Header Ads
Breaking News

ಮಾ.23ರಿಂದ ಪಡುಮಲೆಯಲ್ಲಿ ಅಷ್ಟಮಂಗಲ

*

ಪುತ್ತೂರು: ಶ್ರೀ ಪಡುಮಲೆ ಕೋಟಿಚೆನ್ನಯ ಐತಿಹಾಸಿಕ ಕ್ಷೇತ್ರ ಸಂವರ್ಧನ ಪ್ರತಿಷ್ಠಾನ ಇದರ ನೇತೃತ್ವದಲ್ಲಿ ಪಡುಮಲೆ ಶ್ರೀ ಕೂವೆಶಾಸ್ತಾರ ವಿಷ್ಣು ಮೂರ್ತಿ ದೇವಸ್ಥಾನದ ಸಾನಿಧ್ಯದಲ್ಲಿ ಅಷ್ಟಮಂಗಲ ಪ್ರಶ್ನಾ ಚಿಂತನೆಯು ಮಾ.23 ಮತ್ತು 24ರಂದು ನಡೆಯಲಿದೆ.
ಸುಮಾರು 8 ವರ್ಷಗಳ ಹಿಂದೆ 29 ದಿನಗಳ ಕಾಲ ನಡೆದ ಪ್ರಶ್ನಾ ಚಿಂತನೆಯು ಕಾರಣಾಂತರಗಳಿಂದ ಮುಕ್ತಾಯಕ್ಕೆ ಮುನ್ನವೇ ನಿಂತು ಹೋಗಿತ್ತು.
ಆರಂಭಗೊಂಡಿರುವ ಅಷ್ಟಮಂಗಲ ಪ್ರಶ್ನಾ ಚಿಂತನೆಯನ್ನು ದೈವೀ ಸಂಪ್ರದಾಯದಂತೆ ದೈವಜ್ಞರು ಮುಕ್ತಾಯ ಮಾಡಬೇಕಾದ ಅನಿವಾರ್ಯ ತೆಯಲ್ಲಿ ಪ್ರತಿಷ್ಠಾನದ ನೇತೃತ್ವದಲ್ಲಿ ಮತ್ತು ಸಮಸ್ತ ಭಕ್ತಾದಿಗಳ ಸಹಕಾರದಲ್ಲಿ ಅಷ್ಟಮಂಗಲ ನಡೆಯಲಿದೆ ಎಂದು ಪ್ರತಿಷ್ಠಾನವು ಪ್ರಕಟಣೆಯಲ್ಲಿ ತಿಳಿಸಿದ್ದು ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ವಿನಂತಿಸಿದ್ದಾರೆ.

Related posts

Leave a Reply

Your email address will not be published. Required fields are marked *