜ್ಯಾಧ್ಯಕ್ಷ ಪ್ರಶಾಂತ್ ರೈ ಮರವಂಜೆ, ಮುಖ್ಯ ಅತಿಥಿ ಆಲಂಕಾರು ಹಿ.ಪ್ರಾ.ಶಾಲಾ ಮುಖ್ಯ ಶಿಕ್ಷಕ ನಿಂಗರಾಜ್ ,ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿ ಸ್ಥಾಪಕ ಜಿಲ್ಲಾಧ್ಯಕ್ಷ ಬಿ.ಕೆ.ಸೇಸಪ್ಪ ಬೆದ್ರಕಾಡು, ರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಜಗದೀಶ್, ದಲಿತ ಸೇವಾ ಸಮಿತಿ ರಾಜ್ಯ ನಾಯಕ ಆನಂದ ಬೆಳ್ಳಾರೆ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿ ಪುತ್ತೂರು ಶಾಖೆ ಅಧ್ಯಕ್ಷ ರಾಜು ಹೊಸ್ಮಠ ವಹಿಸಿದ್ದರು

Related posts

Leave a Reply