Header Ads
Header Ads
Breaking News

ಪುಲ್ವಾಮದಲ್ಲಿ ಹುತ್ಮಾತರಾದ ಯೋಧರಿಗೆ ಗೌರವ ಸಮರ್ಪಿಸುವ ನಿಟ್ಟಿನಲ್ಲಿ ರಕ್ತದಾನ ಶಿಬಿರ

ಪುಲ್ವಾಮದಲ್ಲಿ ಹುತ್ಮಾತರಾದ ಯೋಧರಿಗೆ ಗೌರವ ಸಮರ್ಪಿಸುವ ನಿಟ್ಟಿನಲ್ಲಿ ನಗರದ ನಂತೂರಿನಲ್ಲಿರುವ ಶ್ರೀ ಭಾರತೀ ಕಾಲೇಜಿನಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಈ ವೇಳೆ ನೂರಾರು ಮಂದಿ ಶಿಬಿರಾರ್ಥಿಗಳು ರಕ್ತದಾನದಲ್ಲಿ ಪಾಲ್ಗೊಂಡಿದ್ರು.

 ಮಂಗಳೂರಿನ ಹವ್ಯಕ ಸಭಾ, ಶ್ರೀ ಭಾರತಿ ಕಾಲೇಜು ಮತ್ತು ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ಆಶ್ರಯದಲ್ಲಿ ವೆನ್ಲಾಕ್ ಆಸ್ಪತ್ರೆಯ ರಕ್ತನಿಧಿ ಸಹಕಾರದೊಂದಿಗೆ ಬೃಹತ್ ರಕ್ತದಾನ ಶಿಬಿರ ನಡೆಯಿತು ನಗರದ ನಂತೂರಿನಲ್ಲಿರುವ ಶ್ರೀ ಭಾರತೀ ಕಾಲೇಜಿನಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ವೆನ್ಲಾಕ್ ಆಸ್ಪತ್ರೆಯ ರಕ್ತನಿಧಿ ಹಿರಿಯ ವೈದ್ಯಾಧಿಕಾರಿ ಡಾ| ಶರತ್ ಕುಮಾರ್ ಅವರು ಉದ್ಘಾಟಿಸಿದ್ರು. ಈ ವೇಳೆ ಮಾತನಾಡಿದ ಅವರು, ರಕ್ತದಾನ ಎಂಬುವುದು ಸಮಾಜಮುಖಿ ಕಾರ್ಯಕ್ರಮವಿದ್ದಂತೆಕ್ತಿಂತಹ ಸಮಾಜ ಮುಖಿ ಕೆಲಸದಲ್ಲಿ ತಮ್ಮನ್ನು ತಾವೂ ತೊಡಗಿಸಿಕೊಳ್ಳಬೇಕೆಂದು. ಪ್ರತಿಯೊಬ್ಬರು ವರ್ಷಕ್ಕೆ ಒಮ್ಮೆಯಾದರೂ ರಕ್ತದಾನ ಮಾಡಬೇಕೆಂದು ಅವರು ಹೇಳಿದರು. 

ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ಅಧ್ಯಕ್ಷ ಡಾ|ಮುರಳಿ ಮೋಹನ್ ಚೂಂತಾರು ಮಾತನಾಡಿ,ದೇಶದ ಕಾಯುವ ಯೋಧರನ್ನು ನಾವೂ ದಿನವೂ ಸ್ಮರಿಸಬೇಕು. ದೇಶ ರಕ್ಷಣೆ ಬರೀ ಯೋಧರ ಕರ್ತವ್ಯವಲ್ಲ, ಪ್ರತಿಯೊಬ್ಬ ಪ್ರಜೆಯು ದೇಶದೊಳಗೆ ಜಾಗರೂಕರಾಗಿ ದೇಶ ರಕ್ಷಣೆ ಮಾಡಬೇಕು ಎಂದು ಅವರು ಹೇಳಿದರು.

ಈ ವೇಳೆ ನೌಕದಳದ ನಿವೃತ್ತ ಅಧಿಕಾರಿ, ನಗರದ ಉಪನೋಂದಣಾಧಿಕಾರಿ ರಘುರಾಮ, ಹವ್ಯಕ ಸಭಾ ಅಧ್ಯಕ್ಷ ಬಾಲಸುಬ್ರಹ್ಮಣ್ಯ, ಶ್ರೀ ಭಾರತಿ ಕಾಲೇಜು ಸಮೂಹ ಸಂಸ್ಥೆ ಕಾರ್ಯದರ್ಶಿ ಕೃಷ್ಣ ನೀರಮೂಲೆ, ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *