Header Ads
Header Ads
Breaking News

ಪುತ್ತೂರಿನ ಶ್ರೀ ದೇವಿ ಬೆಟ್ಟದಲ್ಲಿ ಪ್ರವಾಡ

ಪುತ್ತೂರು ರೈಲ್ವೆ ನಿಲ್ದಾಣ ಬಳಿ ಇರುವ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಶ್ರೀ ದೇವಿ ಬೆಟ್ಟದಲ್ಲಿ ಪವಾಡವೊಂದು ಪ್ರತೀ ವರ್ಷ ನಡೆದುಕೊಂಡು ಬರುತ್ತಿದೆ. ಹೌದು ಇದು ಪುತ್ತೂರಿನ ದೇವಿ ಬೆಟ್ಟದಲ್ಲಿ ನಡೆದಿರೊ ಘಟನೆ. ಪ್ರತಿ ವರ್ಷದ ಕೊನೆಯ ಮಾಸವಾದ ಮೀನಾ ಸಂಕ್ರಮಣದ ದಿನವಾದ ಇಂದು ಪುತ್ತೂರು ಮಹಾಲಕ್ಷ್ಮಿ ದೇವಿಗೆ ಸೂರ್ಯ ದೇವರ ಕಿರಣವು ವರ್ಷಪ್ರತಿಯಂತೆ 7ಗಂಟೆ ಯಿಂದ 7.30ರ ವರೆಗೆ ದೇವಿಯ ಗರ್ಭಗುಡಿಯ ಮೂರು ಬಾಗಿಲುಗಳನ್ನು ದಾಟಿ ಸೂರ್ಯ ದೇವರಿಂದಲೇ ಆರತಿ ಮಾಡಿದಂತೆ ಸ್ಪರ್ಶಿಸಿತು. ಈ ಸಂದರ್ಭದಲ್ಲಿ ಶ್ರೀ ದೇವಿಗೆ ವಿಶೇಷ ಪೂಜೆಯನ್ನು ದರ್ಮದರ್ಶಿಗಳಾದ ಐತಪ್ಪ ಸಪಲ್ಯರು ನೆರವೇರಿಸಿದರು. ವಾಸ್ತು ತಜ್ಞರಾದ ಪಿ.ಜಿ ಜಗನ್ನಿವಾಸ್ ರಾವ್, ಲೋಕೇಶ್ ಹೆಗ್ಡೆ, ಪ್ರಭಾ ಆಚಾರ್ಯ, ವನಿತಾ ತನಿಯಪ್ಪ ಹಾಗು ಹಲವಾರು ಮಂದಿ ಭಕ್ತಧಿಗಳು ಸೂರ್ಯ ದೇವರ ಈ ವಿಶೇಷ ಪೂಜೆಯನ್ನು ನೋಡಿ ಕಣ್ಣುತುಂಬಿ ಪುಳಕಿತಗೊಂಡರು.

Related posts

Leave a Reply

Your email address will not be published. Required fields are marked *