Header Ads
Header Ads
Breaking News

ಪುರುಷರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ವಿಟ್ಲದ ಕೊಳ್ನಾಡು ಎಬಿಲಿಟಿ ಫ್ರೆಂಡ್ಸ್ ಸರ್ಕಲ್‌ನಿಂದ ಆಯೋಜನೆ

ವಿಟ್ಲದ ಕೊಳ್ನಾಡು ಎಬಿಲಿಟಿ ಫ್ರೆಂಡ್ಸ್ ಸರ್ಕಲ್ ವತಿಯಿಂದ ಕರೈ ಜಂಕ್ಷನ್‌ನಲ್ಲಿ 60 ಕೆ.ಜಿ ವಿಭಾಗದ ಪುರುಷರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಮಾತನಾಡಿ ನಾನು ಎಲ್ಲ ಜಾತಿ-ಧರ್ಮದ ಜನರನ್ನು ಪ್ರೀತಿ ಮಾಡಿದ್ದೇನೆ. ನಾನು ಯಾರನ್ನೂ ದ್ವೇಷ ಮಾಡಿಲ್ಲ. ಯುವಕರು ತಮ್ಮ ತಮ್ಮ ಜಾತಿ ಧರ್ಮವನ್ನು ಅತ್ಯಂತ ಹೆಚ್ಚು ಪ್ರೀತಿ ಮಾಡಬೇಕು ಹೊರತು ಜಾತಿವಾದಿ ಮತ್ತು ಮತೀಯವಾದಿ ಆಗಬಾರದು. ನನ್ನ ಜಾತ್ಯಾತೀತ ನಿಲುವು ಸ್ಥಿರವಾದುದು. ಅದು ಎಂದಿಗೂ ಮರೆಯಾಗಲ್ಲ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್ ಮಹಮ್ಮದ್, ಕೊಳ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು ಅವರನ್ನು ಸನ್ಮಾನಿಸಲಾಯಿತು. ಲಿಯೋ ವಿಟ್ಲ, ಎಸ್.ಎಂ ಅಬೂಬಕ್ಕರ್, ಅಶ್ರಫ್ ಸಾಲೆತ್ತೂರು, ಚಂದ್ರಹಾಸ, ಫೈಜಲ್, ಮಹೇಂದ್ರನಾಥ ಸಾಲೆತ್ತೂರು, ಮಹಮ್ಮದ್ ಗಝಲ್ ಅವರನ್ನು ಗೌರವಿಸಲಾಯಿತು.ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮಾಧವ ಮಾವೆ, ಕೆ.ಎಂ ಲತೀಫ್ ಪರ್ತಿಪ್ಪಾಡಿ, ಎಚ್.ಎಂ ಖಾಲಿದ್ ಕರೈ, ಚಿತ್ತರಂಜನ್ ಕೆ.ಆರ್, ರಝಾಕ್ ಕುಕ್ಕಾಜೆ, ಅರವಿಂದ ರೈ ಮೂರ್ಜೆಬೆಟ್ಟು,ಮಹಮ್ಮದ್ ಎಸ್.ಕೆ, ಹಸೈನಾರ್ ಸಾಲೆತ್ತೂರು, ಬಶೀರ್ ಕೊಳ್ನಾಡು, ಹಮೀದ್ ಗೋಳ್ತಮಜಲು ಮೊದಲಾದವರು ಉಪಸ್ಥಿತರಿದ್ದರು.
ವರದಿ: ಮಹಮ್ಮದ್ ಆಲಿ ವಿಟ್ಲ

Related posts

Leave a Reply