Header Ads
Breaking News

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ನೇಣು ಹಗ್ಗ ಪ್ರದರ್ಶಿಸಿ ವಿಶಿಷ್ಟ ಪ್ರತಿಭಟನೆ

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಓಲಾ, ಉಬೆರ್ ಟ್ಯಾಕ್ಸಿ ಚಾಲಕರಿಗೆ ಸರಕಾರ ನಿಗದಿಪಡಿಸಿರುವ ದರ ನೀಡುವಂತೆ ಒತ್ತಾಯಿಸಿ, ನೇಣು ಹಗ್ಗ ಪ್ರದರ್ಶಿಸಿ ವಿಶಿಷ್ಟ ಪ್ರತಿಭಟನೆ ಇಂದು ಮಿನಿ ವಿಧಾನ ಸೌಧದ ಬಳಿ ದ.ಕ ಜಿಲ್ಲಾ ಆನ್ಲೈನ್ ಟ್ಯಾಕ್ಸಿ ಚಾಲಕರ ಸಂಘದ ನೇತೃತ್ವದಲ್ಲಿ ನಡೆಯಿತು. ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಸಂಘದ ಗೌರವಧ್ಯಕ್ಷರಾದ ಬಿ.ಕೆ ಇಮ್ತಿಯಾಜ್ ಅವರು ಕೇಂದ್ರ ಮತ್ತು ರಾಜ್ಯ ಸರಕಾರಗಳು ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ತೆರಿಗೆಯ ಮೇಲೆ ತೆರಿಗೆಯ ಹಾಕಿ ಜನ ಸಾಮಾನ್ಯರ ಜೇಬಿಗೆ ಕನ್ನ ಹಾಕಿದೆ. ಕೋವಿಡ್ ಸಂಕಷ್ಟದಲ್ಲಿರುವ ಚಾಲಕರಿಗೆ ತೈಲ ಬೆಲೆ ಏರಿಕೆಯು ಗಾಯದ ಉಪ್ಪು ಸುರಿದಂತಾಗಿದೆ. ಚಾಲಕರು ದುಡಿಯುವ ದುಡಿಮೆಯು ಪೆಟ್ರೋಲ್ ಡಿಸೇಲ್ ಖರೀದಿಗೆ ಸಾಕಾಗುತ್ತಿಲ್ಲ. ಕಾರಿನ ಸಾಲದ ಕಂತು ಕಟ್ಟಲಾಗದೆ ಕಾರುಗಳನ್ನು ಹಣಕಾಸು ಸಂಸ್ಥೆಗಳು ವಶಕ್ಕೆ ಪಡೆಯುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಚಾಲಕರು ಸಾಮೂಹಿಕ ಆತ್ಮಹತ್ಯೆ ದಾರಿ ಹಿಡಿಯಬಹುದು ಎಂಬ ಆತಂಕ ವ್ಯಕ್ತಪಡಿಸಿದ ಅವರು ಜಿಲ್ಲಾಧಿಕಾರಿಗಳು ಕೂಡಲೇ ಒನ್ಲೈನ್ ರೇಡಿಯೋ ಟ್ಯಾಕ್ಸಿ ಕಂಪೆನಿಯವರನ್ನು ಕರೆಸಿ ಒನ್ಲೈನ್ ಟ್ಯಾಕ್ಸಿಗೂ ಸರಕಾರ ನಿಗದಿ ಪಡಿಸಿದ ದರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷರಾದ ಎನ್.ರವೀಂದ್ರ ಕಾವೂರು, ಮುಖಂಡರಾದ ರಾಕೇಶ್, ಕರುಣಾಕರ, ಕಲೀಮ್ ಮದನಿ, ವೈ ಶಿವ, ರಶೀದ್, ಮುಸ್ತಫಾ, ಅಲ್ತಾಫ್ ಉಳ್ಳಾಲ, ಮುಂತಾದವರು ಉಪಸ್ಥಿತರಿದ್ದರು. ಮುಖಂಡರಾದ ಸಾದಿಕ್ ಕಣ್ಣೂರ್ ಸ್ವಾಗತಿಸಿ, ನೌಶಾದ್ ಕಾವೂರು ಕಾರ್ಯಕ್ರಮ ನಿರ್ವಹಿಸಿದರು.

Related posts

Leave a Reply

Your email address will not be published. Required fields are marked *