Header Ads
Header Ads
Breaking News

ಪುತ್ತೂರು ದರ್ಬೆಯಲ್ಲಿ ಪದ್ಮಶ್ರೀ ಸೋಲಾರ್ ಸಿಸ್ಟಮ್ಸ್‌ನ ನಾಲ್ಕನೇ ವಿಸ್ತೃತ ಮಳಿಗೆಯ ಉದ್ಘಾಟನಾ ಸಮಾರಂಭ

ಪುತ್ತೂರು ದರ್ಬೆಯ ದುಗ್ಗಮ್ಮ ದೇರಣ್ಣ ಸಭಾಭವನದ ಬಳಿ ಇರುವ ಆರ್.ಇ.ಬಿ.ಎಂಕ್ಲೇವ್‌ನಲ್ಲಿ ಪದ್ಮಶ್ರೀ ಸೋಲಾರ್ ಸಿಸ್ಟಮ್ಸ್‌ನ ನಾಲ್ಕನೇ ವಿಶಾಲ, ವಿನೂತನ ಮಳಿಗೆಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕರ ಅಗಮಿಸಿದ ಗಣ್ಯರು ನೂತನ ಮಳಿಗೆಗೆ ಶುಭ ಹಾರೈಸಿದರು.ನೂತನ ಮಳಿಗೆಯನ್ನು ಸವಣೂರು ವಿದ್ಯಾರಶ್ಮಿಯ ಸಂಚಾಲಕ, ಉದ್ಯಮಿ ಸವಣೂರು ಕೆ.ಸೀತಾರಾಮ ರೈ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಬೇರೆ ಬೇರೆ ಕಂಪೆನಿಗಳ ಮಳಿಗೆಗಳು ಪುತ್ತೂರಿಗೆ ಲಗ್ಗೆಇಡುತ್ತಿರುವ ಇಂದಿನ ದಿನಮಾನದಲ್ಲಿ ಪದ್ಮಶ್ರೀಯಂತಹ ಸೋಲಾರ್ ಸಿಸ್ಟಮ್ಸ್‌ನ ವಿಸ್ತೃತ ಮಳಿಗೆಯ ಅವಶ್ಯಕತೆ ತುಂಬಾ ಇತ್ತು. ಅದು ಈಗ ಪೂರ್ಣಗೊಂಡಿದೆ. ಈಗಾಗಲೇ ಗ್ರಾಹಕರ ಮನಸೂರೆಗೊಂಡಿರುವ ಪದ್ಮಶ್ರೀ ಸಂಸ್ಥೆಯ ಈ ವಿನೂತನ, ವಿಶಾಲ ಮಳಿಗೆಯು ಗ್ರಾಹಕರಿಗೆ ತೃಪ್ತಿದಾಯಕ ಸೇವೆ ನೀಡಲಿ ಎಂದರು.ಪದ್ಮಶ್ರೀ ಸಂಸ್ಥೆಯನ್ನು ನಡೆಸುತ್ತಿರುವ ಕೆದಂಬಾಡಿಗುತ್ತು ಸಹೋದರರು ತಮ್ಮ ಹೆತ್ತವರಾದ ಶ್ರೀಧರ ರೈ ಮತ್ತು ಪದ್ಮಾವತಿ ರೈಯವರ ಹೆಸರಿನಲ್ಲಿ ಪದ್ಮಶ್ರೀ ಸಂಸ್ಥೆಯನ್ನು ತಿಂಗಳಾಡಿಯಲ್ಲಿ ೧೯೯೮ ರಲ್ಲಿ ಹುಟ್ಟು ಹಾಕಿದ್ದಾರೆ. ಇವರ ಪ್ರತಿಯೊಂದು ಸಂಸ್ಥೆಯನ್ನು ಮೊದಲಿಗೆ ಹತ್ತವರಿಂದಲೇ ದೀಪ ಪ್ರಜ್ವಲನೆ ಮಾಡುವ ಮೂಲಕ ಶುಭಾರಂಭಗೊಳಿಸುತ್ತಾರೆ. ಅದರಂತೆ ಪದ್ಮಶ್ರೀ ಸೋಲಾರ್ ಸಿಸ್ಟಮ್ಸ್‌ನ ೪ ನೇ ಶಾಖೆಯನ್ನು ಕೂಡ ಮೊದಲಿಗೆ ಶ್ರೀಧರ ರೈ ಮತ್ತು ಪದ್ಮಾವತಿ ರೈಯವರು ದೀಪ ಪ್ರಜ್ವಲನೆ ಮಾಡುವ ಮೂಲಕ ಶುಭಾರಂಭಗೊಳಿಸಿ ಶುಭಾಶೀರ್ವಾದ ಮಾಡಿದರು.

