Header Ads
Header Ads
Breaking News

ಪುರಸಭೆಯ ಜ್ಞಾಪಕಾರ್ಥ `ಸ್ಮಾರಕ’ ಟ್ರ್ಯಾಕ್ಟರ್ : ಕೊಳೆಯುತ್ತಿದೆ ಸಿಡಿಪಿಒ ಇಲಾಖೆಯ ಜೀಪು..!

ಪುತ್ತೂರು; ಸರ್ಕಾರಿ ಆಸ್ತಿಗಳನ್ನು ರಕ್ಷಣೆ ಮಾಡಬೇಕಾದ ಇಲಾಖೆಗಳು ಈ ಗೊಡವೆಗೆ ಹೋಗದ ಪರಿಣಾಮ ಎರಡು ಇಲಾಖೆಗಳಿಗೆ ಸಂಬಂಧಿಸಿದ ವಾಹನಗಳೆರಡು ತುಕ್ಕು ಹಿಡಿದು ಹಾಳಾಗುತ್ತಿವೆ. ಸಂಪೂರ್ಣ ತುಕ್ಕು ಹಿಡಿದಿರುವ ಸ್ಥಿತಿಯಲ್ಲಿ ಪುರಸಭೆಯ ಜ್ಞಾಪಕಾರ್ಥ `ಸ್ಮಾರಕ’ ವಾಗಿ ನಿಂತಿರುವ ಈ ಟ್ರ್ಯಾಕ್ಟರ್ ತನಗೆ ಎಂದು ಮುಕ್ತಿ ಸಿಗುವುದೋ ಎಂದು ಕಾಯುತ್ತಿದೆ. ಈ ಬಗೆಗಿನ ಒಂದು ಸ್ಪೆಷಲ್ ರಿಪೋರ್ಟ್.

ಪುತ್ತೂರು ಪುರಸಭೆಗೆ ಸೇರಿದ ಟ್ರ್ಯಾಕ್ಟರ್ ಒಂದು ಯಾರದೋ ಕಾಲದಲ್ಲಿ ಹಳೆಯ ಕಚೇರಿಯ ಹಿಂಭಾಗದಲ್ಲಿ ನಿಲ್ಲಿಸಲಾಗಿದ್ದು, ಅದರ ಸುತ್ತ ಪೊದೆಗಳ ಬೆಳೆದು ಈ ಪೊದೆಗಳ ನಡುವೆ ಮಾಯವಾಗುವ ಸ್ಥಿತಿಯಲ್ಲಿದೆ. ಕಸ ಸಂಗ್ರಹಣೆಯ ಕೆಲಸದಲ್ಲಿ ಬಳಕೆ ಮಾಡಲಾಗುತ್ತಿದ್ದ ಈ ಟ್ರ್ಯಾಕ್ಟರ್ ದುರಸ್ಥಿ ಮಾಡಲಾರದಷ್ಟು ಕೆಟ್ಟುಹೋಗಿದೆ.

ಕಚೇರಿ ಉಪಯೋಗಕ್ಕೆ ವಾಹನಗಳ ಅನಗತ್ಯವಾದಾಗ ಅದನ್ನು ಏಲಂ ನಡೆಸುವ ಅವಕಾಶವಿದ್ದು, ಅಂದಿನ ಪುರಸಭೆಯಾಗಲೀ ಇಂದಿನ ನಗರಸಭೆಯಾಗಲೀ ಈ ಬಗ್ಗೆ ಚಿಂತನೆಯೇ ನಡೆಸಿಲ್ಲ. ಸರ್ಕಾರದ ಆಸ್ತಿಯೊಂದು ಮಣ್ಣಾಗಿ ಹೋಗುತ್ತಿರುವುದು ಸ್ಥಳೀಯ ಆಡಳಿತ ಸಂಸ್ಥೆಯ ಗಮನದಲ್ಲಿಯೇ ಇಲ್ಲದಂತಾಗಿದೆ.

ಇದೇ ಪುರಸಭೆಯ ಕಟ್ಟಡದ ವಾಹನ ಶೆಡ್ ನಲ್ಲಿ ಸಿಡಿಪಿಒ ಕಚೇರಿಗೆ ಸೇರಿದ ಜೀಪು (ಸಿಎಜಿ 8417) ಕಳೆದ 3 ವರ್ಷಗಳಿಂದ ಮುಕ್ತಿಗಾಗಿ ಕಾಯುತ್ತಿದೆ. ದುರಸ್ಥಿಯಾಗುವ ಸ್ಥಿತಿಯಲ್ಲಿರುವ ಈ ವಾಹನ ಶೆಡ್ ನಲ್ಲಿ ಕೊಳೆಯಲು ಬಿಟ್ಟಿರುವುದು ಅಚ್ಚರಿಗೆ ಕಾರಣವಾಗಿದೆ. ಇನ್ನೇನು ತುಕ್ಕು ಹಿಡಿಯುವ ಸ್ಥಿತಿಗೆ ತಲುಪಿದ್ದರೂ ಸ್ವಲ್ಪ ದುರಸ್ಥಿ ಮಾಡಿದರೆ ವಾಹನ ಒಡಾಟ ನಡೆಸಬಹುದಾದ ಸ್ಥಿತಿಯಲ್ಲಿ ಇದೆ. ಹಾಗಿದ್ದರೂ ಸಿಡಿಪಿಒ ಇಲಾಖೆ ಕನಿಷ್ಟ ಈ ಜೀಪನ್ನು ದುರಸ್ಥಿ ಅಥವಾ ಏಲಂ ಮಾಡುವ ಕ್ರಮಕ್ಕೆ ಮುಂದಾಗಿಲ್ಲ ಎಂಬುವುದು ಜನತೆಯ ಪ್ರಶ್ನೆ.

ಹಿಂದಿನ ಪುರಸಭೆಗೆ ಸೇರಿದ ಟ್ರ್ಯಾಕ್ಟರ್ ಈಗ ಗುಜರಿಗೆ ಹಾಕಲಿಕ್ಕೂ ಉಪಯೋಗ ಇಲ್ಲದಂತಾಗಿದೆ. ಸಿಡಿಪಿಒ ಇಲಾಖೆಯ ಜೀಪು ಕನಿಷ್ಠ ಪಕ್ಷ ಉಪಯೋಗ ಮಾಡುವ ಸ್ಥಿತಿಯಲ್ಲಿದೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಈ ಸರ್ಕಾರದ ಆಸ್ತಿ ಮಣ್ಣಾಗುತ್ತಿರುವುದೇ ಸಾಕ್ಷಿಯಾಗಿದೆ. ಬಹುಷ ಇದನ್ನು ಏಲಂ ಮಾಡಿದ್ದರೂ ಈ ಇಲಾಖೆಗಳಿಗೆ ಆರ್ಥಿಕ ಪ್ರಯೋಜನವಾಗುತ್ತಿತ್ತು. ಇನ್ನಾದರೂ ಈ ವಾಹನಗಳಿಗೆ ಮುಕ್ತಿ ಕೊಡುವಲ್ಲಿ ಅಧಿಕಾರಿ ವರ್ಗ ಮುಂದಾಗಬೇಕು. 

Related posts

Leave a Reply

Your email address will not be published. Required fields are marked *