Breaking News

ಪೂನಾದಲ್ಲಿ ನಡೆದ 34ನೇ ರಾಷ್ಟ್ರೀಯ ಸಬ್ ಜೂನಿಯರ್ ಈಜು, ದಾಖಲೆಯೊಡನೆ ಚಿನ್ನ ಗೆದ್ದ ಕರ್ನಾಟಕದ ರಿಧಿಮಾ

ಅಮೋಘ ಸಾಮರ್ಥ್ಯ ತೋರಿದ ಕರ್ನಾಟಕದ ರಿಧಿಮಾ ವೀರೇಂದ್ರ ಕುಮಾರ್ ಅವರು ಪುಣೆಯಲ್ಲಿ ಆರಂಭವಾದ 34ನೇ ರಾಷ್ಟ್ರೀಯ ಸಬ್ ಜೂನಿಯರ್ ಈಜು ಚಾಂಪಿಯನ್ಷಿಪ್ನಲ್ಲಿ ಕೂಟ ದಾಖಲೆಯೊಂದಿಗೆ ಚಿನ್ನಕ್ಕೆ ಕೊರಳೊಡ್ಡಿದ್ದಾರೆ.
ಬುಧವಾರ ನಡೆದ ಬಾಲಕಿಯರ ೫೦ ಮೀಟರ್ಸ್ ಬ್ಯಾಕ್ಸ್ಟ್ರೋಕ್ ಸ್ಪರ್ಧೆಯಲ್ಲಿ ರಿಧಿಮಾ ಅವರು ೩೫.೫೧ ಸೆಕೆಂಡುಗಳಲ್ಲಿ ಗುರಿ ಕ್ರಮಿಸಿ ಈ ಸಾಧನೆಯನ್ನು ಮಾಡಿದರು. ಅಸ್ಸಾಂ ರಾಜ್ಯದ ಜಹನಬಿ ಕಶ್ಯಪ್ ಬೆಳ್ಳಿ ತಮ್ಮದಾಗಿಸಿ ಕೊಂಡರು. ಈ ವಿಭಾಗದ ಕಂಚು ಕರ್ನಾಟಕದ ಆಶ್ನಾ ಅಶ್ವಿನ್ ಮತ್ತೂರ್ ಅವರ ಪಾಲಾಯಿತು. ಬಾಲಕರ ೧೦೦ ಮೀಟರ್ಸ್ ಬಟರ್ಫ್ಲೈ ವಿಭಾಗದಲ್ಲಿ ಗೋವಾದ ಸೋಹನ್ ಗಂಗೂಲಿ ಅವರು ಕೂಟ ದಾಖಲೆಯೊಂದಿಗೆ ಚಿನ್ನ ಜಯಿಸಿದರು.
ಬಾಲಕಿಯರ ೫೦ ಮೀಟರ್ಸ್ ಫ್ರೀಸ್ಟೈಲ್ನಲ್ಲಿ ರಾಜ್ಯದ ಸವಾಲು ಎತ್ತಿ ಹಿಡಿದಿದ್ದ ರಿಧಿಮಾ ವೀರೇಂದ್ರ ಕುಮಾರ್ ಬೆಳ್ಳಿಯ ಸಾಧನೆ ಮಾಡಿದರು. ಬಾಲಕಿಯರ ೫೦ ಮೀಟರ್ಸ್ ಬ್ರೆಸ್ಟ್ಸ್ಟ್ರೋಕ್ನಲ್ಲಿ ಸ್ಪರ್ಧಿಸಿದ್ದ ಕರ್ನಾಟಕದ ಸಮರ ಎ ಚಾಕೊ ಬೆಳ್ಳಿ ಗೆದ್ದರು. ಬಾಲಕಿಯರ ೪*೫೦ ಮೀಟರ್ಸ್ ಫ್ರೀಸ್ಟೈಲ್ನಲ್ಲಿ ಆಶ್ನಾ ಅಶ್ವಿನ್ ಮತ್ತೂರ್, ಅವನಿ ವಿಶ್ವಾಸ್, ರಿಷಿಕಾ ಯು. ಮಂಗಳೆ ಮತ್ತು ರಿಧಿಮಾ ವೀರೇಂದ್ರ ಕುಮಾರ್ ಅವರಿದ್ದ ರಾಜ್ಯ ತಂಡ ೨:೧೨.೭೬ಸೆ. ಚಿನ್ನಕ್ಕೆ ಮುತ್ತಿಕ್ಕಿತು.

Related posts

Leave a Reply