ಈ ಸಂದರ್ಭದಲ್ಲಿ ಯುವ ಉದ್ಯಮಿ ಸಹಜ್ ರೈ ಬಳಜ್ಜ, ಅಶ್ವಿನ್ ಶೆಟ್ಟಿ, ಅಶ್ಮೀ ಕಂಪರ್ಟ್ಸ್‌ನ ಸಂತೋಷ್ ಕುಮಾರ್ ಶೆಟ್ಟಿ, ರೋ.ಸುರೇಶ್ ಶೆಟ್ಟಿ, ಚಿಕ್ಕಪ್ಪ ನಾಕ್, ಸಚಿನ್ ಟ್ರೇಡರ್‍ಸ್‌ನ ಸಚಿನ್ ನಾಯಕ್, ಅನುರಾಧ ಟ್ರೇಡರ್‍ಸ್‌ನ ನರಸಿಂಹ ಪೈ, ಜಯರಾಮ ರೈ ಮಿತ್ರಂಪಾಡಿ, ಗಣೇಶ್ ರೈ ಮಿತ್ರಂಪಾಡಿ, ಸೂರಜ್ ಶೆಟ್ಟಿ ಸಾಮೆತ್ತಡ್ಕ, ಕೆದಂಬಾಡಿಗುತ್ತು ಸಹೋದರರಾದ ರತ್ನಾಕರ ರೈ ಕೆದಂಬಾಡಿಗುತ್ತು, ವಸಂತ ಕುಮಾರ್ ರೈ ಕೆದಂಬಾಡಿಗುತ್ತು, ಕೃಷ್ಣ ಕುಮಾರ್ ರೈ ಕೆದಂಬಾಡಿಗುತ್ತು, ಸುಜಾತ ಕೃಷ್ಣಕುಮಾರ್, ಕವಿತಾ ವಸಂತ ರೈ, ಪ್ರೀತಿ ರತ್ನಾಕರ ರೈ, ಶೋಭಾ ರಾಜೇಶ್ ಮತ್ತಿತರರು ಸಹಕರಿಸಿದ್ದರು.ಪದ್ಮಶ್ರೀ ಸೋಲಾರ್ ಸಿಸ್ಟಮ್ಸ್‌ನ ಮಾಲಕ ಸೀತಾರಾಮ ರೈ ಕೆದಂಬಾಡಿಗುತ್ತು ಅತಿಥಿಗಳನ್ನು ಸ್ವಾಗತಿಸಿ, ಸತ್ಕರಿಸಿ ಸಹಕಾರ ಕೋರಿದರು.

ಸೋಲಾರ್ ಉತ್ಪನ್ನಗಳು, ಇನ್ವರ್ಟರ್, ಬ್ಯಾಟರಿಗಳ ಮಾರಾಟ ಮತ್ತು ಸರ್ವೀಸ್ ಉದ್ಯಮದಲ್ಲಿ ತನ್ನದೇ ಛಾಪು ಮೂಡಿಸುವ ಮೂಲಕ ಕಳೆದ ೨೧ ವರ್ಷಗಳಿಂದ ಗ್ರಾಹಕರ ಮನಗೆದ್ದಿರುವ ಪದ್ಮಶ್ರೀ ಸೋಲಾರ್ ಸಿಸ್ಟಮ್ಸ್ ಗ್ರಾಹಕ ವಲಯದಲ್ಲಿ ತನ್ನದೇ ಛಾಪು ಮೂಡಿಸಿದೆ. ಬ್ಯಾಟರಿ, ಇನ್ವರ್ಟರ್, ಸೋಲಾರ್ ಇತ್ಯಾದಿ ಗೃಹೋಪಯೋಗಿ ಉತ್ಪನ್ನಗಳನ್ನು ಗ್ರಾಹಕರಿಗೆ ಪೂರೈಸುವ ಮೂಲಕ ಪ್ರಾಮಾಣಿಕ ಹಾಗೂ ಪಾರದರ್ಶಕ ವ್ಯವಹಾರಕ್ಕೆ ಮತ್ತೊಂದು ಹೆಸರು ಎಂಬಂತೆ ಬೆಳೆದ ಸಂಸ್ಥೆಯು ಪ್ರಸ್ತುತ ಪುತ್ತೂರಿನ ದರ್ಬೆಯಲ್ಲಿ ಪ್ರಧಾನ ಶಾಖೆಯನ್ನು ಹೊಂದಿದ್ದು, ತನ್ನ ವ್ಯವಹಾರಿಕ ಕ್ಷೇತ್ರದ ವಿಸ್ತರಣೆಗಾಗಿ ಈಶ್ವರಮಂಗಲ, ಬೆಳ್ಳಾರೆಯಲ್ಲಿ ಶಾಖೆಗಳನ್ನು ಹೊಂದಿದೆ.

