Header Ads
Header Ads
Breaking News

ಪುದು ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾಯಕ್ರಮ .ಕೆನರಾ ಕಾಲೇಜಿನ ಎನ್‌ಎಸ್‌ಎಸ್ ವಿಭಾಗದ ಸಹಯೋಗದೊಂದಿಗೆ ನಡೆದ ಕಾರ್ಯಕ್ರಮ.

ಬಂಟ್ವಾಳ ತಾಲೂಕಿನ ಪುದು ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಮಂಗಳೂರಿನ ಕೆನರಾ ಕಾಲೇಜು ಎನ್‌ಎಸ್‌ಎಸ್ ವಿಭಾಗದ ಸಹಯೋಗದೊಂದಿಗೆ ಭಾನುವಾರ ಸ್ವಚ್ಛತಾ ಕಾಯಕ್ರಮವನ್ನು ಪುದು ಪಂಚಾಯಿತಿ ವ್ಯಾಪ್ತಿಯಲ್ಲಿ ಆಯೋಜಿಸಲಾಯಿತು. ಪಂಚಾಯಿತಿ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಅವರು ಫರಂಗಿಪೇಟೆ ಬಸ್ಸು ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿ.ಪಂ.ಮಾಜಿ ಸದಸ್ಯ ಉಮ್ಮರ್ ಫಾರೂಕ್ ಮಾತನಾಡಿ ಸ್ವಚ್ಛತೆಯ ಅರಿವು ಪ್ರತಿಯೊಬ್ಬ ವ್ಯಕ್ತಿಯ ಮನಸ್ಸಿನಲ್ಲಿ ಮೂಡಬೇಕು. ಆಗ ಮಾತ್ರ ಅದು ಪರಿಪೂರ್ಣವಾಗಿ ಅನುಷ್ಠಾನಗೊಳ್ಳಲು ಸಾಧ್ಯವಿದೆ. ನಮ್ಮ ಮನೆಯ ಕಸವನ್ನು ಇನ್ನೊಂದು ಮನೆಗೆ, ಒಂದು ಪಂಚಾಯಿತಿ ವ್ಯಾಪ್ತಿಯ ಕಸವನ್ನು ಇನ್ನೊಂದು ಪಂಚಾಯಿತಿ ವ್ಯಾಫ್ತಿಗೆ ಎಸೆಯುವ ಮನೋಭಾವ ದೂರವಾಗಬೇಕು ಎಂದರು. ಈ ಸಂದರ್ಭ ಪುದು ಪಂಚಾಯಿತಿ ಉಪಾಧ್ಯಕ್ಷೆ ಲೀಡಿಯೋ ಪಿಂಟೋ, ಮಾಜಿ ಉಪಾಧ್ಯಕ್ಷ ಹಾಶೀರ್ ಪೇರಿಮಾರ್, ಮಾಜಿ ಅಧ್ಯಕ್ಷರಾದ ಪ್ರಕಾಶ್ಚಂದ್ರ ರೈ, ಲಕ್ಷ್ಮೀ, ಸದಸ್ಯರಾದ ಮನೋಜ್ ಆಚಾರ್ಯ, ಜಯಂತಿ, ಆಶಾನಯನ, ಮುಮ್ತಾಝ್, ರಶೀದಾ, ಸುಜಾತ, ರಿಯಾಝ್ ಕುಂಪಣಮಜಲು, ಇಕ್ಬಾಲ್ ಸುಜೀರು, ಹಾಜರಿದ್ದರು. ಬಳಿಕ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಫರಂಗಿಪೇಟೆ ಪರಿಸರದಲ್ಲಿ ಸ್ವಚ್ಛತೆಯ ಜಾಗೃತಿ ಜಾಥ ನಡೆಸಿದರು. ಬಳಿಕ ಬೀದಿ ನಾಟಕ ಪ್ರದರ್ಶಿಸಿದರು. ಪುದು ಪಂಚಾಯಿತಿಯ ಮನೆ ಮನೆಗಳಿಗೆ ತೆರಳಿ ಸ್ವಚ್ಛತೆಯ ಅರಿವು ಮೂಡಿಸಿದರು.

Related posts

Leave a Reply