Header Ads
Header Ads
Header Ads
Breaking News

ಪುಸ್ತಕದ ಜ್ಞಾನಕ್ಕಿಂತ ಸಾಮಾನ್ಯ ಜ್ಞಾನ ಹೆಚ್ಚು ಬೇಕು ಅಧ್ಯಾಪಕ ಡಾ. ರಾಧಾಕೃಷ್ಣ ಬೆಳ್ಳೂರು ಹೇಳಿಕೆ ಕುಂಜತ್ತೂರು ಶಾಲೆಯಲ್ಲಿ ನಡೆದ ವಿಶೇಷ ಕಾರ್ಯಕ್ರಮ

ಮಂಜೇಶ್ವರ: ಪ್ರಸ್ಥುತ ಕಾಲದಲ್ಲಿ ಓದು ಕಡಿಮೆಯಾಗುತ್ತಿದೆ ಎಂಬ ಕೂಗು ಕೇಳಿ ಬರುತ್ತಿದೆ. ಆದರೆ ಓದುವಿಕೆ ಕಡಿಮೆಯಾಗಿಲ್ಲ. ಸಾಮಾನ್ಯ ಓದುವಿಕೆ ಮಾತ್ರ ಸ್ವಲ್ಪ ಕಡಿಮೆಯಾಗಿದೆ. ಅ ಓದುಗರನ್ನು ಟಿ ವಿ ಧಾರವಾಹಿಗಳು ತನ್ನತ್ತರ ಸೆಳೆದು ಕೊಂಡಿದೆ. ಉಳಿದಂತೆ ಗಂಭೀರ ಓದುವಿಕೆ ಕಮ್ಮಿಯಾಗಿಲ್ಲ ಎಂದು ಸರಕಾರಿ ಕಾಲೇಜಿನ ಅಧ್ಯಾಪಕ ಡಾ. ರಾಧಾಕೃಷ್ಣ ಬೆಳ್ಳೂರು ಹೇಳಿದರು.


ಈ ಕಾರ್ಯಕ್ರಮ ಮಕ್ಕಳಿಗೆ ಓದುವಿಕೆಯ ಹವ್ಯಾಸವನ್ನು ಬೆಳೆಸುವ ಉದ್ದೇಶದಿಂದ ಐವತ್ತು ಪುಸ್ತಕಗಳನ್ನು ಎ ಇ ಒ ಶೆ‌ಈ ದಿನೇಶನ್ ವಿ. ಶಾಲಾ ಮುಖ್ಯೋಪದ್ಯಾಯರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಶಾಲಾ ಮುಖ್ಯೋಪಧ್ಯಾಯರು, ರಕ್ಷಕ ಶಿಕ್ಷಕ ಸಂಘದ ಪದಾಧಿಕಾರಿಗಳು, ಇತರ ಉಪಾಧ್ಯಾಯರುಗಳು ಸೇರಿದಂತೆ ಹಲವರು ಉಪಸ್ಥರಿದ್ದರು. ಈ ಸಂದರ್ಭ ಉದ್ಯಾವರ ದ ಪುಸ್ತಕ ಸಂಗ್ರಹಕಾರ ಶ್ರೀ ಸುರೇಂದ್ರರವರನ್ನು ಸ್ಮರಣಿಕೆ ನೀಡಿ ಸನ್ಮನಿಸಲಾಯಿತು. ಬಿ ಆರ್ ಸಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗಾಗಿ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಮಾಣ ಪತ್ರಗಳನ್ನು ನೀಡಿ ಅಭಿನಂದಿಸಲಾಯಿತು. ಬಳಿಕ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.

ವರದಿ: ರೆಹಮಾನ್ ಉದ್ಯಾವರ

Related posts

Leave a Reply