Breaking News

ಪುದು ಗ್ರಾಮಸ್ಥರಿಂದ ಗ್ರಾಮ ಪಂಚಾಯತ್ ಮುಂಭಾಗ ಪ್ರತಿಭಟನೆ

ಬಂಟ್ವಾಳ: ಪುದು ಗ್ರಾಮ ಪಂಚಾಯಿತಿ ಕಚೇರಿಯಿಂದ ವರ್ಗವಣೆ ಗೊಂಡಿದ್ದರೂ ನೂತನವಾಗಿ ನೇಮಕಗೊಂಡ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗೆ ಪೂರ್ಣ ಪ್ರಮಾಣದಲ್ಲಿ ಹಿಂದಿನ ಪಿಡಿ‌ಓ ಅಧಿಕಾರ ಬಿಟ್ಟುಕೊಡದ ಕಾರಣ ಸಾರ್ವಜನಕರು ತೊಂದರೆ ಅನುಭವಿಸುತ್ತದ್ದಾರೆ ಎಂದು ಆರೋಪಿಸಿ ಪುದು ಗ್ರಾಮಸ್ಥರು ಗುರುವಾರ ಪುದು ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಪುದು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಈ ಹಿಂದೆ ಪಿಡಿ‌ಓ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುನೀತಾ ಸಾಲ್ಯಾನ್ ಎಂಬವರನ್ನು ಬೇರೆ ಪಂಚಾಯಿತಿಗೆ ವರ್ಗಾವಣೆಗೊಳಿಸಿ ಹೊಸ ಅಭಿವರದ್ದಿ ಅಧಿಕಾರಿಯನ್ನು ನೇಮಕಗೊಳಿಸಿ ತಾ. ಪಂ.ಕಾರ್ಯನಿರ್ವಾಹಣಾಧಿಕಾರಿ ಆದೇಶ ಹೊರಡಿಸಿದ್ದಾರೆ. ಆದರೆ ಹೊಸ ಪಿಡಿ‌ಓ ಕರ್ತವ್ಯಕ್ಕೆ ಹಾಜರಾದರೂ ಹಿಂದಿನ ಪಿಡಿ‌ಓ ಇನ್ನೂ ಅಧಿಕಾರ ಬಿಟ್ಟು ಕೊಡದ ಪರಿಣಾಮ ಪಂಚಾಯಿತಿಗೆ ಭೇಟಿ ನೀಡುವ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ ಎಂದು ಪ್ರತಿಭಟನಕಾರರು ಆರೋಪಿಸಿದ್ದಾರೆ. 9,11 ಮೊದಲಾದ ದಾಖಲೆ ಪತ್ರಗಳಿಗೆ ಗ್ರಾಮಸ್ಥರು ಕಳೆದ ಹವು ದಿನಗಳಿಂದ ಅಲೆದಾಡುತ್ತಿದ್ದರೂ ಪಿಡಿ‌ಓಗಳು ಸತಾಯಿಸುತ್ತಿದ್ದಾರೆ, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಬಂಟ್ವಾಳ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ದಿನೇಶ್ ಕೊಟ್ಟಿಂಜ, ಪ್ರವೀಣ್ ಸುಜೀರು, ಮನೋಜ್ ನಾಣ್ಯ, ನಾಗೇಶ್ ಕೊಟ್ಟಾರಿ, ಗಣೇಶ್ ದತ್ತನಗರ, ಮೊದಲಾದವರು ನೇತೃತ್ವ ವಹಿಸಿದ್ದರು.

Related posts

Leave a Reply