Header Ads
Header Ads
Breaking News

ಪೆಟ್ರೋಲ್ ಬಂಕ್‌ಗಳಲ್ಲಿ ಸಾಲ ಮಾಡಿ ಹಣ ಮರುಕಳಿಸದ ಪ್ರಕರಣ:ಮೋಸಗಾರರಿಗೆ ಪೆಟ್ರೋಲ್ ವಿತರಿಸದಿರಲು ನಿರ್ಧಾರ

ಪೆಟ್ರೋಲ್ ಬಂಕ್‌ಗಳಲ್ಲಿ ಡಿಸೇಲ್‌ಗಾಗಿ ಸಾಲ ಮಾಡಿ, ಹಣವನ್ನು ಮರಳಿಸದೆ ಮೋಸ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇಂಥಹ ಮೋಸಗಾರರಿಗೆ ಪೆಟ್ರೋಲ್ ವಿತರಿಸದಿರಲು ಪುತ್ತೂರು ತಾಲೂಕು ಪೆಟ್ರೋಲ್ ಬಂಕ್ ಮಾಲಕರ ಸಂಘ ತೀರ್ಮಾನಿಸಿದೆ.

ಟ್ರಾನ್ಸ್ ಪೋರ್ಟ್ ಕಂಪನಿಗಳು, ಕಟ್ಟಡ ನಿರ್ಮಾಣ ಕಂಪನಿಗಳು, ಬಸ್ ಮಾಲಕರು ಹೀಗೆ ಡಿಸೇಲ್ ಬಳಕೆ ಮಾಡುವ ವಾಹನಗಳ ಮಾಲಕರು ಇಂಥಹ ಮೋಸಗಳನ್ನು ಪೆಟ್ರೋಲ್ ಬಂಕ್ ಗಳಿಗೆ ಮಾಡುತ್ತಿದ್ದಾರೆ. ಒಂದು ಪೆಟ್ರೋಲ್ ಬಂಕ್ ನಲ್ಲಿ ಸಾಲ ಮಾಡಿದ ಬಳಿಕ ಆ ಬಂಕ್ ಗೆ ತೆರಳದೆ, ಇನ್ನೊಂದು ಬಂಕ್ ನಲ್ಲಿ ಡಿಸೇಲ್ ತುಂಬಿಸುವ ಈ ಮೋಸಗಾರರು ಮತ್ತೆ ಆ ಬಂಕ್ ಗೂ ಮೋಸ ಮಾಡುತ್ತಾರೆ. ಹೀಗೆ ಪುತ್ತೂರು ತಾಲೂಕಿನಾದ್ಯಂತ ಇರುವ ಪೆಟ್ರೋಲ್ ಬಂಕ್ ಗಳು ಈ ಮೋಸಗಾರರಿಂದಾಗಿ ನಷ್ಟ ಅನುಭವಿಸುತ್ತಿದೆ. ಇದಕ್ಕೆ ತಡೆಯೊಡ್ಡುವ ನಿಟ್ಟಿನಲ್ಲಿ ಎಲ್ಲಾ ಪೆಟ್ರೋಲ್ ಬಂಕ್ ಮಾಲಕರು ಪರಸ್ಪರ ಈ ರೀತಿಯ ಮೋಸಗಾರರ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳುವ ಮೂಲಕ ಇಂಥವರಿಗೆ ತಮ್ಮ ಪೆಟ್ರೋಲ್ ಬಂಕ್ ನಲ್ಲಿ ತೈಲ ವಿತರಣೆಯನ್ನು ನಿರಾಕರಿಸಲಿದ್ದಾರೆ ಎಂದು ಪುತ್ತೂರು ಪೆಟ್ರೋಲ್ ಬಂಕ್ ಮಾಲಕರ ಸಂಘದ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Related posts

Leave a Reply