Header Ads
Header Ads
Breaking News

ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ನುಡಿನಮನ:ಕಾಪುವಿನ ನಾಗರಿಕ ಸಮಿತಿ ನೇತೃತ್ವದಲ್ಲಿ ಕಾರ್ಯಕ್ರಮ

ಕಾಶ್ಮೀರದ ಪುಲ್ವಾಮಾದಲ್ಲಿ ಮಡಿದ ಹುತಾತ್ಮ ಯೋಧರಿಗೆ ಕಾಪು ಪೇಟೆ ನಾಗರಿಕ ಸಮಿತಿಯ ನೇತೃತ್ವದಲ್ಲಿ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ವಾಜಪೇಯಿ ಕಟ್ಟೆಯಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಯೋಧರಿಗೆ ನುಡಿನಮನ ಸಲ್ಲಿಸಲಾಯಿತು.ಯೋಧರ ಬಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಬಳಿಕ ಮಾತನಾಡಿದ ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಉಗ್ರರು ನಮ್ಮ ಸೈನಿಕರ ಮೇಲೆ ನಡೆಸಿರುವ ಹೀನ ಕೃತ್ಯ-ದಾಳಿ ಖಂಡನೀಯವಾಗಿದೆ. ಇಂತಹ ದುರ್ಘಟನೆಯ ಬಗ್ಗೆ ಸರಕಾರ ಕೈಗೆತ್ತಿಕೊಳ್ಳುವ ಯಾವುದೇ ನಿರ್ಧಾರಕ್ಕೂ ನಾವೆಲ್ಲರೂ ಬೆಂಬಲಿಸಬೇಕಿದೆ ಎಂದರು. ಸೈನಿಕ ಸುಬೇದಾರ್ ಅನಂತರಾಮ ರಾವ್ ಪಣಿಯೂರು ಮಾತನಾಡಿ, ಹುತಾತ್ಮ ವೀರ ಯೋಧರಿಗೆ ನುಡಿ ನಮನ ಸಲ್ಲಿಸುವುದು ಅತ್ಯಂತ ಭಾವುಕತೆಯ ಸ್ಪರ್ಷವಾಗಿದೆ. ಇದನ್ನು ನಾವು ಪ್ರತೀ ಮನೆ – ಮನಗಳಲ್ಲಿಯೂ ಮಾಡಬೇಕಿದೆ. ಯೋಧರ ಬಗ್ಗೆ ಕನಿಕರ ಪಡುವುದರ ಬದಲು, ಅವರ ಸಾಧನೆಯ ಬಗ್ಗೆ ಹೆಮ್ಮೆ ಪಡಬೇಕಿದೆ ಎಂದರು.

Related posts

Leave a Reply

Your email address will not be published. Required fields are marked *