ದರ್ಬೆಯ ಬೈಪಾಸ್ ಸರ್ಕಲ್ ಬಳಿಯ ಆರ್.ಇ.ಬಿ ಎಂಕ್ಲೇವ್‌ನಲ್ಲಿ ಆರಂಭಗೊಂಡಿರುವ ಪದ್ಮಶ್ರೀ ಸೋಲಾರ್ ಸಿಸ್ಟಮ್ಸ್‌ನ ೪ ಶಾಖೆಯು ಗ್ರಾಹಕರ ಅನುಕೂಲಕ್ಕಾಗಿ ವಿಶಾಲ ಹಾಗೂ ವಿನೂತನ ಮಳಿಗೆಯಾಗಿದೆ. ಸುಮಾರು 1ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿರುವ ಮಳಿಗೆಯಲ್ಲಿ ಗ್ರಾಹಕರ ಆರಾಮವಾಗಿ ವ್ಯವಹರಿಸಬಹುದಾಗಿದೆ. ಮಳಿಗೆಯು ಬೈಪಾಸ್ ರಸ್ತೆಗೆ ತೆರೆದುಕೊಂಡಂತೆ ಇದ್ದು ವ್ಯವಸ್ಥಿತವಾದ ಪಾರ್ಕಿಂಗ್ ವ್ಯವಸ್ಥೆಯೂ ಇದೆ. ಪದ್ಮಶ್ರೀ ಸೋಲಾರ್ ಸಿಸ್ಟಮ್ಸ್‌ನಲ್ಲಿ ಜಗತ್ಪ್ರಸಿದ್ದ ಕಂಪೆನಿಗಳ ಸೋಲಾರ್, ಸೋಲಾರ್ ವಾಟರ್ ಹೀಟರ್, ಇನ್ವರ್ಟರ್, ಬ್ಯಾಟರಿ, ಸೋಲಾರ್ ಲೈಟಿಂಗ್, ವುಡನ್ ಬ್ಯಾಲರ್, ಗ್ಯಾಸ್ ಗೀಸರ್, ವಾಟರ್ ಪ್ಯೂರಿಫೈಯರ್, ಟ್ಯೂಬ್ಲರ್ ಬ್ಯಾಟರೀಸ್ ಹಾಗೂ ಇನ್ನಿತರ ಗೃಹೋಪಯೋಗಿ ವಸ್ತುಗಳು ವೋಲ್‌ಸೇಲ್ ದರದಲ್ಲಿ ಲಭ್ಯವಿದೆ.

ಶುಭಾರಂಭದ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಆಫರ್‌ಗಳನ್ನು ನೀಡಲಾಗಿದೆ. ಸುಮಾರು 30 ಸಾವಿರ ಬೆಲೆಯ 200 ಎಎಚ್ ಟ್ಯುಬ್‌ಲರ್ ಬ್ಯಾಟರೀಸ್ 1200 ವೋಲ್ಟ್ ಇನ್ವರ್ಟರ್ ವಿದ್ ಟ್ರೋಲಿ ಕೇವಲ 20500 ಹಾಗೂ 200 ಲೀಟರ್ ಸೋಲಾರ್ ವಾಟರ್ ಹೀಟರ್ ಕೇವಲ 16500 ಕ್ಕೆ ಗ್ರಾಹಕರಿಗೆ ಲಭ್ಯವಿದೆ. ಇದಲ್ಲದೆ ಹಲವು ಕೊಡುಗೆಗಳು, ಡಿಸ್ಕೌಂಟ್‌ಗಳು ಲಭ್ಯವಿದೆ.

Related posts

Leave a Reply

Your email address will not be published. Required fields are marked *