Header Ads
Header Ads
Breaking News

ಪುಸ್ತಕಗಳು ಮುಂದಿನ ಜನಾಂಗಕ್ಕೆ ವಿಷಯಗಳನ್ನು ತಿಳಿಸುತ್ತವೆ: ಬಾಹುಬಲಿ ಪ್ರಸಾದ್ ಸಂದೇಶ

ಸಾರ್ವಜನಿಕ ಗ್ರಂಥಾಲಯ ಇಲಾಖೆ, ಜಿಲ್ಲಾ ಕೇಂದ್ರ ಗ್ರಂಥಾಲಯ ಮಂಗಳೂರು ಹಾಗೂ ಶಾಖಾ ಗ್ರಂಥಾಲಯ ಮೂಡುಬಿದಿರೆ ಇದರ ವತಿಯಿಂದ ಗ್ರಂಥಾಲಯ ಸಪ್ತಾಹ ಸಮಾರಂಭವು ಗುರುವಾರ ಆರಂಭಗೊಂಡಿತು. 

ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪಾಧ್ಯಕ್ಷ ಬಾಹುಬಲಿ ಪ್ರಸಾದ್ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿ ಪುಸ್ತಕಗಳು ಮುಂದಿನ ಜನಾಂಗಕ್ಕೆ ವಿಷಯಗಳನ್ನು ತಿಳಿಸುತ್ತವೆ. ಗ್ರಂಥಾಲಯಗಳು ಜನರಲ್ಲಿ ಓದುವ ಅಭ್ಯಾಸವನ್ನು ಬೆಳೆಸುತ್ತವೆ ಮತ್ತು ಹೊಸ ಹೊಸ ವಿಷಯಗಳನ್ನು ಪರಿಚಯಿಸುತ್ತದೆ. ಓದುವಿಕೆಯಿಂದ ಹೊಸ ವಿದ್ವಾಂಸರು ಹುಟ್ಟಿಕೊಳ್ಳುತ್ತಾರೆ ಆದ್ದರಿಂದ ಗ್ರಂಥಾಲಯಗಳನ್ನು ಉಳಿಸಿ ಬೆಳೆಸುವಂತಹ ಕೆಲಸಗಳಾಬೇಕು ಎಂದು ಹೇಳಿದರು.
ಇತಿಹಾಸ ತಜ್ಞ ಡಾ/ಪುಂಡಿಕಾ ಗಣಪಯ್ಯ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಗ್ರಂಥಾಲಯದ ಮಹತ್ವದ ಬಗ್ಗೆ ತಿಳಿಸಿದರು.
ಮೂಡುಬಿದಿರೆ ಶಾಖಾ ಗ್ರಂಥಾಲಯದ ಮೇಲ್ವೀಚಾರಕಿ ರಂಜಿತಾ ಪಡುಮಾರ್ನಾಡು ಗ್ರಂಥಾಲಯದ ವನಿತಾ ಉಪಸ್ಥಿತರಿದ್ದರು.

Related posts

Leave a Reply